ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐತಿಹಾಸಿಕ ಮೈಸೂರು ದಸರಾ ಉತ್ಸವಕ್ಕೆ ಚಾಲನೆ

|
Google Oneindia Kannada News

ಮೈಸೂರು, ಅ.5 : ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ 2013ಕ್ಕೆ ಚಾಲನೆ ದೊರಕಿದೆ. ಶನಿವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಹತ್ತುದಿನಗಳ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಸಿಎಂ ಸಿದ್ದರಾಮಯ್ಯ ಮುಂತಾದವರು ಉಪಸ್ಥಿತರಿದ್ದರು.

ಶನಿವಾರ ಬೆಳಗ್ಗೆ 10.45ರ ಸುಮಾರಿಗೆ ಚಾಮುಂಡಿ ಬೆಟ್ಟದಲ್ಲಿ ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ಹತ್ತು ದಿನಗಳ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.

mysore

ದಸರಾ ಉದ್ಘಾಟಿಸಿ ಮಾತನಾಡಿ ಡಾ.ಚಂದ್ರಶೇಖರ ಕಂಬಾರ, ಕರ್ನಾಟಕ ಜನರಿಗೆ ದಸರ ಹಬ್ಬದ ಶುಭಾಶಯ ಸಲ್ಲಿಸಿದರು. ಹಳೆ ಬೇರು, ಹೊಸ ಚಿಗುರುಗಳ ಮಿಲನವಾಗಿರುವ ದಸರಾ ಮಹೋತ್ಸವವನ್ನು ಉದ್ಘಾಘಟಿಸಲು ಅತೀವ ಹರ್ಷವಾಗುತ್ತದೆ ಎಂದು ಹೇಳಿದರು.

ಹಳತು ಹೊಸತರ ನಡುವೆ ನಮ್ಮೆಲ್ಲರ ಜೀವನ ನಾಟಕ ಜರುಗುತ್ತದೆ. ಬದಲಾವಣೆಯೊಂದೇ ನಿರಂತರ ಸತ್ಯ. ಬದವಲಾವಣೆಗಳನ್ನು ತಡೆಯುವುದು ಬೀಸುವ ಗಾಳಿಯನ್ನು ಹಿಡಿದಿಡುವ ಹಾಗೆ. ಇದಕ್ಕಾಗಿ ನಾವು ಕಳವಳಿಸಬೇಕಿಲ್ಲ.

ಆದರೆ, ಬದಲಾವಣೆಯ ಭರಾಟೆಯಲ್ಲಿ ಇಂದು ಅನಗತ್ಯವಾದುದರ ಜತೆಗೆ ಸಾರ್ವಕಾಲಿಕ ಮೌಲ್ಯಗಳುಳ್ಳ ಗತದ ಅನರ್ಘ್ಯ ಅಂಶಗಳು ಅಳಿದುಹೋಗದಂತೆ ಎಚ್ಚರ ವಹಿಸುವುದು ಬಲು ಮುಖ್ಯವಾದುದು ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಅರಮನೆಯಲ್ಲಿ ರಾಜವಂಶಸ್ತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಿಂಹಾಸನಕ್ಕೆ ಪೂಜೆ ಸಲ್ಲಿಸುವ ಮೂಲಕ ಖಾಸಗಿ ದಸರಾ ದರ್ಬಾರ್ ಗೆ ಚಾಲನೆ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮ : ದಸರಾ ಅಂಗವಾಗಿ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಜೆ 6 ಗಂಟೆಗೆ ಅರಮನೆ ಆವರಣದಲ್ಲಿ ಖ್ಯಾತ ರಂಗಕರ್ಮಿ ನಾಡೋಜ ಡಾ.ಏಣಗಿ ಬಾಳಪ್ಪ ಚಾಲನೆ ನೀಡಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ.

ಚಲನಚಿತ್ರೋತ್ಸವ : ಕಲಾ ಮಂದಿರದಲ್ಲಿ ಸಂಜೆ ದಸರಾ ಚಲನಚಿತ್ರೋತ್ಸವಕ್ಕೆ ವಾರ್ತಾ ಸಚಿವ ಸಂತೋಷ್‌ ಲಾಡ್‌ ಚಾಲನೆ ನೀಡಲಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್‌, ಬಿ.ಸರೋಜಾದೇವಿ, ಲೀಲಾವತಿ, ತಾರಾ, ಉಪೇಂದ್ರ, ಪ್ರಿಯಾಂಕ, ದರ್ಶನ್‌, ವಿನೋದ್‌ರಾಜ್‌, ದಿಗಂತ್‌, ನಟಿ ಐಂದ್ರಿತಾ ರೇ ಮುಂತಾದವರು ಭಾಗವಹಿಸಲಿದ್ದಾರೆ.

English summary
Traditional 10 days Mysore Dasara 2013 begins on Saturday. Jnanpith awardee Dr. Chandrashekar Kambara inaugurated Dasara on Saturday, October 5. CM Siddaramaiah, Srikantadatta Narasimharaja Wodeyar are present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X