• search

ಮೈಸೂರಿನಲ್ಲಿ ಕಳೆಗಟ್ಟಿದ ರಂಜಾನ್ ಸಡಗರ: ಎಲ್ಲೆಲ್ಲೂ ಸಮೋಸದ ಘಮಲು

By ಯಶಸ್ವಿನಿ ಎಂ.ಕೆ
Subscribe to Oneindia Kannada
For mysore Updates
Allow Notification
For Daily Alerts
Keep youself updated with latest
mysore News
    Ramzan 2018 : ಮೈಸೂರಿನಲ್ಲಿ ರಂಜಾನ್ ಹಬ್ಬದ ಸಡಗರವೋ ಸಡಗರ | Oneindia Kannada

    ಮೈಸೂರು, ಜೂನ್ 14 : ರಂಜಾನ್ ಆಚರಣೆಯ ರಂಗು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕಳೆಗಟ್ಟಿದೆ. ಮಸೀದಿಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಮೀನಾ ಬಜಾರ್ ನಲ್ಲಂತೂ ಕಾಲಿಡಲು ಜಾಗವೇ ಇಲ್ಲ.

    ಸಾಡೆ ರಸ್ತೆಯಲ್ಲಿ ಕಳೆದ ಕೆಲದಿನಗಳಿಂದ ವ್ಯಾಪಾರದ ಭರಾಟೆ ತುಸು ಜೋರಾಗಿಯೇ ಇದೆ. ಸಂಜೆ ಪ್ರಾರ್ಥನೆ ನಂತರ ನೂರಾರು ಆಹಾರ ಮಳಿಗೆಗಳು ಪುಟ್ಟಪುಟ್ಟ ದೀಪ ಹಚ್ಚಿಕೊಂಡು ಝಗಮಗವೆಂದು ವ್ಯಾಪಾರಕ್ಕೆ ಸಿದ್ಧವಾಗುತ್ತವೆ. ಪ್ರತಿ ಅಂಗಡಿಯಲ್ಲೂ ಭರ್ಜರಿ ವ್ಯಾಪಾರ. ಬಡಾವಣೆಗಳಲ್ಲಂತೂ ಸಮೋಸದ ಘಮಲ ಹೇಳತೀರದು.

    ಬಾಗಲಕೋಟೆಯಲ್ಲಿ ರಂಜಾನ್ ಸಂಭ್ರಮ: ಆಚರಣೆ, ಸಿದ್ಧತೆ ಹೀಗಿದೆ ನೋಡಿ...

    ಪ್ರತಿ ವರ್ಷದಂತೆ ಈ ವರ್ಷವೂ ರಂಜಾನ್ ಆಚರಣೆಗೆ ಮೈಸೂರಿನ ಮುಸ್ಲಿಂ ಸಮುದಾಯ ಸಿದ್ಧತೆ ನಡೆಸಿದ್ದು, ಆಚರಣೆಯ ಒಂದು ನೋಟ ಇಲ್ಲಿದೆ...

     ತಲೆ ಎತ್ತಿ ನಿಂತಿವೆ ಮಳಿಗೆಗಳು

    ತಲೆ ಎತ್ತಿ ನಿಂತಿವೆ ಮಳಿಗೆಗಳು

    ಮಸೀದಿಗಳ ಬಳಿ ಹಣ್ಣಿನ ಅಂಗಡಿ, ಸಿಹಿ ಖಾದ್ಯ ಮತ್ತು ಮಾಂಸಾಹಾರದ ಮಳಿಗೆಗಳು ತಲೆಯೆತ್ತಿವೆ. ಹಲೀಮದಿಂದ ಹಿಡಿದು ಕಬಾಬ್, ತೀತರ್ ಘೋಷ್‌, ಫಿಶ್‌ ಫ್ರೈ, ಚಿಕನ್‌ ಫಾಲ್ ಗರಮಾ ಗರಂ ಮಾಂಸಾಹಾರ ಭಕ್ಷ್ಯಗಳ ಅಂಗಡಿಗಳು ಸಾಲುಸಾಲಾಗಿವೆ. ಸಿಹಿ ತಿನಿಸು ಮತ್ತು ಹರೀರಾಗಳು ರಂಜಾನ್ ಕಳೆ ಹೆಚ್ಚಿಸಿವೆ.

