ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಷ್ಟಕ್ಕೂ ದಸರಾ ಆನೆಗಳನ್ನು ಸಾಕೋದು ಅಂದ್ರೆ ಸುಮ್ಮನೇನಾ?

By ಬಿಎಂ ಲವಕುಮಾರ್, ಮೈಸೂರು
|
Google Oneindia Kannada News

ಮೈಸೂರು, ಅಕ್ಟೋಬರ್ 17 : ಮೈಸೂರು ವಿಶ್ವವಿಖ್ಯಾತ ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿದೆ. ಒಂದೆಡೆ ತಾಲೀಮು ನಡೆಯುತ್ತಿದ್ದರೆ, ಮತ್ತೊಂದೆಡೆ ಗಜಪಡೆಗಳಿಗೆ ರಾಜಾತೀಥ್ಯ ಜೋರಾಗಿಯೇ ಸಾಗುತ್ತಿದೆ.

ವಿವಿಧ ಆನೆಶಿಬಿರಗಳಿಂದ ಬಂದಿರುವ ಆನೆಗಳಿಗೆ ಸಮಯಕ್ಕೆ ಸರಿಯಾಗಿ ಶಕ್ತಿಯುತ, ಸ್ವಾದಿಷ್ಟ ಆಹಾರಗಳನ್ನು ನೀಡುವ ಮೂಲಕ ಅವುಗಳನ್ನು ದೈಹಿಕವಾಗಿ ಬಲಿಷ್ಠಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.

ಹಾಗೆ ನೋಡಿದರೆ ಜಂಬೂ ಸವಾರಿಯಲ್ಲಿ ಖರ್ಚಾಗುವ ಹಣದ ಪೈಕಿ ಆನೆಗಳ ಆಹಾರದ್ದೇ ಸಿಂಹಪಾಲು. ಏಕೆಂದರೆ ಅವುಗಳಿಗೆ ಕೊಡುವ ಆಹಾರದ ಮೇಲೆ ಅವುಗಳ ಶಕ್ತಿ ಸಾಮರ್ಥ್ಯ ಅವಲಂಬಿತವಾಗುತ್ತದೆ. ಉತ್ತಮ ಆಹಾರ ನೀಡಿ ಶಕ್ತಿ, ಸಾಮರ್ಥ್ಯವನ್ನು ಹಿಗ್ಗಿಸುವ ಕೆಲಸವೂ ನಡೆಯುತ್ತದೆ. [ದಸರಾ ಗಜಪಡೆಗಳ ತೊಡುಗೆ ತಯಾರಿ ಹೇಗಿರುತ್ತದೆ?]

Mysore Dasara : Special diet for Jambu Savari elephants

ಅವುಗಳಿಗೆ ವಿಶೇಷ ಆಹಾರ ನೀಡಿ ಉಪಚಾರ ಮಾಡಿದರೆ ಮಾತ್ರ ಜಂಬೂ ಸವಾರಿಯಲ್ಲಿ ಆನೆಗಳು ರಾಜಗಾಂಭೀರ್ಯದಲ್ಲಿ ನಡೆಯಲು ಸಾಧ್ಯ. ಹೀಗಾಗಿ ಆನೆಗಳ ಶಕ್ತಿ ಮತ್ತು ಗಾತ್ರಕ್ಕೆ ಅನುಸಾರವಾಗಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಆಹಾರ ಕೊಡಲಾಗುತ್ತದೆ.

ಬೆಳಿಗ್ಗೆ ವಾಕಿಂಗ್ ಹೋಗುವ ಮುನ್ನ ಕುಸುರೆ ಎಂದು ಕರೆಯುವ ಹೆಸರು ಕಾಳು, ಹುರುಳಿ ಕಾಳು, ಗೋಧಿ, ಕುಸುಲಕ್ಕಿ ಇವೆಲ್ಲವನ್ನ ಬೇಯಿಸಿ ಉಂಡೆ ಮಾಡಿ ಕೊಡಲಾಗುತ್ತದೆ. ಅಲ್ಲಿಂದ ಬಂದ ಮೇಲೆ ತರಕಾರಿಗಳನ್ನ 1/2 ಕೆಜಿ ಬೆಣ್ಣೆಯಲ್ಲಿ ಬೇಯಿಸಿ ಕೊಡಲಾಗುತ್ತೆ. ಇವೆಲ್ಲ ತಿಂದ ನಂತರ ಮಧ್ಯಾಹ್ನದಿಂದ ಸಂಜೆಯವರೆಗೆ ಚುರುಮುರಿಯಂತೆ ಹಸಿರು ಸೊಪ್ಪು ತಿನ್ನುತ್ತಿರುತ್ತವೆ.

