ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಗಮ ಮತದಾನಕ್ಕಾಗಿ ಸಜ್ಜುಗೊಂಡಿದೆ ಸಾಂಸ್ಕೃತಿಕ ನಗರಿ ಮೈಸೂರು

By Yashaswini
|
Google Oneindia Kannada News

ಮೈಸೂರು, ಮೇ 11 : ಪ್ರಜಾಪ್ರಭುತ್ವದ ಹಬ್ಬ ಎಂದೇ ಪರಿಗಣಿಸಿರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ ಜಿಲ್ಲಾಡಳಿತ ಮೈಸೂರು ಸಂಪೂರ್ಣ ಸಜ್ಜುಗೊಂಡಿದೆ.

ಜಿಲ್ಲೆಯಲ್ಲಿ ಒಟ್ಟು 2,860 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಾಳೆ ಬೆಳಗ್ಗೆ 12ರಂದು ಶನಿವಾರ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ 12,21,925, ಪುರುಷರು, 12,10,413 ಮಹಿಳೆಯರು ಸೇರಿದಂತೆ ಒಟ್ಟು 24,32,338 ಮತದಾರರಿದ್ದಾರೆ.

ಮೈಸೂರಿನ ವಿಧಾನಸಭಾ ಕ್ಷೇತ್ರಗಳಲ್ಲಿರುವ ಮತದಾರರೆಷ್ಟು? ಇಲ್ಲಿದೆ ಮಾಹಿತಿಮೈಸೂರಿನ ವಿಧಾನಸಭಾ ಕ್ಷೇತ್ರಗಳಲ್ಲಿರುವ ಮತದಾರರೆಷ್ಟು? ಇಲ್ಲಿದೆ ಮಾಹಿತಿ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿ ಹೆಚ್ಚು (2,89,11), ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅತಿಕಡಿಮೆ (1,77,023) ಮತದಾರರಿದ್ದಾರೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಮತಗಟ್ಟೆಗೆ ಸಿಬ್ಬಂದಿಯನ್ನು ಕೊನೆಕ್ಷಣದಲ್ಲಿ ಗೊತ್ತು ಗುರಿ ಇಲ್ಲದಂತೆ (ರಾಂಡಮೈ ಜೇಶನ್) ನೇಮಕ ಮಾಡಲಾಗುವುದು.

 ಮೊದಲ ಬಾರಿಗೆ ಪಿಂಕ್ ಮತಗಟ್ಟೆ ಸ್ಥಾಪನೆ

ಮೊದಲ ಬಾರಿಗೆ ಪಿಂಕ್ ಮತಗಟ್ಟೆ ಸ್ಥಾಪನೆ

ಇಂದು ಮಧ್ಯಾಹ್ನ 1.30ರೊಳಗೆ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೆಲಸ ಪೂರ್ಣಗೊಳಿಸಲಾಗುವುದು. ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿರುವ ಅಧಿಕಾರಿಗಳು ಮಧ್ಯಾಹ್ನ 1.35ರೊಳಗೆ ಮತಗಟ್ಟೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲೇಬೇಕು.

ಆ ನಂತರದಲ್ಲಿ ಕರ್ತವ್ಯಕ್ಕೆ ಹಾಜರಾದರೆ ಅಂತ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿಯೇ ಪ್ರತ್ಯೇಕವಾದ ಹಾಗೂ ಮಹಿಳೆಯರಿಂದಲೇ ನಿರ್ವಹಿಸಲ್ಪಡುವ 24 ಪಿಂಕ್ (ಗುಲಾಬಿ ಬಣ್ಣ) ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

 ಸಕಲ ವ್ಯವಸ್ಥೆ

ಸಕಲ ವ್ಯವಸ್ಥೆ

ವಿಕಲಚೇತನರು ಮತ ಚಲಾಯಿಸಲು ಅನುಕೂಲವಾಗುವಂತೆ ವೀಲ್ ಚೇರ್, ಬ್ರೈಲ್ ಲಿಪಿ, ವಾಹನ ವ್ಯವಸ್ಥೆ ಹೀಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.

ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಚುನಾವಣೆ ನಡೆಯುತ್ತಿದ್ದು, ಆಯಾ ಜಿಲ್ಲಾಡಳಿತ ಮತದಾನಕ್ಕೆ ಪೂರ್ಣ ಸಿದ್ಧತೆ ಮಾಡಿಕೊಂಡಿದೆ. ನಿಯೋಜಿತ ಮತಗಟ್ಟೆಗಳಿಗೆ ಮತಗಟ್ಟೆ ಸಿಬ್ಬಂದಿ ಚುನಾವಣಾ ಸಾಮಗ್ರಿಗಳೊಂದಿಗೆ ಇಂದು ಬೆಳಗ್ಗೆಯೇ ಬಸ್ ಗಳಲ್ಲಿ ಹೊರಟರು.

ವೋಟರ್ ಐಡಿ ಇಲ್ಲದಿದ್ದರೆ ಈ ದಾಖಲೆ ತೋರಿಸಬಹುದುವೋಟರ್ ಐಡಿ ಇಲ್ಲದಿದ್ದರೆ ಈ ದಾಖಲೆ ತೋರಿಸಬಹುದು

 14,500 ಸಿಬ್ಬಂದಿ ನೇಮಕ

14,500 ಸಿಬ್ಬಂದಿ ನೇಮಕ

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ 2,860 ಮತಗಟ್ಟೆಗಳಿಗೆ ಒಟ್ಟು 2,860 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 2,860 ಸಹಾಯಕ ಮತಗಟ್ಟೆ ಅಧ್ಯಕ್ಷ ಅಧಿಕಾರಿ ಹಾಗೂ 5,720 ಮತದಾನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಪ್ರತಿ ಮತಗಟ್ಟೆಗೆ ಒಬ್ಬರು ಮತಗಟ್ಟೆ ಅಧ್ಯಕ್ಷಾಧಿಕಾರಿ, ಒಬ್ಬರು ಸಹಾಯಕ ಅಧಿಕಾರಿ ಮತ್ತು ಇಬ್ಬರು ಮತದಾನ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧೆಡೆಗೆ ಒಟ್ಟು 14,500 ಸಿಬ್ಬಂದಿಯನ್ನು ನೇಮಿಸಲಾಗಿದೆ.

 ಮತಗಟ್ಟೆ ಮಟ್ಟದ ಅಧಿಕಾರಿ

ಮತಗಟ್ಟೆ ಮಟ್ಟದ ಅಧಿಕಾರಿ

ಇವರೊಂದಿಗೆ ಸ್ಥಳೀಯವಾಗಿ ಒಬ್ಬರು ಗ್ರೂಪ್ ಡಿ ಮತ್ತು ಮತದಾರರನ್ನು ಗುರುತಿಸಲು ಪ್ರತಿ ಮತಗಟ್ಟೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ.

ಚುನಾವಣಾ ಕಾರ್ಯಕ್ಕಾಗಿ ಒಟ್ಟು 387 ಕೆಎಸ್ ಆರ್‍ಟಿಸಿ ಬಸ್ ಗಳು, 145 ಮೆಟಡಾರ್ ವ್ಯಾನ್ ಗಳು, 329 ಲಘು ಮೋಟಾರ್ ವಾಹನಗಳು, 74 ಟ್ರಕ್ ಗಳು, 244 ಸರ್ಕಾರಿ ವಾಹನಗಳು ಸೇರಿದಂತೆ 1139 ವಾಹನಗಳನ್ನು ಉಪಯೋಗಿಸಲಾಗುತ್ತಿದೆ.

VVPAT ಹೇಗೆ ಕೆಲಸಮಾಡುತ್ತದೆ? ಮತದಾನಕ್ಕೂ ಮುನ್ನ ಒಂದಷ್ಟು ಮಾಹಿತಿVVPAT ಹೇಗೆ ಕೆಲಸಮಾಡುತ್ತದೆ? ಮತದಾನಕ್ಕೂ ಮುನ್ನ ಒಂದಷ್ಟು ಮಾಹಿತಿ

English summary
Mysore district administration is fully equipped for fair voting on the Karnataka Assembly General Elections. total of 2,860 polling stations have been set up in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X