ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನರಿಗೆ ಇನ್ನಷ್ಟು ಹತ್ತಿರವಾದ ಮೈಸೂರು ಮಹಾನಗರ ಪಾಲಿಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 3 : ನಗರದ ನಿವಾಸಿಗಳು ತಮ್ಮ ಸಮಸ್ಯೆ ಮತ್ತು ದೂರುಗಳನ್ನು ಅಂತರ್ಜಾಲದಲ್ಲಿಯೇ ನೀಡುವಂತಹ ತಂತ್ರಜ್ಞಾನವನ್ನು ಮೈಸೂರು ಮಹಾನಗರ ಪಾಲಿಕೆ ಅಲವಡಿಸಿಕೊಂಡು ಸಾರ್ವಜನಿಕರ ಹಿತ ಚಿಂತನೆಗೆ ಮುಂದಾಗಿದೆ. ಜೊತೆಗೆ ಉದ್ದಿಮೆಯ ಅವಕಾಶವನ್ನೂ ಕಲ್ಪಿಸಿಕೊಟ್ಟಿದೆ.

ಮಹಾನಗರ ಪಾಲಿಕೆ ಜಾಲತಾಣದಲ್ಲಿ ಜನಹಿತ ಹಾಗು ಉದ್ದಿಮೆ ರಹದಾರಿಯನ್ನು ಪಡೆದುಕೊಳ್ಳಲು "ವ್ಯಾಪಾರ್" ಎಂಬ ತಂತ್ರಾಂಶವನ್ನು ಜಾರಿಗೊಳಿಸಿದೆ. ನಗರ ಪಾಲಿಕೆಯು ಪೌರಾಡಳಿತ ನಿರ್ದೇಶನಾಲದ ಪ್ರಾಯೋಜಿಕತ್ವದಲ್ಲಿ ಈ ಅಂತರ್ಜಾಲ ಸೇವೆಯನ್ನು ಪ್ರಾರಂಭಿಸಲಾಗಿದ್ದು, ನಾಗರಿಕರು ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ.[ಮೈಸೂರು ಮಹಾನಗರ ಪಾಲಿಕೆ ಚುಕ್ಕಾಣಿ ಯಾವ ಪಕ್ಷಕ್ಕೆ?]

Mysore citizens can register their complaints through the Internet

ಇನ್ನು ಇದರಲ್ಲಿ ಕಟ್ಟಡದ ಲೈಸನ್ಸ್, ನಿರ್ಮಾಣ, ಕುಡಿಯುವ ನೀರು, ಹಾಗು ಒಳಚರಂಡಿ ಸಂಪರ್ಕವನ್ನು ಪಡೆದುಕೊಳ್ಳಲು ಜಲನಿಧಿ ಹಾಗೂ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಇ ಆಸ್ತಿ ತಂತ್ರಜ್ಞಾನವನ್ನು ಪರಿಚಯಿಸಲಾಗುವುದು ಅಲ್ಲದೆ ಜನನ, ಮರಣ ನೋಂದಣಿಗೂ ಅಂತರ್ಜಾಲ ವ್ಯವಸ್ಥೆ ರೂಪಿಸಲಾಗುವುದ ಎಂದು ಪಾಲಿಕೆ ಸದಸ್ಯರು ವಿವರಿಸಿದರು. ಇದರ ಜೊತೆಗೆ 080-23108108ಗೆ ಕರೆಮಾಡಿ ದೂರು ನೀಡಬಹುದು ಎಂದರು.

ಉದ್ದಿಮೆದಾರರಿಗೆ ಅನುಕೂಲವಾಗುವಂತೆ ವ್ಯಾಪಾರ್ ಯೋಜನೆಯನ್ನು ಅಂತರ್ಜಾಲದಲ್ಲಿ ಪರಿಚಯಿಸಲಾಗುತ್ತಿದ್ದು, ಜೊತೆಗೆ ವಲಯ ಕಚೇರಿಗಳಿಗೆ ತೆರಳಿ ಕೂಡ ಹಣ ಪಾವತಿ ಮಾಡಿ ಉದ್ದಿಮೆ ಲೈಸೆನ್ಸ್ ಪಡೆಯಬಹುದು. ವೃತ್ತಿ ಲೈಸನ್ಸ್ ಅನುಮೋದನೆ ಬಳಿಕ ಮಳಿಗೆ ಮಾಲೀಕರ ಮೊಬೈಲಿಗೆ ಎಸ್‍ಎಂಎಸ್ ಬರುವಂತಹ ವ್ಯವಸ್ಥೆ ಅಳವಡಿಸಲಾಗಿದೆ. ಲೈಸನ್ಸ್ ಅವಧಿ ಮುಗಿಯುವ ದಿನಾಂಕ ಸಂದೇಶ ಬರುವುದರಿಂದ ಮತ್ತೆ ರಿನಿವಲ್ ಮಾಡಿಸಿಕೊಳ್ಳಬಹುದು.

Mysore citizens can register their complaints through the Internet

ಹೀಗೆ ದೂರು ನೀಡಿ?
ಆನ್ ಲೈನ್ ಸರ್ವಿಸಸ್ಗೆ ಕ್ಲಿಕ್ ಮಾಡಿ ಕಂಪ್ಲೇಂಟ್ ರಿಜಿಸ್ಟ್ರೇಷನ್ ಲಿಂಕ್ ಕ್ಲಿಕ್ ಮಾಡಿ ದೂರುಗಳನ್ನು ದಾಖಲಿಸಬಹುದು. ಇದರ ಜೊತೆಗೆ ವಾಟ್ಸಾಪ್ ನಲ್ಲಿ ಕೂಡ ದೂರು ನೀಡುವ ವ್ಯವಸ್ಥೆ ಅಳವಡಿಸಲಾಗಿದೆ. ಮೊ.ಸಂ.8277777728ಕ್ಕೆ ವಾಟ್ಸಪ್ ಮೂಲಕ ಕೂಡ ದೂರು ದಾಖಲಿಸಬಹುದು.

ಉದ್ದಿಮೆ ಲೈಸನ್ಸ್ ನೋಂದಣಿ ಹೇಗೆ...?
ಮೈಸೂರು ನಗರಪಾಲಿಕೆಯ ವೆಬ್‍ಸೈಟ್ ಲಾಗಿನ್ ಆಗಿರಿ. ಮೇಲ್ಭಾಗದಲ್ಲಿರುವ ಸಿಟಿಜನ್ ಆನ್ ಲೈನ್ ಸರ್ವೀಸಸ್ ಎಂಬ ಟ್ಯಾಬನ್ನು ಕ್ಲಿಕ್ ಮಾಡಿ, ನಂತರ ಆನ್‍ಲೈನ್ ಅಪ್ಲಿಕೇಷನ್‍ಗಳ ಪಟ್ಟಿಯಲ್ಲಿರುವ ವ್ಯಾಪಾರ್ ಅನ್ನು ಕ್ಲಿಕ್ ಮಾಡಬೇಕು. ಅದರಲ್ಲಿ ಅರ್ಜಿಯ ನಮೂನೆ ತೆರೆದುಕೊಳ್ಳುತ್ತದೆ. ಅದರಲ್ಲಿರುವ ಕಲಂಗಳನ್ನು ತುಂಬಿ ನೋಂದಣಿ ಮಾಡಿಕೊಳ್ಳಬೇಕು.

English summary
Mysore citizens can register their complaints through the Internet. This system More people close to the Mysore City Corporation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X