ಆಸ್ಟ್ರೇಲಿಯಾದಲ್ಲಿ ಅಪಘಾತ: ನೇತ್ರಾ ಚಿಕಿತ್ಸೆಗೆ ಹರಿಯಿತು ಹಣದ ಹೊಳೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 25 : ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಅಪಘಾತಕ್ಕೀಡಾದ ಮೈಸೂರು ಮೂಲದ ಮಹಿಳೆ ನೇತ್ರಾ ಕೃಷ್ಣಮೂರ್ತಿ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆಗೆ ಅನೇಕ ದಾನಿಗಳು ಸ್ಪಂದಿಸಿ ಹಣದ ಹೊಳೆಯನ್ನೇ ಹರಿಸಿದ್ದಾರೆ.

ಕಳೆದ ಕೆಲವು ದಿನಗಳ ಕೆಳಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನೇತ್ರಾಗೆ ತೀವ್ರಕರ ಪೆಟ್ಟುಗಳಿಂದ ಕೋಮಾಗೆ ಜಾರಿದ್ದರು. ಈ ಹಿನ್ನಲೆ ಆಕೆಯನ್ನು ಮೆಲ್ಬರ್ನ್ ಅಲ್ ಫರ್ಡ್ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಪಘಾತದಿಂದಾಗಿ ಆಕೆಯ ಶ್ವಾಸಕೋಶ, ಮೂತ್ರಜನಕಾಂಗ ಹಾಗೂ ತಲೆಯ ಕೆಲವು ಭಾಗಗಳಿಗೆ ತೀವ್ರಕರವಾದ ಪೆಟ್ಟುಬಿದ್ದಿತ್ತು. ಈ ಕುರಿತು ಆಸ್ಪತ್ರೆಯ ವೈದ್ಯರ ತಂಡ ಆಕೆಗೆ ಶಸ್ತ್ರ ಚಿಕಿತ್ಸೆ ಹಾಗೂ ಪ್ಲಾಸ್ಟಿಕ್ ಸರ್ಜರಿ ಮಾಡಿ ಮೂಲಕ ಮರುಹುಟ್ಟು ನೀಡಿದ್ದಾರೆ.[ಮೆಲ್ಬರ್ನ್ ನಲ್ಲಿ ಅಪಘಾತ: ಕೋಮಾ ತಲುಪಿದ ಮೈಸೂರಿನ ನೇತ್ರಾ]

Mysore-based women escape the threat of the accident Nethra in Australia

ನೇತ್ರಾ ಪತಿ ಮೋಹನ್ ಕುಮಾರ್ ಹಾಗೂ ಸಂಬಂಧಿ ತನ್ವೀರ್ ಚೌಧರಿ ನೇತ್ರಾರ ಆಸ್ಪತ್ರೆಯ ಖರ್ಚು ವೆಚ್ಚ ಭರಿಸಲು ಆನ್ಲೈನ್ ಕ್ಯಾಂಪೆನ್ ಆರಂಭಿಸಿದ ಕೆಲವೇ ದಿನಗಳಲ್ಲಿ ಆಕೆಯ ಖಾತೆಗೆ ರು, 61 ಲಕ್ಷ ಹರಿದುಬಂದಿದೆ. ಇದು ಅವರ ಕುಟುಂಬಸ್ಥರಿಗೆ ಸಂತಸತಂದಿದ್ದು, ಆಕೆಗೆ ಮರುಜನ್ಮ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಕಳೆದ ಶುಕ್ರವಾರ ಮೆಲ್ಬರ್ನ್‍ನಲ್ಲಿ ವ್ಯಕ್ತಿಯೊರ್ವ ನಿರ್ಲಕ್ಷ್ಯಯಿಂದ ವಾಹನ ಚಾಲಾಯಿಸಿದ್ದರ ಪರಿಣಾಮ ವಾಹನವು ಪಾದಚಾರಿಗಳ ಮೇಲೆ ಮೇಲೇರಗಿತ್ತು. ಈ ಅಪಘಾತದಲ್ಲಿ ನೇತ್ರಾ ಅವರ ತಲೆಗೆ, ದೇಹದ ಇತರೆ ಭಾಗಗಳಾದ ಶ್ವಾಸಕೋಶ, ಮೂತ್ರಕೋಶ, ಪಕ್ಕೆಲುಬು ಹಾಗೂ ಇತರೆ ಭಾಗಗಳಿಗೆ ತೀವ್ರ ಗಂಭೀರ ಗಾಯಗಳಾಗಿತ್ತು.

ಇನ್ನು ನೇತ್ರಾ ಮೂಲತಃ ಮೈಸೂರಿನವಳಾಗಿದ್ದು ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತನ್ನ ಸಿವಿಲ್ ಇಂಜಿಯರಿಂಗ್ ಪದವಿ ಮುಗಿಸಿ, ಇಲ್ಲಿಯವರೇ ಆದ ಮೋಹನ್ ರನ್ನು ವಿವಾಹವಾಗಿ ಕೆಲಸಕ್ಕೆಂದು ಆಸ್ಟ್ರೇಲಿಯಾಕ್ಕೆ ತೆರಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nethra Krishnamurthy Mysore-based woman has escaped the threat now. Nethra in a road accident, the worst in the last few days unhealthy. This background they are giving treated her in Melbourne Al Oxford hospital.
Please Wait while comments are loading...