    ದಿನವಿಡೀ ಉಪವಾಸ ವ್ರತನಿರತರು ಸಂಜೆ ಮಸೀದಿಯಲ್ಲಿ ಪ್ರಾರ್ಥನೆ ಬಳಿಕ ಸೇವಿಸುವ ಆಹಾರದಲ್ಲಿ ಸಮೋಸಕ್ಕೆ ಅಗ್ರಸ್ಥಾನ. ಪ್ರತಿ ಮಸೀದಿ ಬಳಿ ಹಣ್ಣು, ಸಮೋಸ, ಕಚೋರಿ, ಬಟಾಟೆ ವಡಾ, ಪಾವ್ ಬಾಜಿ, ಬೋಂಡ, ಮೆಣಸಿನಕಾಯಿ ಬಜ್ಜಿ ಸೇರಿದಂತೆ ಹಲವು ಖಾದ್ಯಗಳ ಖರೀದಿಗೆ ಅಂಗಡಿಗಳ ಮುಂದೆ ಜನ ಸಂತೆಯಂತೆ ಸೇರಿದ ಚಿತ್ರ ಸಾಮಾನ್ಯವಾಗಿದೆ

     ಕಾಲಿಡಲು ಜಾಗವೇ ಇಲ್ಲ

    ಕಾಲಿಡಲು ಜಾಗವೇ ಇಲ್ಲ

    ಹಬ್ಬದ ವಸ್ತುಗಳ ಖರೀದಿಗೆ ಪ್ರಶಸ್ತ ತಾಣ ಎನಿಸಿರುವ ಮೀನಾ ಬಜಾರ್‌ ಮತ್ತು ಸಾಡೆ ರಸ್ತೆಯಲ್ಲಿ ಕಳೆದ ಕೆಲದಿನಗಳಿಂದ ವ್ಯಾಪಾರದ ಭರಾಟೆ ಜೋರಾಗಿದೆ. ಹಬ್ಬದ ಮುನ್ನಾದಿನ ತಡರಾತ್ರಿಯವರೆಗೂ ಇಲ್ಲಿ ಭರ್ಜರಿ ವ್ಯಾಪಾರ ಮುಂದುವರೆಯಲಿದೆ.

    ರಂಜಾನ್ ಗೆ ಇನ್ನೆರಡು ದಿನ ಇರುವಾಗಲೇ ಖರೀದಿಯ ಭರಾಟೆ ಜೋರಾಗಿದ್ದಿದ್ದು ಕಂಡುಬಂತು. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಉಡುಪು, ಪಾದರಕ್ಷೆ ದೊರೆಯುವ ಕಾರಣ ಬಡವರು ಮತ್ತು ಮಧ್ಯಮವರ್ಗದವರು ಹಬ್ಬದ ಖರೀದಿಗೆ ಇಲ್ಲಿಗೆ ದಾಂಗುಡಿ ಇಡುತ್ತಾರೆ.

     ಎಲ್ಲಾ ಧರ್ಮದವರು ಬರುತ್ತಾರೆ

    ಎಲ್ಲಾ ಧರ್ಮದವರು ಬರುತ್ತಾರೆ

    ಪುರುಷರಿಗೆ ಹತ್ತು ಹಲವು ಬಗೆಯ ಟೋಪಿ, ಸಲ್ವಾರ್ ಕಮೀಜ್, ಕುರ್ತಾ, ಪೈಜಾಮ ಇಲ್ಲಿ ಲಭ್ಯವಿದ್ದರೆ, ಮಹಿಳೆಯರು ಚೂಡಿದಾರ್ , ಡ್ರೆಸ್ ಮೆಟೀರಿಯಲ್, ಸಿದ್ಧ ಉಡುಪು, ವ್ಯಾನಿಟಿ ಬ್ಯಾಗ್‌, ಪಾದರಕ್ಷೆ, ಬುರ್ಖಾ, ಸೌಂದರ್ಯವರ್ಧಕ ಸಾಧನಗಳ ಖರೀದಿಗೆ ಇಲ್ಲಿಗೆ ಬರುವರು.

    ಕೇವಲ ಮುಸ್ಲಿಮರು ಮಾತ್ರವಲ್ಲದೆ, ಇತರ ಧರ್ಮದವರೂ ಖರೀದಿಗೆ ಇಲ್ಲಿಗೆ ಬರುತ್ತಾರೆ. ಮಕ್ಕಳ ಪಾದರಕ್ಷೆಗಳ ಮಾರಾಟಕ್ಕೆ 20ಕ್ಕೂ ಅಧಿಕ ಅಂಗಡಿಗಳು ಇಲ್ಲಿವೆ.

