ಪ್ರೇಮಿಗಳ ದಿನಕ್ಕೆ ಸಜ್ಜಾದ ಸಾಂಸ್ಕೃತಿಕ ನಗರಿ…!

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು , ಫೆಬ್ರವರಿ 13 : ಸಾಂಸ್ಕೃತಿಕ ನಗರಿ ಪ್ರೇಮಿಗಳ ದಿನದ ಆಚರಣೆಗೆ ಈ ಭಾರಿ ವಿಭಿನ್ನವಾಗಿ ಸಜ್ಜಾಗಿದೆ. ಪರ- ವಿರೋಧಗಳ ನಡುವೆಯೂ ಯುವ ಮನಸುಗಳು ಫೆಬ್ರವರಿ 14ರಂದು ಪ್ರೇಮಿಗಳು ತಮ್ಮ ದಿನವನ್ನು ಆರಂಭಿಸೋಕೆ ಮುಂದಾಗಿದ್ದಾರೆ. ಮೈಸೂರು ಮೊದಲೇ ಪ್ರೇಮಿಗಳಿಗಂತೂ ಹೇಳಿ ಮಾಡಿಸಿದ ಜಾಗ. ಕಾರಣ ಇಲ್ಲಿನ ಪ್ರವಾಸಿ ತಾಣಗಳು, ರೆಸಾರ್ಟ್ಗಳು, ಹೋಟೆಲ್ ಗಳು ಒಂದೇ ಎರಡೇ...

ಪ್ರೇಮಿಗಳ ದಿನಾಚರಣೆ ಎಂದರೆ ಸಾಕು, ದಿನವೂ ಭೇಟಿಯಾಗದೇ ಇರುವವರು ಅಂದು ಭೇಟಿಯಾಗುವುದು ಸಾಮಾನ್ಯ. ಹಾಗಾಗಿ ನಮಗೆ ಹೆಚ್ಚಾಗಿ ಪ್ರಣಯ ಪಕ್ಷಿಗಳು ಮೈಸೂರಿನಲ್ಲಿ ಕಂಡು ಬರುವುದು ಕಾರಂಜಿ ಕೆರೆ, ಕಾಫಿ ಡೇ, ಮಾಲ್, ಚಾಮುಂಡಿ ಬೆಟ್ಟ ಇತ್ಯಾದಿ.[ವ್ಯಾಲೆಂಟೈನ್ಸ್ ಡೇ ಸ್ಪೆಷಲ್.. ಮೈಸೂರು ವರ, ಚೀನಾ ವಧುವಿನ ಪ್ರೇಮ್ ಕಹಾನಿ]

ಮೈಸೂರು ಪ್ರಶಾಂತನಗರವಾಗಿದ್ದು ಇಲ್ಲಿ ಪ್ರೇಮಿಗಳಿಗೆ ತಮ್ಮ ಮನಬಂದತೆ ವಿಹರಿಸುವ, ಪ್ರೇಮನಿವೇದನೆ ಮಾಡುವ ಎಲ್ಲ ವಾತಾವರಣವೂ ಇದೆ ಅಲ್ಲದೆ ಯುವಕ ಯುವತಿಯರು ಕಾದು ಕುಳಿತ ದಿನ ಹತ್ತಿರ ಬರುತ್ತಿದ್ದಂತೆ ಹೃದಯಗಳ ಮಿಡಿತಕ್ಕೆ ಮೈಸೂರು ನಗರಿ ಮಲ್ಲಿಗೆಯಂತೆ ಅರಳಿ ನಿಂತಿದೆ.

ಹೇಳಿ ಮಾಡಿಸಿದ ಜಾಗ

ಹೇಳಿ ಮಾಡಿಸಿದ ಜಾಗ

ಕಾಫಿ ಡೇಗಳು ಹೆಚ್ಚಿರುವ ಗೋಕುಲಂ ಹಾಗೂ ದೇವರಾಜು ಅರಸು ರಸ್ತೆಗಳಲ್ಲಿ ಪ್ರೇಮಿಗಳಂತೂ ಗಂಟೆಗಟ್ಟಲೆ ಹರಟೆ ಹೊಡೆಯುತ್ತಾರೆ. ಚೆಲುವಾಂಬ ಉದ್ಯಾನವನದಲ್ಲಿಯೂ ಸಹ ಪ್ರೇಮ ಪಕ್ಷಿಗಳು ಕಂಡು ಬರುವುದುಂಟು. ಇನ್ನು ಚಾಮುಂಡಿ ಬೆಟ್ಟದ ಇಕ್ಕೆಲಗಳಲ್ಲಿ ಪ್ರೇಮಿಗಳ ಅನುರಾಗ ನಿವೇದನೆ ಪ್ರತಿ ವರುಷದಂತೆ ಈ ಬಾರಿಯೂ ಕಂಡುಬರುವಂತೆ ಕಾಣುತ್ತಿದೆ.