ಸಂಜೆ ಭತ್ತದ ಹುಲ್ಲಿನಲ್ಲಿ ಕುಸುರೆಯ ಸುತ್ತಿ ಭತ್ತವನ್ನ ಬೇಯಿಸಿ ಹಾಕಿ, ಬೆಲ್ಲ ಹಿಂಡಿ, ತೆಂಗಿನ ಕಾಯಿ, ಈರುಳ್ಳಿ, ಬೇಯಿಸಿ ಒಟ್ಟಿಗೆ ಕೊಡಲಾಗುತ್ತದೆ. ಕನಿಷ್ಠ ಪ್ರತಿ ಆನೆಗೆ 12 ಕೆಜಿ ಭತ್ತ, 12 ಕೆಜಿ ಹುಲ್ಲು, 250 ಗ್ರಾಂ ಬೆಲ್ಲ, 2 ತೆಂಗಿನ ಕಾಯಿ, 1/2 ಕೆ.ಜಿ ಬೆಣ್ಣೆ ಕೊಡಲಾಗುತ್ತದೆ. [ತುಪ್ಪ-ಹಾಲಿನ ಜುಗಲ್ ಬಂದಿಯ ಶಾವಿಗೆ ಪಾಯಸ]

ಕಾಡಿನಿಂದ ಬಂದ ಆನೆಗಳು ಒಂದೇ ಬಾರಿಗೆ ಇದೆಲ್ಲವನ್ನು ತಿನ್ನಲಾರವು. ಹೀಗಾಗಿ ಇವುಗಳಿಗೆ ಹುಳದ ಔಷಧಿ ಕೊಟ್ಟು ಹೊಟ್ಟೆಯನ್ನ ಸ್ವಚ್ಛಗೊಳಿಸಲಾಗುತ್ತದೆ. ಆಗ ಆನೆಗಳಿಗೆ ಚೆನ್ನಾಗಿ ಹೊಟ್ಟೆ ಹಸಿದು ಸ್ವಲ್ಪ ಹೆಚ್ಚಾಗಿ ತಿನ್ನಲು ಸಾಧ್ಯವಾಗುತ್ತದೆ.

ಇದಿಷ್ಟು ನಿತ್ಯ ಸೇವಿಸೋ ಆಹಾರವಾದರೆ, ಆಯುಧ ಪೂಜೆಯ ದಿನ ಮತ್ತು ಅಂಬಾರಿ ಹೊರುವ ದಿನ ವಿಶೇಷ ಆಹಾರ ನೀಡಲಾಗುತ್ತದೆ. ಅದಕ್ಕೆ ಸ್ಪೆಷಲ್ ಕುಸುರೆ ಎಂದೇ ಹೆಸರು. ಅವಲಕ್ಕಿ, ಗ್ಲುಕೋಸ್, ಬೆಣ್ಣೆ, ಬೆಲ್ಲ, ತೆಂಗಿನಕಾಯಿ ಎಲ್ಲವನ್ನ ಹಸಿ ಹುಲ್ಲಿನಲ್ಲಿ ಸುತ್ತಿ ಕುಸುರೆ ಮಾಡಿ ತಿನ್ನಿಸಲಾಗುತ್ತದೆ. ಜತೆಗೆ ಹಸಿ ಹುಲ್ಲು ನೀಡಿ ಜಂಬೂ ಸವಾರಿ ಸಂದರ್ಭ ಮಾರ್ಗ ಮಧ್ಯ ನೀರಡಿಕೆಯಾಗುವುದನ್ನು ತಪ್ಪಿಸಲಾಗುತ್ತದೆ.

ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆಯ ಆಕರ್ಷಣೆ ಮಾತ್ರ ನಮ್ಮ ಕಣ್ಣಿಗೆ ರಾಚುತ್ತದೆ. ಆದರೆ ಅದರ ಹಿಂದಿನ ಶ್ರಮ ಯಾರಿಗೂ ಗೊತ್ತಾಗುವುದಿಲ್ಲ. ಇಷ್ಟಕ್ಕೂ ಆನೆ ಸಾಕೋದು ಅಂದ್ರೆ ಸುಮ್ಮೆನಾ?

English summary
Elephants which are getting ready for Jambu Savari are getting special treatment. Variety of foods are being used to feed them. Jambu Savari will be held on 22nd of October, 2015 in Mysuru as part of world famous Mysore Dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X