ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಪಾಲಿಕೆ ಚುನಾವಣೆ: ಮತದಾರರಿಂದ ನೀರಸ ಪ್ರತಿಕ್ರಿಯೆ

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 31 : ಮೈಸೂರು ಮಹಾನಗರ ಪಾಲಿಕೆಗೆ ಚುನಾವಣೆ ಇಂದು ಬೆಳಗ್ಗಿನಿಂದಲೇ ಶಾಂತಿಯುತವಾಗಿ ನಡೆಯಿತು. ಬೆಳಗ್ಗಿನಿಂದಲೇ ಮತದಾನ ಕೇಂದ್ರದ ಕಡೆ ಮತದಾರರು ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಮತದಾನ ಈ ಬಾರಿ ನೀರಸವಾಗಿತ್ತು.

ಇನ್ನು ಎಲ್ಲಿಯೂ ಕೂಡ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟು ವರದಿ ಆಗಿಲ್ಲ. ಅತ್ಯಂತ ಯಶಸ್ವಿಯಾಗಿ ಇವಿಎಂ ಯಂತ್ರಗಳು ಕೆಲಸ ಮಾಡಿದೆ. ನಗರದ ಎಲ್ಲಾ ಮತಗಟ್ಟೆಗಳಲ್ಲಿಯೂ ಶಾಂತಿಯುತ ಮತದಾನ ನಡೆದಿದೆ. ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ ಎಂದು ಆಯುಕ್ತ ಜಗದೀಶ್ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ : ಮೈತ್ರಿ ಸರ್ಕಾರಕ್ಕೆ ಮೊದಲ ಪರೀಕ್ಷೆಸ್ಥಳೀಯ ಸಂಸ್ಥೆಗಳ ಚುನಾವಣೆ : ಮೈತ್ರಿ ಸರ್ಕಾರಕ್ಕೆ ಮೊದಲ ಪರೀಕ್ಷೆ

ಇತ್ತ ಮತದಾನಕ್ಕೆ ಸುತ್ತೂರು ಶ್ರೀಗಳು ಹಾಗೂ ಸಾಹಿತಿ ಎಸ್ ಎಲ್ ಭೈರಪ್ಪ ಗೈರಾಗಿದ್ದರು. ಸುತ್ತೂರು ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಅವರು ಅಮೆರಿಕ ಪ್ರವಾಸದಲ್ಲಿದ್ದರೇ ಹಿರಿಯ ಸಾಹಿತಿ ಎಸ್ ಎಲ್ ಬೈರಪ್ಪ ಇಂಗ್ಲೆಂಡ್ ನಲ್ಲಿದ್ದಾರೆ ಹಾಗಾಗಿ ಇವರಿಬ್ಬರೂ ಮತ ಚಲಾಯಿಸಿಲ್ಲ.

Mysore City Corporation Election: Vicious Response to Voters

ಇನ್ನು ಕೆ.ಆರ್ ಕ್ಷೇತ್ರದಲ್ಲಿ ಶಾಸಕರಾದ ರಾಮದಾಸ್, ನಾಗೇಂದ್ರ ಅವರು ಕೂಡ ಚಾಮರಾಜ ಕ್ಷೇತ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಮಾಜಿ ಸಚಿವ ತನ್ವೀರ್ ಸೇಠ್ ಕೂಡ ತಮ್ಮ ಕುಟುಂಬಿಕರೊಂದಿಗೆ ತಮ್ಮ ಹಕ್ಕು ಚಲಾಯಿಸಿದರು.

Mysore City Corporation Election: Vicious Response to Voters

ರಾಜಮಾತೆ ಪ್ರಮೋದಾದೇವಿ ಅವರು ವಾರ್ಡ್ ನಂಬರ್ 51 ರ ಮತಗಟ್ಟೆ ಸಂಖ್ಯೆ 546ರಲ್ಲಿ ಮತದಾನ ಮಾಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೇ ಗೆದ್ದರು ತಮ್ಮ ವಾರ್ಡ್​ಗಳನ್ನು ಅಭಿವೃದ್ಧಿಪಡಿಸಬೇಕು ಎಂದರು.

English summary
Election to Mysore City Corporation today held peacefully from morning. Voters came to the polling station from morning to cast their right to vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X