ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಯ್ಯಪ್ಪಸ್ವಾಮಿ ಪ್ರಸಾದಕ್ಕೆ CFTRI ತಂತ್ರಜ್ಞಾನದ ಮೆರುಗು

By Srinath
|
Google Oneindia Kannada News

ಮೈಸೂರು, ಏ. 25: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ಪ್ರಸಾದ ನೋಡಿದರೇನೇ ಯಕ್ಕು ಅನ್ನುವ ಭಕ್ತರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಏನಪ್ಪಾ ಅಂದರೆ ಅಯ್ಯಪ್ಪಸ್ವಾಮಿ ಪ್ರಸಾದಕ್ಕೆ ಆಧುನಿಕ ತಂತ್ರಜ್ಞಾನದ ಲೇಪನವಾಗಲಿದ್ದು, ಇನ್ನು ಮುಂದೆ ರುಚಿಕಟ್ಟಾಗಿ ಮತ್ತು ತಾಜಾ ಆಗಿ ಪ್ರಸಾದ ಲಭ್ಯವಾಗಲಿದೆ.

ಸೇನಾಪಡೆಗಳಿಂದ ಹಿಡಿದು ಅನೇಕ ಸಂಕಷ್ಟ ಸಂದರ್ಭಗಳಲ್ಲಿ ಜನರಿಗೆ ಆಹಾರವನ್ನೊದಗಿಸುವ ಮಹತ್ತರ ಜವಾಬ್ದಾರಿ ನಿಭಾಯಿಸುತ್ತಿರುವ ಇಲ್ಲಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯು (CFTRI) ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಉತ್ತಮ ರೀತಿಯ ಅಯ್ಯಪ್ಪಸ್ವಾಮಿ ಪ್ರಸಾದ ತಯಾರಿಕೆಗೆ ಮುಂದಾಗಿದೆ.

ಅಯ್ಯಪ್ಪಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯು ಭಕ್ತರಿಗೆ ವಿತರಿಸುವ ಸ್ವಾದಿಷ್ಟ ಪ್ರಸಾದವನ್ನು ಸಂಪೂರ್ಣವಾಗಿ ಸ್ವಯಂಚಾಲಿತ ಯಂತ್ರಗಳಿಂದ ತಯಾರಿಸಲಾಗುವುದು. ಮಂಡಳಿಯು ಭಕ್ತರಿಗೆ 2 ರೀತಿಯ ಪ್ರಸಾದವನ್ನು ವಿತರಿಸುತ್ತದೆ: ಒಂದು, ಅಪ್ಪಂ ಮತ್ತೊಂದು ಅರವಣ.

ದೇಶದ ಪ್ರತಿಷ್ಠಿತ ಆಹಾರ ಸಂಶೋಧನಾ ಸಂಸ್ಥೆಯಾದ ಮೈಸೂರಿನ ಸಿಎಫ್ ಟಿಆರ್ ಐ ಸಂಸ್ಥೆಯು ಈ ಸಮಬಂಧ ಅಯ್ಯಪ್ಪಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಗೆ Travancore Devasthanam Board (TDB) ಸವಿಸ್ತಾರ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ.

mysore-cftri-automated-mechanism-to-produce-sabarimala-prasadam

ಅಪ್ಪಂ (ಬೆಲೆ 25 ರೂ) ಮತ್ತು ಅರವಣ (ಬೆಲೆ 60 ರೂ) ಪ್ರಸಾದವನ್ನು ಲಕ್ಷಾಂತರ ಮಂದಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ TDB ವಿತರಿಸುತ್ತಿದೆ. ಆದರೆ ಆ ಪ್ರಸಾದದ ಗುಣಮಟ್ಟದ ಬಗ್ಗೆ ಮತ್ತು ಅದರ ಬಾಳಿಕೆ ಬಗ್ಗೆ ಅನೇಕ ದೂರುಗಳು ಬರುತ್ತವೆ. ಅರವಣ ಪ್ರಸಾದವನ್ನು ನಾವು ಈಗಲೂ ಸ್ವಯಂಚಾಲಿತ ಯಂತ್ರಗಳಿಂದಲೇ ತಯಾರಿಸುತ್ತಿದ್ದೇವೆ. ಆದರೆ ಕೆಲವೇ ದಿನಗಳಲ್ಲಿ ಅದು ಒಣಗಿಹೋಗುತ್ತದೆ. ಪೇಪರ್ ಸುತ್ತಿದ್ದ ಡಬ್ಬಗಳಲ್ಲಿ ಅದನ್ನು ಶೇಖರಿಸಿಡುವುದರಿಂದ ಅದು ಬೇಗನೇ ಹಾಳಾಗುತ್ತಿದೆ ಎಂದು ನೂತನ ತಂತ್ರಜ್ಞಾನಕ್ಕೆ ಕೈಹಾಕಿರುವ CFTRI ವಿಜ್ಞಾನಿಗಳು ತಿಳಿಸಿದ್ದಾರೆ.

