ವೇಶ್ಯಾವಾಟಿಕೆ : ಮೈಸೂರು–ಮಡಿಕೇರಿಯಲ್ಲಿ 8 ಮಂದಿ ಬಂಧನ

Posted By:
Subscribe to Oneindia Kannada

ಮೈಸೂರು, ಜುಲೈ 11 : ಹೋಮ್ ಸ್ಟೇನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್‍ಸ್ಪೆಕ್ಟರ್ ಎಚ್.ಎನ್.ಸಿದ್ದಯ್ಯ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ, ತೆಲಂಗಾಣದ 8 ಯುವತಿಯರನ್ನು ರಕ್ಷಿಸಿದೆ.

ವೇಶ್ಯಾವಾಟಿಕೆ ದಂಧೆಗೆ ಕಾರಣರಾಗಿದ್ದ 8 ಪುರುಷರನ್ನು ಬಂಧಿಸಿದೆ. ಪಿರಿಯಾಪಟ್ಟಣ ತಾಲ್ಲೂಕು ಬೈಲಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಒವೈಒ ಹೋಮ್ ಸ್ಟೇ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 3 ಕಾರು ಮತ್ತು 3 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದೆ. ತೆಲಂಗಾಣ ರಾಜ್ಯದ 8 ಹುಡುಗಿಯರನ್ನು ಅದೇ ರಾಜ್ಯದ ಸಾಯಿಕುಮಾರ್ ಮತ್ತು ಮಲ್ಲೇಶ ಎಂಬವರು ವ್ಯಾನ್‍ನಲ್ಲಿ ಕರೆತಂದು ಕೊಪ್ಪ ಮಾರ್ಗದಲ್ಲಿ ಗಿರುಗೂರು ಗ್ರಾಮಕ್ಕೆ ಹೋಗುವ ರಸ್ತೆ ಬದಿ ಒವೈಒ ಹೋಮ್ ಸ್ಟೇನಲ್ಲಿ ಇರಿಸಿರುವ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು.

ಮೈಸೂರಿನಲ್ಲಿ 29 ಲಕ್ಷ ರೂ. ದರೋಡೆ ಪ್ರಕರಣ : ಮೂವರ ಸೆರೆ

Mysore- Madikeri Attack on prostitution crossroads : 8 people arrested

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಹಾಗೂ ಹುಣಸೂರು ಡಿವೈಎಸ್ ಪಿ ಹರೀಶ್ ಪಾಂಡೆ ಅವರ ಮಾರ್ಗದರ್ಶನ ದಲ್ಲಿ ವೃತ್ತನಿರೀಕ್ಷಕ ಎಚ್.ಎನ್.ಸಿದ್ದಯ್ಯ ಅವರ ನೇತೃತ್ವದ ತಂಡ ದಾಳಿ ಹಮ್ಮಿಕೊಂಡಿತ್ತು. ಅಲ್ಲಿ ರಕ್ಷಿಸಲಾದ ಯುವತಿಯರನ್ನು ಮೈಸೂರಿನ ಶಕ್ತಿಧಾಮ ಕೇಂದ್ರಕ್ಕೆ ಸೇರಿಸಿದ್ದಾರೆ. ಕಾರು ಚಾಲಕ ಹೈದರಾಬಾದ್ ನ ಸಾಯಿಕುಮಾರ್ ಮತ್ತು ಮಲ್ಲೇಶ ಬಂಧಿತ ಆರೋಪಿಗಳು. ಪೊಲೀಸರು ಪ್ರಕರಣದ ಸಂಬಂಧ ಮತ್ತಷ್ಟು ಆರೋಪಿಗಳಿಗಾಗಿ ಬಲೆ ಬೀಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The police team led by police inspector HN Siddiyiah attacked eight women, claiming that high-tech prostitution was taking place at home stay In Mysore - Madikeri
Please Wait while comments are loading...