ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿ ಸರಳ ದಸರಾ ಮಹೋತ್ಸವ ಆಯೋಜನೆಗೆ ಚಿಂತನೆ

By ಯಶಸ್ವಿನಿ
|
Google Oneindia Kannada News

ಮೈಸೂರು, ಆಗಸ್ಟ್ 21 : ಮೈಸೂರಿನ ಇತಿಹಾಸದೊಂದಿಗೆ ಹಾಸುಹೊಕ್ಕಾಗಿರುವ, ಸುಮಾರು 400 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ನೆರೆ ಜಿಲ್ಲೆ ಕೊಡಗಿನಲ್ಲಿನ ಭೀಕರ ಪ್ರವಾಹ, ಸಾವು ನೋವುಗಳು, ಆಸ್ತಿ ಹಾನಿ, ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಆಸ್ತಿ ನಷ್ಟ, ಬೆಳೆ ಹಾನಿಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ತೀವ್ರ ಮೋಜು, ಮನರಂಜನೆ, ದುಂದುವೆಚ್ಚ ಜನರ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎನ್ನಲಾಗಿದೆ.

ತಿಂಗಳ ಸಂಬಳ ಸಿಎಂ ಪರಿಹಾರ ನಿಧಿಗೆ ಕೊಟ್ಟ ಬಿಜೆಪಿ ಶಾಸಕರುತಿಂಗಳ ಸಂಬಳ ಸಿಎಂ ಪರಿಹಾರ ನಿಧಿಗೆ ಕೊಟ್ಟ ಬಿಜೆಪಿ ಶಾಸಕರು

ಕೊಡಗಿನ ಪುನರ್ ನಿರ್ಮಾಣಕ್ಕೆ ಹಾಗೂ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಸಾವಿರಾರು ಕೋಟಿ ರೂ. ಅಗತ್ಯವಿದೆ. ಮನೆಗಳನ್ನು ಕಳೆದುಕೊಂಡಿರುವ ಜನರಿಗೆ ಪುನರ್ ವಸತಿ ಕಲ್ಪಿಸಬೇಕಿದೆ. ಮನೆ-ಮಠ, ಬಂಧುಗಳು, ಹಣ, ಜೀವನಕ್ಕಾಗಿ ಖರೀದಿಸಿದ್ದ ವಸ್ತುಗಳು, ಬಟ್ಟೆ-ಬರೆ ಎಲ್ಲವನ್ನೂ ಕಳೆದುಕೊಂಡಿರುವ ಜನರ ಕಣ್ಣೀರು ಒರೆಸುವ ಕಾರ್ಯ ಮೊದಲ ಆದ್ಯತೆಯಾಗಿದೆ.

Mysore Dasara festival will celebrating simply

ಅತಿವೃಷ್ಟಿ, ಅನಾವೃಷ್ಟಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹಿಂದೆಯೂ ಕೂಡ ಅನೇಕ ಬಾರಿ ದಸರಾ ರದ್ದು ಮಾಡಿರುವುದು, ಸರಳವಾಗಿ ಆಚರಿಸಿರುವ ನಿದರ್ಶನಗಳು ಇವೆ. ಸಾಲಬಾಧೆ, ಬೆಳೆನಷ್ಟ ಸೇರಿದಂತೆ ಇನ್ನಿತರ ಕಾರಣಕ್ಕಾಗಿ ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ 2015 ರಲ್ಲೂ ಸರಳ ದಸರಾ ಆಚರಿಸಲಾಗಿತ್ತು.

ಪ್ರವಾಸೋದ್ಯಮಕ್ಕೆ ಹೊಡೆತ
ಪ್ರವಾಹದ ಹಿನ್ನೆಲೆಯಲ್ಲಿ ಸರಳ ದಸರಾ ನಡೆಸಲು ಸರ್ಕಾರ ನಿರ್ಧರಿಸಿದರೆ ಪ್ರವಾಸೋದ್ಯಮದ ಮೇಲೆ ಹೊಡೆತ ಬೀಳುವ ಸಂಭವವಿದೆ. ದಸರಾ ಸಂದರ್ಭದಲ್ಲಿ ಮುಡಾ ಹಾಗೂ ನಗರಪಾಲಿಕೆಗೆ ನಗರದಲ್ಲಿ ಗುಂಡಿಬಿದ್ದ ರಸ್ತೆಗಳಿಗೆ ತೇಪೆ ಹಾಕಲು 5 ಕೋಟಿ ರೂ. ಕೊಡಲಾಗುತ್ತಿತ್ತು. ಇದೀಗ ಕೊಡುತ್ತಿದ್ದ ಅನುದಾನಕ್ಕೂ ಕೋಕ್ ನೀಡುವ ಸಂಭವವಿದೆ.

ಹಲವು ಕಾರ್ಯಕ್ರಮಕ್ಕೆ ಕತ್ತರಿ
ನಾಡಹಬ್ಬದ ಪ್ರಯುಕ್ತ ಚಾಮುಂಡಿಬೆಟ್ಟದಲ್ಲಿ ಸಾಂಪ್ರದಾಯಿಕ ಉದ್ಘಾಟನೆ, ಜಂಬೂಸವಾರಿ, ಪಂಜಿನ ಕವಾಯಿತು ಬಿಟ್ಟರೆ, ಉಳಿದಂತೆ ಹಲವು ಕಾರ್ಯಕ್ರಮಗಳಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ. ಯುವ ದಸರೆಗೆ ಪ್ರಾಯೋಜಕತ್ವದ ಹಣ ಬಿಟ್ಟರೂ 3ರಿಂದ 4 ಕೋಟಿ ರೂ. ಬಿಡುಗಡೆ ಮಾಡಬೇಕಾಗಿತ್ತು.

ಆದ್ದರಿಂದ ಯುವ ದಸರೆ ಅಲ್ಲದೆ, ರೈತ, ಮಹಿಳಾ ದಸರಾ, ವೈಮಾನಿಕ ಪ್ರದರ್ಶನ ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಹಣ ವ್ಯಯ ಮಾಡುತ್ತಿದ್ದ ಕಾರ್ಯಕ್ರಮಗಳನ್ನು ಕೈ ಬಿಡಬಹುದು.

ಗಜಪಯಣಕ್ಕೆ ಆ.23 ಮತ್ತು 29 ಸೂಕ್ತ ದಿನಾಂಕ ಎನ್ನಲಾಗಿತ್ತು. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಆ.23ರಂದೇ ಗಜಪಯಣಕ್ಕೆ ದಿನಾಂಕ ಸೂಚಿಸಿದ್ದರು. ಇದಕ್ಕಾಗಿ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡು ಮೊದಲ ತಂಡದಲ್ಲಿ ಗಜಪಡೆಯ ನಾಯಕ ಅರ್ಜುನ ನೇತೃತ್ವದಲ್ಲಿ 6 ಆನೆಗಳನ್ನು ಕರೆತರುವುದಕ್ಕೆನಿರ್ಧರಿಸಿತ್ತು.

ಈ ಹಿನ್ನೆಲೆಯಲ್ಲಿ ಆ.29ಕ್ಕೆ ಗಜಪಯಣ ಮುಂದೂಡಬಹುದೆಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

English summary
Sources said this time Mysore Dasara festival will celebrating simply. They Decided to celebrate a simple dasara on the background of the flood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X