ಇನ್ನು ಕೈಯಲ್ಲೇ ತಯಾರಿಸುವ ಅಪ್ಪಂ ಸಹ ಹೆಚ್ಚು ಬಾಳಿಕೆ ಬರುತ್ತಿಲ್ಲ. ಬಾಳೆ ಹಣ್ಣು ಈ ಪ್ರಸಾದದ ಪ್ರಧಾನ ಅಂಶವಾಗಿದೆ. ಭಕ್ತರು ಬೆಟ್ಟದಿಂದಿಳಿದು 2-3 ದಿನಗಳಲ್ಲಿ ತಮ್ಮ ಮನೆಗಳನ್ನು ತಲುಪುವ ವೇಳೆಗೆ ಅದು ಹಳಸಿಹೋಗಿರುತ್ತದೆ. ಈ ಬಗ್ಗೆ ಭಕ್ತರು ಅನೇಕ ಬಾರಿ ದೂರು ನೀಡಿದ್ದಾರೆ. ಆದರೆ ಇನ್ನು ಮುಂದೆ automated technology ಮೂಲಕ ಒಳ್ಳೆಯ ಪ್ರಸಾದ ಭಕ್ತರ ಕೈಸೇರಲಿದೆ. ಪ್ರಸಾದದ ಮೂಲ ಸ್ವಾದಕ್ಕೆ ಧಕ್ಕೆ ಬಾರದಂತೆ ಹೆಚ್ಚು ಕಾಲ ಬಾಳಿಕೆ ಬರುವಂತಹ (ಸುಮಾರು 6 ತಿಂಗಳು) ಪ್ರಸಾದವನ್ನು ತಯಾರಿಸಿಕೊಡುವ ಜವಾಬ್ದಾರಿಯನ್ನು ನಾವು ನಿಭಾಯಿಸಲಿದ್ದೇವೆ' ಎಂದು ಅವರು ಹೇಳಿದ್ದಾರೆ.

ಅಂದರೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಅರವಣ ಪ್ರಸಾದವನ್ನು ಲೋಹದ ಕ್ಯಾನುಗಳಲ್ಲಿ ಮತ್ತು ಅಪ್ಪಂ ಪ್ರಸಾದವನ್ನು ಪ್ಲಾಸ್ಟಿಕ್ ಪೋಚ್ ಗಳಲ್ಲಿ ವಿತರಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ದಿನಕ್ಕೆ 3 ಲಕ್ಷ ಕ್ಯಾನುಗಳನ್ನು ತಯಾರಿಸಬಹುದಾಗಿದೆ.

ಅಂದಹಾಗೆ CFTRI ಸಂಸ್ಥೆಯು ಈಗಾಗಲೇ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಮತ್ತು ತಮಿಳುನಾಡು ಪಳನಿಯ ಮುರುಗ ದೇವಸ್ಥಾನದಲ್ಲಿಯೂ ಇಂತಹುದೇ ಪ್ರಸಾದ ವಿನಿಯೋಗ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದು ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಲಲಿತಾ ಆರ್ ಗೌಡ ಅವರು ತಿಳಿಸಿದ್ದಾರೆ.

English summary
Mysore CFTRI Automated Mechanism to produce Sabarimala Prasadam. The delicious prasadam at Sabarimala Sree Ayyappa Temple in Kerala will go high tech with Central Food Technological Research Institute (CFTRI), Mysore, providing an automated mechanism for processing and packaging the two kinds of prasadam - appam and aravana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X