     ವ್ಯಾಪಾರಿಗಳು ಏನ್ ಹೇಳ್ತಾರೆ?

    ವ್ಯಾಪಾರಿಗಳು ಏನ್ ಹೇಳ್ತಾರೆ?

    "ಬೆಂಗಳೂರು ಮತ್ತು ಮುಂಬೈನಿಂದ ಪಾದರಕ್ಷೆಗಳನ್ನು ತಂದು ಮಾರಾಟ ಮಾಡುತ್ತೇನೆ. ರಂಜಾನ್ ತಿಂಗಳ ಕೊನೆಯ ಹತ್ತು ದಿನ ವ್ಯಾಪಾರ ನಾಲ್ಕೈದು ಪಟ್ಟು ಹೆಚ್ಚಾಗುತ್ತದೆ" ಎಂದು ಪಾದರಕ್ಷೆ ವ್ಯಾಪಾರಿ ಅಲ್ತಾಫ್ ಹೇಳಿದರು.

    "ಇನ್ನು ಮಹಿಳೆಯರು ಪ್ರತಿ ವರ್ಷ ಹೊಸ ಶೈಲಿಯ ಉಡುಪು ಮತ್ತು ಪಾದರಕ್ಷೆಗಳನ್ನು ಬಯಸುವರು. ಇದಕ್ಕಾಗಿ ನವೀನ ಮಾದರಿಯ, ಹೊಸ ಫ್ಯಾಷನ್ ಉಡುಪುಗಳನ್ನು ತಂದು ಮಾರಾಟ ಮಾಡುತ್ತೇವೆ" ಎಂದು ವ್ಯಾಪಾರಿ ಅನ್ವರ್ ಹೇಳಿದರು. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಇಲ್ಲಿ ಖರೀದಿಗೆ ಬರುತ್ತಾರೆ.

     ಈದ್ಗಾ ಮೈದಾನಕ್ಕೆ ಬರುತ್ತದೊಂದು ಶವ !

    ಈದ್ಗಾ ಮೈದಾನಕ್ಕೆ ಬರುತ್ತದೊಂದು ಶವ !

    ಕಳೆದ 43 ವರುಷಗಳಿಂದ ರಂಜಾನ್ ದಿನ ಈದ್ಗಾ ಮೈದಾನ ದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ವೇಳೆ ಒಂದು ಶವ ಬರುತ್ತದೆ. ಅದರ ಆತ್ಮ ಸದ್ಗತಿಯಾಗಲಿ ಎಂದು ಪ್ರಾರ್ಥಿಸಿಯೇ ಇಲ್ಲಿಯ ಮುಸಲ್ಮಾನ ಬಂಧುಗಳು ಹಬ್ಬ ಆಚರಿಸುತ್ತಾರೆ.

    ಆಗಿನಿಂದ ನಡೆದು ಬಂದ ಸಂಪ್ರದಾಯ ಈಗಲೂ ಮುಂದುವರೆಯುತ್ತಿದೆ. ಪ್ರತಿ ರಂಜಾನ್ ಪ್ರಾರ್ಥನೆಯ ವೇಳೆ ಓರ್ವ ಮುಸ್ಲಿಂ ವ್ಯಕ್ತಿ ಸಾವಿಗೀಡಾಗುತ್ತಲೇ ಬಂದಿರುವುದು ಇಲ್ಲಿನವರಿಗೆ ಅಚ್ಚರಿ ಹಾಗೂ ಪವಾಡದ ವಿಷಯವೇ ಸರಿ.
    ಈ ರೀತಿ ರಂಜಾನ್ ದಿನವೇ ವ್ಯಕ್ತಿಗಳು ಸ್ವಾಭಾವಿಕವಾಗಿ ನಗರದ ಎಲ್ಲಿಯಾದರೂ ಸತ್ತರೂ ಅವರನ್ನು ಈದ್ಗಾ ಮೈದಾನಕ್ಕೆ ತಂದು ಅವರಿಗೆ ವಿಶೇಷ ನಮಾಜ್ ಮಾಡುತ್ತಾರೆ.

    ಇನ್ನಷ್ಟು mysore ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Muslim community celebrating sacred festival Ramzan happily in Mysuru district. Roja started from May 17 and will be completed in two days.Business in Meena Bazaar has increased.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more