ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಇದಕ್ಕಿದ್ದ ಹಾಗೆ ಪುಡಿ-ಪುಡಿಯಾಯ್ತು 2000 ನೋಟು…!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು , ಜನವರಿ 13 : ಇದ್ದಕ್ಕಿದ್ದ ಹಾಗೆ ಹೊಸ ನೋಟಿ ಪುಡಿಪುಡಿಯಾದರೆ ಆಶ್ಚರ್ಯ ಆಗೋದು ಸಾಮಾನ್ಯ, ಕೇಂದ್ರ ಸರ್ಕಾರದ ಅಪನಗದೀಕರಣ ಹಿನ್ನೆಲೆ ಹೊಸ ನೋಟುಗಳು ದೇಶಕ್ಕೆ ಲಗ್ಗೆಯಿಟ್ಟಿದ್ದವು. ಈ ನೋಟುಗಳು ಬೀರುವಿನಲ್ಲಿ ಭದ್ರವಾಗಿ ಇಟ್ಟಜಾಗದಲ್ಲಿಯೇ ಪುಡಿಯಾಗಿರುವ ಘಟನೆ ಮೈಸೂರಿನಲ್ಲಿ ಜರುಗಿದೆ.

ಮೈಸೂರಿನ ಪಡುವಾರಹಳ್ಳಿಯ ವಿನೋದ್ ಕುಮಾರ್ ಡಿಸೆಂಬರ್ 30 ರಂದು ವಿವಿ ಮೊಹಲ್ಲಾದ ಕರ್ನಾಟಕ ಬ್ಯಾಂಕ್ ನಿಂದ 10,000 ಹಣವನ್ನು 2 ಸಾವಿರ ಮುಖಬೆಲೆಯ 4 ನೋಟುಗಳು ಹಾಗೂ 100 ರೂ ಮುಖಬೆಲೆಯ 2 ಸಾವಿರ ಹಣವನ್ನು ಬ್ಯಾಂಕ್ ನಿಂದ ಡ್ರಾ ಮಾಡಿ ತಂದು ಬೀರುವಿನಲ್ಲಿಟ್ಟಿದ್ದರು. ಇಂದು (ಜ.13) ತಮ್ಮ ಜನ್ಮದಿನಕ್ಕೆಂದು ಹೊಸ ಮೊಬೈಲ್ ತೆಗೆದುಕೊಳ್ಳಲು ಬೀರುವಿನಿಂದ ಹಣ ತೆಗೆದು ಕೈಯಲ್ಲಿ ಹಿಡಿದರೆ ಪುಡಿಯಾಗುವುದು ಅನುಭವಕ್ಕೆ ಬಂದಿದೆ.[2000 ರು ನೋಟಿನಲ್ಲಿ ನ್ಯಾನೋ 'ಚಿಪ್' ಇರಲ್ಲ ಹುಡುಕಬೇಡಿ!]

Mysore breaking, powdered the 2000 new notes in the cupboard

2 ಸಾವಿರ ಮುಖಬೆಲೆಯ 4 ನೋಟುಗಳು ಗಾಂಧೀಜಿ ಭಾವಚಿತ್ರದ ಕಡೆ ಗೋಡೆಯ ಸುಣ್ಣ ಉದುರುವ ರೀತಿ ಉದುರುತ್ತಿದೆ. ಗಾಬರಿಯಿಂದ ಹಣ ತೆಗೆದುಕೊಂಡು ತಾವು ಡ್ರಾ ಮಾಡಿದ ಬ್ಯಾಂಕಿನವರ ಬಳಿ ಹೋದಾಗ, ಬ್ಯಾಂಕಿನವರು ಕರೆನ್ಸಿ ಸರಬರಾಜು ಮಾಡುವ ಎಸ್‌ಬಿಎಂ ಶಾಖೆಗೆ ಹೋಗುವಂತೆ ತಿಳಿಸಿದರು. ಅಲ್ಲಿ ಯಾವುದೇ ಸಿಬ್ಬಂದಿ ಇರದೆ ಗ್ರಾಹಕ ಕಂಗಾಲಾಗಿದ್ದಾರೆ.[ಬೆಂಗಳೂರಿನಲ್ಲಿ 2000 ರು ನಕಲಿ ನೋಟು, 4 ಬಂಧನ]

ಆರ್‌ಬಿಐ ಎಡವಟ್ಟು:

ಹೊಸ ನೋಟು ಪೂರೈಕೆಗಾಗಿ ದಿನದ 24 ಗಂಟೆ ಕೆಲಸ ಮಾಡುವ ಆರ್‌ಬಿಐ ನೋಟು ಮುದ್ರಣಕ್ಕೆ ಗುಣಮಟ್ಟದ ಕಾಗದ ಬಳಸದೆ ಈ ರೀತಿಯ ಎಡವಟ್ಟುಗಳು ಆಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಮೈಸೂರಿನ ಆರ್‌ಬಿಐ ಸ್ಪಷ್ಟೀಕರಣ ನೀಡಬೇಕೆಂದು ಗ್ರಾಹಕರು ಆಗ್ರಹಿಸಿದ್ದಾರೆ. ವಿಪರ್ಯಾಸವೆಂದರೆ ಮೈಸೂರಿನ ಆರ್‌ಬಿಐ ನೋಟು ಮುದ್ರಣ ಘಟಕದಲ್ಲಿ ಪ್ರಿಂಟ್ ಆದ 2 ಸಾವಿರ ಮುಖಬೆಲೆಯ ನೋಟು ಈ ರೀತಿ ಆಗಿರುವುದು ಸೋಜಿಗ ತಂದಿದೆ.

English summary
Mysore, breaking the 2000 notes, The Vinod Kumar home in cupboard 2000 note were like powered. Vinod kumar were perchese the mobile thatwies to put that money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X