ಇಂದು (ಫೆ.9) ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಅದ್ಧೂರಿ ಸಮಾರೋಪ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಫೆಬ್ರವರಿ 8 : ಬೆಂಗಳೂರು ಮತ್ತು ಮೈಸೂರಿನಲ್ಲಿ ಏಕಕಾಲದಲ್ಲಿ ಆಯೋಜಿಸಿದ್ದ 9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ (ಬಿಫೆಸ್) ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ಮೈಸೂರು ಅರಮನೆ ಮುಂದೆ ಇಂದು(ಫೆ. 9) ಸಂಜೆ 6.30 ನಡೆಯಲಿದ್ದು ಸಾಂಸ್ಕೃತಿಕ ನಗರಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಮನೋರಂಜನಾ ಕಾರ್ಯಕ್ರಮಗಳಿಗಾಗಿ ವಿಶಾಲ ವೇದಿಕೆಯನ್ನು ಸಜ್ಜುಗೊಳಿಸಿದ್ದು, ವಿವಿಧ ಕಲಾತಂಡಗಳಿಂದ ನೃತ್ಯ ರೂಪಕ, ಹೆಸರಾಂತ ಕಲಾವಿದರಿಂದ ವಿಶೇಷ ಕಾರ್ಯಕ್ರಮ ಜರುಗಲಿದೆ. ಅಂತಾರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನೆಯು ಬೆಂಗಳೂರಿನ ವಿಧಾನಸೌಧದ ಮುಂದೆ ನಡೆಸಲಾಗಿತ್ತು. ಸಮಾರೋಪವನ್ನು ಮೈಸೂರಿನಲ್ಲಿ ಆಚರಿಸಲಾಗುತ್ತಿದೆ.[9ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು(ಫೆ.2) ಚಾಲನೆ]

ರಾಜ್ಯಪಾಲರಾದ ವಜುಭಾಯಿ ರುಡಾಭಾಯಿ ವಾಲಾ ಅವರು ಸಿನಿಮೋತ್ಸವದ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಸಚಿವರಾದ ತನ್ವೀರ್ ಸೇಠ್, ಪ್ರಿಯಾಂಕ್ ಖರ್ಗೆ, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಎಂ.ಜೆ. ರವಿಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಕೆ.ಸೋಮಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಭಾಗವಹಿಸುವರು.

ಮನರಂಜನಾ ಕಾರ್ಯಕ್ರಮ

ಮನರಂಜನಾ ಕಾರ್ಯಕ್ರಮ

ಖ್ಯಾತ ನೃತ್ಯ ಕಲಾವಿದರಾದ ನಿರುಪಮಾ ರಾಜೇಂದ್ರ ಹಾಗೂ ತಂಡದವರಿಂದ ಸಿನಿಮೋತ್ಸವದ ಅಂಗವಾಗಿ ನೃತ್ಯ ರೂಪಕ ಹಾಗೂ ಹೆಸರಾಂತ ಚಲನಚಿತ್ರ ಕಲಾವಿದರ ತಂಡಗಳಿಂದ ಮನರಂಜನಾ ಕಾರ್ಯಕ್ರಮಗಳನ್ನು ಸಿನಿಮೋತ್ಸವದ ಅಂಗವಾಗಿ ಏರ್ಪಡಿಸಲಾಗಿದೆ.

ಸಮಾರೋಪದಲ್ಲಿ ಸಿಲಿಕಾನ್ ಸಂಭ್ರಮ

ಸಮಾರೋಪದಲ್ಲಿ ಸಿಲಿಕಾನ್ ಸಂಭ್ರಮ

ಕಳೆದ ವರ್ಷ ಆಯೋಜಿಸಿದ್ದ 8ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕದ ಇತಿಹಾಸ ಹಾಗೂ ಪರಂಪರೆ ಬಿಂಬಿಸುವ ನೃತ್ಯ ರೂಪಕ ಪ್ರದರ್ಶಿಸಿದ್ದ ನಿರುಪಮಾ ರಾಜೇಂದ್ರ ಅವರು, ಈ ಸಮಾರೋಪ ಕಾರ್ಯಕ್ರಮದಲ್ಲಿ ‘ಸಿಲ್ವರ್ ಟು ಸಿಲಿಕಾನ್' ಹಾಗೂ ‘ಸಂಭ್ರಮ' ನೃತ್ಯ ರೂಪಕ ಪ್ರಸ್ತುತಿ ಪಡಿಸುವರು. ಇದಲ್ಲದೆ, ಚಲನಚಿತ್ರ ನಾಯಕ ನಟ ನಟಿಯರು ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ.

