ಕೋರ್ಟ್ ಆದೇಶದ ಮೇರೆಗೆ ಮೂಡಾ ವಿಶೇಷಾಧಿಕಾರಿಗಳ ಕಚೇರಿ ಜಪ್ತಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 11: ರೈತರ ಭೂಸ್ವಾಧೀನ ಪರಿಹಾರ ಹಣವನ್ನು ನೀಡದ ಹಿನ್ನೆಲೆಯಲ್ಲಿ ಮೈಸೂರು ಎರಡನೇ ಜೆಎಂಎಫ್ ಸಿ ನ್ಯಾಯಾಲಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA)ದ ವಿಶೇಷ ಭೂಸ್ವಾಧೀನ ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ.

ಮೂಡಾದ ವಿಶೇಷ ಭೂ ಸ್ವಾಧೀನ ಕಚೇರಿ ರೈತರ ಭೂ ಸ್ವಾಧೀನಕ್ಕೆ ನೀಡಬೇಕಾಗಿದ್ದ ಪರಿಹಾರವನ್ನ ನೀಡದೆ ಸತಾಯಿಸುತ್ತಿತ್ತು, ಇಲ್ಲಿನ ಉತ್ತನ ಹಳ್ಳಿ ಗ್ರಾಮದ ಕರಿಯಪ್ಪ ಎಂಬ ರೈತನಿಗೆ ನೀಡಬೇಕಿದ್ದ ಬಾಕಿಹಣವನ್ನು 10 ವರ್ಷವಾದರೂ ನೀಡಿರಲಿಲ್ಲ.[ಮೈಸೂರಿನಲ್ಲಿ ವಿಮಾನಯಾನ ಆರಂಭಿಸಲು ಪ್ರತಾಪ್ ಸಿಂಹ ಮನವಿ]

MUDA's Land Acquisition Officer's office has Confiscated in Mysuru

ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದ ಕರಿಯಪ್ಪ ಈಗಿನ ಮಾರ್ಕೆಟ್ ದರದಲ್ಲಿ 1.3 ಲಕ್ಷಕ್ಕೂ ಹೆಚ್ಚು ಹಣ ನೀಡಬೇಕೆಂದು ಮೈಸೂರಿನ ಎರಡನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಈ ಸಂಬಂಧ ದಾವೆ ಹೂಡಿದ್ದರು. ನ್ಯಾಯಾಲಯ ದಾವೆಯನ್ನು ಪರಿಶೀಲಿಸಿ ರೈತನಿಗೆ ತಕ್ಷಣ ಬಾಕಿ ಹಣ ನೀಡುವಂತೆ ಆದೇಶ ನೀಡಿತ್ತು.[ಅಪ್ರಾಪ್ತನನ್ನು ವರಿಸಿದ 24ರ ಯುವತಿ : ಠಾಣೆಯ ಮೆಟ್ಟಿಲೇರಿದ ಪ್ರಕರಣ]

MUDA's Land Acquisition Officer's office has Confiscated in Mysuru

ಮೂಡಾ ವಿಶೇಷ ಭೂ ಸ್ವಾಧಿನ ಕಚೇರಿಗೆ ನಿನ್ನೆ ಆಗಮಿಸಿದ ಕೋರ್ಟ್ ಸಿಬ್ಬಂದಿ ಕಚೇರಿಯ ಪೀಠೋಪಕರಣ ಜಪ್ತಿ ಮಾಡಿದ್ದಾರೆ. ಈ ವೇಳೆ ಭೂಸ್ವಾಧೀನ ಕಚೇರಿಯ ಅಧಿಕಾರಿಗಳು ಮಾಧ್ಯಮದವರನ್ನು ಕಂಡು ಓಟ ಕಿತ್ತಿದ್ದು, ಎಲ್ಲರನ್ನೂ ನಗೆ ಪಾಟಲಿಗೀಡುಮಾಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Urban Development Authority's Land Acquisition Officer's office has Confiscated today. The Land Acquisition Office has not distributed Compensation to the farmers yet. For this reason 2nd JMFC court of Mysuru has ordered to Confiscate the office.
Please Wait while comments are loading...