ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಶುರುವಾಯ್ತು ಮಳೆ: ಏನೆಲ್ಲಾ ಅವಾಂತರ ಸೃಷ್ಟಿಸಿದೆ ಗೊತ್ತಾ?

|
Google Oneindia Kannada News

Recommended Video

ಮೈಸೂರಿನಲ್ಲಿ ಧಾರಾಕಾರ ಮಳೆ | ಸೃಷ್ಟಿಸಿದ ಅವಾಂತರ ಒಂದಾ ಎರಡಾ? | Oneindia Kannada

ಮೈಸೂರು, ಅಕ್ಟೋಬರ್. 17: ಜಂಬೂಸವಾರಿಗೆ ಇನ್ನೆರಡು ದಿನ ಬಾಕಿ ಇರುವಾಗಲೇ ಮೈಸೂರಿನಲ್ಲಿ ಕಳೆದ ಮೂರು ದಿನಗಳಿಂದ ಕೆಲವು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ದಸರೆ ಹಾಗೂ ಜಂಬೂ ಸವಾರಿಯ ಗತಿಯೇನು ಎಂಬಂತಾಗಿದೆ.

ಕಳೆದ ಮೂರು ದಿನಗಳಿಂದ ದಿನಕ್ಕೊಂದು ಬಾರಿಯಂತೆ ಸಂಜೆ, ರಾತ್ರಿ ಸುರಿದ ಮಳೆ ಇಂದು ಮಾತ್ರ ಮಧ್ಯಾಹ್ನ 3 ರಿಂದ 4ರವೇಳೆಗಾಗಲೇ ಧೋ ಎಂದು ಸುರಿಯಿತು. ನಿನ್ನೆಯೂ ಸಹ ಸುರಿದ ಭಾರೀ ಮಳೆಗೆ ದಸರಾ ವಸ್ತು ಪ್ರದರ್ಶನ, ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಯಿತಲ್ಲದೇ, ಪಾಲ್ಗೊಂಡಿದ್ದ ಜನ ಮನೆಗೆ ವಾಪಸ್ಸಾಗಲು ಹರ ಸಾಹಸ ಪಡಬೇಕಾಯಿತು.

ಬೆಂಗಳೂರು, ಚಿಕ್ಕಮಗಳೂರು, ಮಂಡ್ಯ ಜಿಲ್ಲೆಗಳಲ್ಲಿ ಭಾರಿ ಮಳೆಬೆಂಗಳೂರು, ಚಿಕ್ಕಮಗಳೂರು, ಮಂಡ್ಯ ಜಿಲ್ಲೆಗಳಲ್ಲಿ ಭಾರಿ ಮಳೆ

ಇನ್ನು ಮಳೆಯ ರಭಸಕ್ಕೆ ಯುವ ದಸರಾ ಕಾರ್ಯಕ್ರಮವೂ ಹೊರತಾಗಿಲ್ಲ. ಎಷ್ಟೇ ಸ್ವಯಂಪ್ರೇರಿತವಾಗಿ ವಾಟರ್ ಪ್ರೂಫ್ ಟೆಂಟ್ ಅಳವಡಿಸಿದ್ದರೂ ಸಂಧಿಗಳಿಂದ ನೀರು ಸುರಿದು ವೇದಿಕೆಯ ಸುತ್ತೆಲ್ಲಾ ರಾಢಿಯಾದ ಘಟನೆ ನಡೆಯಿತು. ಅಲ್ಲದೇ ವಿಐಪಿ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ನೀರು ತುಂಬಿ ಕೆರೆಯಂತಾಗಿದ್ದರಿಂದ ವಾಹನ ಸವಾರರು ಪರದಾಡಿದರು. ಮುಂದೆ ಓದಿ..

 ತಂಪೆರೆದ ಮಳೆ

ತಂಪೆರೆದ ಮಳೆ

ಕೆಲದಿನಗಳಿಂದ ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ನಗರದ ಜನರಿಗೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ತಣ್ಣನೆಯ ವಾತಾವರಣ ನಿರ್ಮಿಸಿತು. ಬೆಳಗ್ಗೆಯಿಂದ ಬಿರು ಬಿಸಿಲು ಇತ್ತಾದರೂ, ಮಧ್ಯಾಹ್ನದ ವೇಳೆ ಸುತ್ತಲು ಕಾರ್ಮೋಡ ಕವಿಯಿತು. ನಂತರ ಕೆಲಕಾಲ ನಿರಂತರವಾಗಿ ಸುರಿದು ತಂಪೆರೆಯಿತು.

