ನಾಡಹಬ್ಬ ಮೈಸೂರು ದಸರಾ ಲಾಂಛನ, ವೆಬ್ ಸೈಟ್ ಅನಾವರಣ

Posted By:
Subscribe to Oneindia Kannada

ಮೈಸೂರು, ಆಗಸ್ಟ್ 20: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-2016 ರ ಆಚರಣೆಯ ಚಟುವಟಿಕೆಗಳು ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯ ಮೂಲಕ ಆರಂಭವಾಗಿವೆ. ಈಗ ಶನಿವಾರ (ಆಗಸ್ಟ್ 20)ದಸರಾ ಲಾಂಛನ, ವೆಬ್ ಸೈಟ್ ಅನಾವರಣಗೊಳಿಸಲಾಗಿದೆ

ನಾಡಹಬ್ಬ ಮೈಸೂರು ದಸರಾ ಲಾಂಛನ (Logo) ವನ್ನು ಸಾರ್ವಜನಿಕರು / ಕಲಾವಿದರಿಂದ ಸ್ಪರ್ಧೆ ನಡೆಸಿ, ಉತ್ತಮ ಲಾಂಛನ ಮಾದರಿಯನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿತ್ತು.[ಅರ್ಜುನ, ಬಲರಾಮ, ಅಭಿಮನ್ಯು.. ದಸರಾ ಆನೆಗಳ ಪರಿಚಯ ಇಲ್ಲಿದೆ]

ಅದರಂತೆ ರಾಜ್ಯದ ವಿವಿಧ ಭಾಗದಿಂದ ಒಟ್ಟು 83 ಜನರು ಭಾಗವಹಿಸಿ 160 ಲಾಂಛನವನ್ನು ಸ್ವೀಕರಿಸಲಾಗಿತ್ತು. ಅದರಂತೆ 10 ಲಾಂಛನಗಳನ್ನು ಆಯ್ಕೆ ಮಾಡಲಾಯಿತು, ಅದರಲ್ಲಿ ಲೋಕೇಶ್ ರಾವುದಿ, ಆದಿ ಕ್ರಿಯೆಟಿವ್ಸ್, ಬೆಂಗಳೂರು ಇವರು ತಯಾರಿಸಿರುವ ಲಾಂಛನವನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅಂತಿಮವಾಗಿ ಆಯ್ಕೆ ಮಾಡಲಾಯಿತು.

ಇದರ ಜೊತೆಗೆ ವೆಬ್ ಸೈಟ್ : http://www.mysoredasara.gov.in/
ಟ್ವಿಟ್ಟರ್: @mysoorudasara
ಇಮೇಲ್ : mysoorudasara@gmail.com

ಕೂಡಾ ಬಳಸಿ ಮಾಹಿತಿ ಪಡೆಯಬಹುದಾಗಿದೆ.

Mysore Dasara 2016 Logo Website Unveiled

ದಸರಾಗೆ ಸಿದ್ಧತೆ: ಆಗಸ್ಟ್ 9ರಂದು ಮೈಸೂರಿನಲ್ಲಿ ಮಾನ್ಯ ಲೋಕೋಪಯೋಗಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಪೂರ್ವಸಿದ್ಧತಾ / ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಸರಾ-2016 ರ ಕಾರ್ಯಕ್ರಮಗಳ ರೂಪುರೇಷೆಯ ಬಗ್ಗೆ ಚರ್ಚಿಸಿ ಈ ಕೆಳಕಂಡ ತೀರ್ಮಾನಗಳನ್ನು ತೆಗೆದುಕೊಂಡು ಕ್ರಮ ವಹಿಸಲಾಗಿದೆ.

* ನಾಡಹಬ್ಬ ಮೈಸೂರು ದಸರಾ-2016 ಉದ್ಘಾಟನೆಗೆ ಖ್ಯಾತ ಸಾಹಿತಿಗಳಾದ ಚನ್ನವೀರ ಕಣವಿಯವರನ್ನು ಆಹ್ವಾನಿಸಲಾಗಿದೆ.
* ದಸರಾ ಚಟುವಟಿಕೆಗಳಿಗೆ ವಿದ್ಯುಕ್ತ ಚಾಲನೆ ನೀಡುವ ಗಜಪಯಣ ಕಾರ್ಯಕ್ರಮವನ್ನು ಆಗಸ್ಟ್21 ರಂದು ಬೆಳಿಗ್ಗೆ 11.00 ಗಂಟೆಗೆ ಹುಣಸೂರು ತಾಲ್ಲೂಕಿನ ನಾಗಪುರ ಗಿರಿಜನ ಆಶ್ರಯಶಾಲೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ದಸರಾ ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಲಿದ್ದಾರೆ.


* ದಸರಾ ಆಚರಣೆಯ ಸಲುವಾಗಿ 17 ಉಪಸಮಿತಿಗಳನ್ನು 10 ಉಪ ವಿಶೇಷಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿದೆ.
* ಸದರಿ ಸಮಿತಿಗಳು ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಿ ಆಯಾ ಉಪಸಮಿತಿಗಳ ವ್ಯಾಪ್ತಿಯಲ್ಲಿ ಬರುವ ಕಾರ್ಯಕ್ರಮಗಳ ರೂಪುರೇಷೆಗಳಿಗೆ ಒಂದು ರೂಪ ಕೊಡುತ್ತಿದ್ದಾರೆ.
* ಈ ಬಗ್ಗೆ ಅಂತಿಮವಾಗಿ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
* ಈ ಬಾರಿ ದಸರಾದಲ್ಲಿ ಮಾಮೂಲಿ ಕಾರ್ಯಕ್ರಮಗಳಲ್ಲದೆ ಕೆಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಅವೆಂದರೆ,

* Palace on Wheel
* Theme based Dasara - awareness regarding Water conservation and water harvesting etc.
* Shilpa Kale and Kasta Shilpa Kale Exhibition
* Helicopter Joy Ride

(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysore Dasara 2016 logo and official website(www.mysoredasara.gov.in) unveiled today(Aug 20) by district administration. This year Dasara will be celebrated from October 1st to 11th.
Please Wait while comments are loading...