ಈ ಗುಲಾಬಿಯು ನಿಮಗಾಗಿ

ಈ ಗುಲಾಬಿಯು ನಿಮಗಾಗಿ

ಗುಲಾಬಿ ಹೂವಿನ ವ್ಯಾಪಾರಿಗಳು ಭರ್ಜರಿ ವ್ಯಾಪಾರಕ್ಕೆ ಪ್ರೇಮಿಗಳಂತೆಯೇ ಕಾದು ಕುಳಿತಿದ್ದಾರೆ. ಈ ಬಾರಿ ಗುಲಾಬಿ ಬೆಲೆ ಕಡಿಮೆಯಾಗಿದ್ದರೂ, ಬೇಡಿಕೆ ಹೆಚ್ಚಾಗಿದೆ. ಗುಲಾಬಿ ಪೂರೈಕೆ ಹೆಚ್ಚಿರುವುದರಿಂದ ಪ್ರೇಮಿಗಳು ತಮಗೆ ಬೇಕಾದ ರೀತಿಯ ಗುಲಾಬಿ ಮಾರುಕಟ್ಟೆಯಲ್ಲಿ ಆರಿಸಿಕೊಳ್ಳಬಹುದು ಎನ್ನುತ್ತಾರೆ ಗುಲಾಬಿ ಹೂವಿನ ವ್ಯಾಪಾರಿ ಪ್ರಭು.

ಏಕಾಂತಕ್ಕಾಗಿ ಆಲೋಚನೆ

ಏಕಾಂತಕ್ಕಾಗಿ ಆಲೋಚನೆ

ಪ್ರೇಮಿಗಳ ದಿನದಂದು ಎಲ್ಲೆಂದರಲ್ಲಿ ಸುತ್ತಾಡಿದರೆ ಜನ ದಿಟ್ಟಿಸಿ ನಮ್ಮನ್ನು ತಿನ್ನೋ ಹಾಗೇ ನೋಡುತ್ತಾರೆ. ನಾವೇನು ತಪ್ಪು ಮಾಡಿದ್ದೇವೆ. ನಮಗೂ ಒಂದು ದಿನ ಅವಕಾಶಕೊಡಿ. ನಮಗೆ ಸ್ವಾತಂತ್ರ್ಯ ಸಿಗಲು ಇರುವ ಬೆಸ್ಟ್ ಪ್ಲೇಸ್ ಶಾಪಿಂಗ್ ಮಾಲ್ ಎನ್ನುತ್ತಾರೆ ಯುವ ಜೋಡಿ.. ಮೈಸೂರಿನ ಬೆಸ್ಟ್ ಅಮ್ಯೂಸ್ಮೆಂಟ್ ಪಾರ್ಕ್ ಜಿಆರ್ ಎಸ್ ಗೆ ತೆರಳಲು ಕೂಡ ಅನೇಕ ಪ್ರೇಮಿಗಳು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಪ್ರೇಮಿಗಳನ್ನು ಸ್ವಾಗತಿಸುವ ಮಾಲ್ ಗಳು

ಪ್ರೇಮಿಗಳನ್ನು ಸ್ವಾಗತಿಸುವ ಮಾಲ್ ಗಳು

ಪ್ರೇಮಿಗಳು ವ್ಯಾಲೆಂಟೈನ್ಸ್ ಡೇಗೆ ಸಿದ್ಧವಾಗುತ್ತಿದ್ದರೆ ಅವರ ಸತ್ಕಾರಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಕೂಡ ಸಜ್ಜಾಗಿದೆ. ನಗರದ ವಿವಿಧೆಡೆಯ ಗಿಫ್ಟ್ ಸೆಂಟರ್ ಗಳಲ್ಲಿ ತಮ್ಮ ಪ್ರವೇಶ ದ್ವಾರದಲ್ಲೇ ಶುಭಾಷಯ ಕೋರುವ ಮೂಲಕ ಪ್ರೇಮಿಗಳನ್ನು ಸ್ವಾಗತಿಸುತ್ತಿವೆ. ಪ್ರೇಮಿಗಳಿಗಾಗಿ ಹೊಸ ಬಗೆಯ ಗುಲಾಬಿ ಬಣ್ಣದ ಉಡುಪು, ಗಿಫ್ಟ್ ಗಳನ್ನು ತಂದಿಟ್ಟಿವೆ.

ಹೊಸ ಟ್ರಂಡಿನ ದುಬಾರಿ ಉಡುಗೊರೆ

ಹೊಸ ಟ್ರಂಡಿನ ದುಬಾರಿ ಉಡುಗೊರೆ

ಪ್ರೇಮಿಗಳ ದಿನದಲ್ಲಿ ಗುಲಾಬಿ, ಚಾಕೋಲೇಟ್ ನೀಡುವ ಟ್ರೆಂಡ್ ಸ್ವಲ್ಪ ಮಟ್ಟಿಗೆ ದೂರವಾಗುತ್ತಿದೆ. ಬೆಲೆಬಾಳುವ ಉಡುಪು, ಚಿನ್ನ, ಬೆಳ್ಳಿ, ವಜ್ರಾಭರಣಗಳ ಉಡುಗೊರೆ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ಹಾಗಾಗಿ ಜ್ಯುವೆಲ್ಲರಿ ಅಂಗಡಿಗಳು ಪ್ರೇಮಿಗಳ ದಿನಕ್ಕೂ ಅಕ್ಷಯ ತದಿಗೆಯಂತೆ ಸಿದ್ಧವಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysore city, stores, parks, malls are getting ready for Valentine's Day
Please Wait while comments are loading...