ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ: ಅ.1ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ

By ಮೈಸೂರು, ಪ್ರತಿನಿಧಿ
|
Google Oneindia Kannada News

ಮೈಸೂರು, ಸೆ. 27 : ನಾಡಹಬ್ಬ ದಸರಾದಲ್ಲಿ ಜನರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಸದೌತಣ ನೀಡಲು ಸಾಂಸ್ಕೃತಿಕ ಉಪಸಮಿತಿ ಮುಂದಾಗಿದೆ. [ಮೈಸೂರು ದಸರಾ ಪೂಜಾ ವಿಧಿವಿಧಾನಗಳ ಸಂಪೂರ್ಣ ವಿವರಣೆ ಇಲ್ಲಿದೆ!]

ಈ ಸಂಬಂಧ ಅ.1ರಿಂದ 10ರವರೆಗೆ ಅರಮನೆ ಸೇರಿದಂತೆ ನಗರದ ಆರು ಕಡೆಗಳಲ್ಲಿ ಪ್ರತಿನಿತ್ಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಗನ್ಮೋಹನ ಅರಮನೆ, ಕರ್ನಾಟಕ ಕಲಾಮಂದಿರ, ಗಾನಭಾರತಿ (ವೀಣೆ ಶೇಷಣ್ಣ ಭವನ), ಚಿಕ್ಕಗಡಿಯಾರ, ಪುರಭವನ ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

cultural programs

ಈ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕಲಾವಿದರಿಗೂ ಅವಕಾಶ ಮಾಡಿ ಕೊಡಲಾಗಿದೆ.

ಅರಮನೆ ಆವರಣದಲ್ಲಿ ಅ.1ರಂದು ಸಂಜೆ 6ಕ್ಕೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಈ ಬಾರಿ ಆಯ್ಕೆಯಾಗಿರುವ ಸಂಗೀತ ದಿಗ್ಗಜರಿಗೆ ಮುಖ್ಯಮಂತ್ರಿಗಳು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಬಾರಿಯ ದಸರಾ ಆಚರಣೆಯ ವಿಶೇಷ ಘೋಷವಾಕ್ಯಕ್ಕೆ ಅನುಗುಣವಾಗಿ ಜೀವಜಲ ನೃತ್ಯ ರೂಪಕವನ್ನು ಬೆಂಗಳೂರಿನ ರೂಪಾ ರಾಜೇಶ್ ಮತ್ತು ತಂಡ ಪ್ರಸ್ತುತಪಡಿಸಲಿದ್ದಾರೆ. ಈ ಆಕರ್ಷಕ ನೃತ್ಯರೂಪಕಕ್ಕೆ ಮೈಸೂರಿನ ಸುನೀತಾ ಚಂದ್ರಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

English summary
Mysore Dasara is the "Nadahabba" or the State-Festival of the State of Karnataka, called as "Navaratri" meaning Nine-Nights, a 10-day festival, cultural programs as beginning from oct 1 to 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X