ಹಂಪಿ ವಿಜಯವಿಠಲ ಮಾದರಿ ವೇದಿಕೆ

ಹಂಪಿ ವಿಜಯವಿಠಲ ಮಾದರಿ ವೇದಿಕೆ

ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪವನ್ನು ಹೆಚ್ಚು ಅವಿಸ್ಮರಣೀಯವಾಗಿಸಲು ವಿಶ್ವಸಂಸ್ಥೆಯ ಪಾರಂಪರಿಕ ಸ್ಮಾರಕವಾಗಿರುವ ಹಂಪಿಯ ‘ವಿಜಯ ವಿಠಲ' ದೇವಸ್ಥಾನದ ಮಾದರಿಯಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ವೇದಿಕೆಯು 72x64 ಅಡಿ ವಿಸ್ತಾರ, 4 ಅಡಿ ಎತ್ತರವಿದ್ದು, ಅರಮನೆಯ ಹಿನ್ನೋಟದಲ್ಲಿ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಒಟ್ಟು 8000 ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ.

4 ವಿಭಾಗಗಳಲ್ಲಿ 10 ಪ್ರಶಸ್ತಿಗಳು

4 ವಿಭಾಗಗಳಲ್ಲಿ 10 ಪ್ರಶಸ್ತಿಗಳು

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಒಟ್ಟು 18 ವಿಭಾಗಗಲ್ಲಿ 240 ಚಿತ್ರಗಳು ಪ್ರದರ್ಶನ ಕಂಡಿದ್ದು, ಕನ್ನಡದ 40 ಚಿತ್ರಗಳೂ ಸೇರಿವೆ. ಈ ಪೈಕಿ 4 ನಾಲ್ಕು ವಿಭಾಗಗಳಲ್ಲಿ ಒಟ್ಟು 10 ಪ್ರಶಸ್ತಿಗಳನ್ನು ತೀರ್ಪುಗಾರರು ಸಮಾರೋಪ ಸಮಾರಂಭದಲ್ಲಿ ಪ್ರಕಟಿಸಲಿದ್ದು, ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಜ್ಯೂರಿ ಪ್ರಶಸ್ತಿ, ವಿಮರ್ಶಕ ಪ್ರಶಸ್ತಿ

ಜ್ಯೂರಿ ಪ್ರಶಸ್ತಿ, ವಿಮರ್ಶಕ ಪ್ರಶಸ್ತಿ

ಕನ್ನಡ ಸಿನಿಮಾಗಳ ವಿಭಾಗ ಹಾಗೂ ಕನ್ನಡ ಜನಪ್ರಿಯ ಸಿನಿಮಾಗಳ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಕನ್ನಡ ಸಿನಿಮಾಗಳ ವಿಭಾಗದಲ್ಲಿ ಅತ್ಯುತ್ತಮ ಮೊದಲ, ದ್ವಿತೀಯ ಹಾಗೂ ತೃತೀಯ ಚಿತ್ರಗಳ ಜೊತೆಗೆ 1 ಅಂತಾರಾಷ್ಟ್ರೀಯ ಜ್ಯೂರಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕನ್ನಡ ಜನಪ್ರಿಯ ಸಿನಿಮಾಗಳಲ್ಲಿ ಅತ್ಯುತ್ತಮ ಪ್ರಥಮ, ದ್ವಿತೀಯ ಹಾಗೂ ತೃತೀಯ ಸಿನಿಮಾ ಪ್ರಶಸ್ತಿ ನೀಡಲಾಗುತ್ತದೆ. ಭಾರತೀಯ ಸಿನಿಮಾ ವಿಭಾಗದಲ್ಲಿ 2 ಅತ್ಯುತ್ತಮ ಜ್ಯೂರಿ ಪ್ರಶಸ್ತಿ ಹಾಗು 1 ವಿಮರ್ಶಕರ ಪ್ರಶಸ್ತಿ ನೀಡಲಾಗುತ್ತದೆ. ಇದಲ್ಲದೆ ಏಷ್ಯಾ ವಿಭಾಗದಲ್ಲಿ 1 ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysore is getting ready for International film festival closing ceremony Programme in the Feb. 9 at Palace ground.
Please Wait while comments are loading...