 'ತಿತ್ಲಿ'ಗೆ ಹೆದರಿ ಗುಹೆಯಲ್ಲಿ ಅಡಗಿದ್ದ 12 ಜನರ ಮೇಲೆ ಎರಗಿದ ಯಮರಾಯ! 'ತಿತ್ಲಿ'ಗೆ ಹೆದರಿ ಗುಹೆಯಲ್ಲಿ ಅಡಗಿದ್ದ 12 ಜನರ ಮೇಲೆ ಎರಗಿದ ಯಮರಾಯ!

 ಉದುರಿದ ಹೂಗಳು

ಉದುರಿದ ಹೂಗಳು

ದಸರೆಯಲ್ಲಿ ವೈವಿಧ್ಯಮಯ ಅಲಂಕಾರ, ಆಕೃತಿಗಳಿಂದಲೇ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಬರೋಬ್ಬರಿ 4.5 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಆದರೆ ಮಳೆಯಿಂದಾಗಿ ನಗರದ ಕರ್ಜನ್ ಪಾರ್ಕ್ ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದ ಕೆಲವು ಕಲಾಕೃತಿಗಳಲ್ಲಿ ಹೂಗಳು ಉದುರಿ ಹೊಸ ಹೂವುಗಳನ್ನು ಜೋಡಿಸುವ ಪ್ರಕ್ರಿಯೆ ನಿನ್ನೆಯಿಂದ ನಡೆಯುತ್ತಿದೆ.

ಮೈಸೂರು ದಸರಾ - ವಿಶೇಷ ಪುರವಣಿ

 ಆಹಾರ ಮೇಳಕ್ಕೆ ಬರಲು ಹಿಂದೇಟು

ಆಹಾರ ಮೇಳಕ್ಕೆ ಬರಲು ಹಿಂದೇಟು

ಇನ್ನು ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆಗೆ ಆಹಾರ ಮೇಳದ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ. ಮಳೆ ಬರುತ್ತದೆಂಬ ಕಾರಣಕ್ಕಾಗಿ ಜನರು ಆಹಾರ ಮೇಳಕ್ಕೆ ಬರಲು ಹಿಂದೇಟು ಹಾಕುತ್ತಿರುವ ದೃಶ್ಯ ಕಂಡು ಬಂತು.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಆಹಾರ ಮಳಿಗೆಯ ಕೆಲವರು ನಮಗೆ ಜಿಲ್ಲಾಡಳಿತವೂ ಸಹ ಆಹಾರ ಮೇಳದಲ್ಲಿ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಮಳೆ ಬಂದರೆ ಜನರು ಕುಳಿತು ತಿನ್ನುವ ಅವಕಾಶವನ್ನು ನೀಡಿಲ್ಲ. ಹಾಗಾಗಿ ಜನರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

 2 ದಿನ ಮಳೆಯ ಆರ್ಭಟ

2 ದಿನ ಮಳೆಯ ಆರ್ಭಟ

ಈ ನಡುವೆ ಅರಬ್ಬೀ ಮತ್ತು ಬಂಗಾಳಕೊಲ್ಲಿಯ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಪರಿಣಾಮ ರಾಜ್ಯದಲ್ಲಿ ಮತ್ತೆ ಮಳೆ ಪ್ರಭಾವ ಹೆಚ್ಚಾಗಿದೆ. ಮುಂದಿನ 4-5 ದಿನ ಸಾಧಾರಣ ಮಳೆಯಾಗಲಿದೆ. ಹಿಂಗಾರು ಬಿತ್ತನೆ ಈ ಮಳೆ ಅನುಕೂಲವಾಗಲಿದೆ ಎಂದು ಹವಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

English summary
Mysore has received heavy rainfall over the last three days. Today, even two hours have been rain. Read a detailed article about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X