ಹಣತೆ ತಯಾರಿಸುವ ಕುಂಬಾರ ಬದುಕಲ್ಲಿ ಬರಲಿಲ್ಲ ದೀಪಾವಳಿ!

Posted By:
Subscribe to Oneindia Kannada

ಮೈಸೂರು, ಅಕ್ಟೋಬರ್ 18 : ದೀಪಗಳ ಹಬ್ಬದಲ್ಲಿ ಹಣತೆಯದ್ದೇ ಕಾರು ಬಾರು ಬಲು ಜೋರು. ಆದರೆ ಇಂದಿನ ದೈನಂದಿನ ಬದುಕಿನಲ್ಲಿ ಕುಂಬಾರ ನಲುಗಿ ಹೋಗಿದ್ದಾನೆ. ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಕುಂಬಾರರ ಮಣ್ಣಿನ ಹಣತೆ ಆರುತ್ತಿದ್ದು, ಕುಂಬಾರರ ಬದುಕು ಕತ್ತಲಾಗುತ್ತಿದೆ. ಜೇಡಿ ಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಕುಂಬಾರ ಜೀವನ ಅಕ್ಷರಶಃ ಕತ್ತಲಲ್ಲಿ ಮುಳುಗುತ್ತಿದೆ.

ಜನ-ಮನ ಸೂರೆಗೊಂಡ ಮಂಗಳೂರಿನ ಗೂಡು ದೀಪ ಸ್ಪರ್ಧೆ

ದೂರದ ಸ್ಥಳಗಳಿಂದ ಜೇಡಿ ಮಣ್ಣು ತಂದು ಹದ ಮಾಡಿ ತಮ್ಮ ಕೈಚಳಕದಿಂದ ವಿವಿಧ ವಿನ್ಯಾಸದ ಹಣತೆಗಳನ್ನು ತಯಾರಿಸಿ, ಸುಟ್ಟು ಮಾರುಕಟ್ಟೆಗೆ ತಂದು 10ರಿಂದ 15 ರೂ.ಗಳಿಗೆ ಡಜನ್‌ (ಹಣತೆ) ಎಂದರೂ ಗ್ರಾಹಕರು ಖರೀದಿಸದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ ಸಂಗತಿ. ಚೀನಿ ಮಣ್ಣಿನ ಹಣತೆಗಳು, ಹೊಳಪಿನ ಮೈಮಾಟವುಳ್ಳ, ವೈವಿಧ್ಯಮಯ ಕಲಾ ಚಿತ್ತಾರ ಹೊಂದಿರುವ ಪಿಂಗಾಣಿ ಹಣತೆಗಳಿಗೆ ಬಹುತೇಕ ಜನರು ಮಾರುಹೋಗಿದ್ದೇ ಕುಂಬಾರರ ಈ ಗೋಳಿಗೆ ಕಾರಣ.

ದಶಕದ ಹಿಂದೆ ಲಕ್ಷ ಲಕ್ಷ ಹಣತೆಗಳನ್ನು ತಮ್ಮ ಮನೆ ಮುಂದೆ ಮಾರಾಟ ಮಾಡುತ್ತಿದ್ದ ಕುಂಬಾರ ಕುಟುಂಬಗಳು ಐದಾರು ವರ್ಷಗಳಿಂದ ಸಾವಿರ ಲೆಕ್ಕದಲ್ಲಿ ಹಣತೆಗಳನ್ನು ಮಾರಾಟ ಮಾಡಿ ತಮ್ಮ ಬದುಕಿನ ಬಂಡಿ ಸಾಗಿಸುತ್ತಿವೆ. ಹಣತೆ ತಯಾರಿಸಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು ಈಗ ಬೇರೆ ವೃತ್ತಿಯತ್ತ ಮುಖ ಮಾಡಿದ್ದಾರೆ.

ದೀಪಾವಳಿಯಲ್ಲಿ ಪಟಾಕಿ ಸಿಡಿಸುವವರು ಎಚ್ಚರವಾಗಿರಿ!

ದಶಕದ ಹಿಂದಿನವರೆಗೂ ಹಣತೆ ಮಾಡುವ ಕುಂಬಾರರ ಕುಟುಂಬಗಳಿಗೆ ದೀಪಾವಳಿ ಬಂತೆಂದರೆ ಅದೊಂದು ಅಕ್ಷರಶಃ ಅವರ ಬದುಕಿನ ಬೆಳಕಿನ ಹಬ್ಬವೇ ಆಗಿತ್ತು. ದೀಪಾವಳಿಗೆ ಎರಡು ತಿಂಗಳು ಮುಂಚೆಯೇ ಲಾರಿಗಟ್ಟಲೆ ಜೇಡಿ ಮಣ್ಣನ್ನು ತಂದು ಹದ ಮಾಡಿ ಮನೆಯೊಳಗೆ, ಅಂಗಳ, ಖಾಲಿ ಜಾಗೆ ಇದ್ದಲ್ಲೆಲ್ಲ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಣತೆಗಳನ್ನು ಮಾಡಿ ಆರಲು ಇಡುತ್ತಿದ್ದರು. ಬಳಿಕ ಅದನ್ನು ಚೆನ್ನಾಗಿ ಸುಟ್ಟು ಮಾರುಕಟ್ಟೆಗೆ ತರುತ್ತಿದ್ದರು.

ದೀಪಾವಳಿ ಆಚರಣೆ ಹಿಂದಿದೆ ಪುರಾಣದ ಬೆಸುಗೆ!

ಗ್ರಾಹಕರಂತೂ ಮುಗಿಬಿದ್ದು ಮಣ್ಣಿನ ಹಣತೆಗಳನ್ನು ಒಬ್ಬೊಬ್ಬರು 30-40 ಹಣತೆಗಳನ್ನು ಒಯ್ಯುತ್ತಿದ್ದರು. ಈಗ ಅದೆಲ್ಲವೂ ಇತಿಹಾಸವಾಗಿದೆ. ಬೆರಳೆಣಿಕೆ ಸಂಖ್ಯೆಯಲ್ಲಿ ಮಣ್ಣಿನ ಹಣತೆ ಒಯ್ಯುವರ ಸಂಖ್ಯೆಯೂ ವಿರಳವಾಗುತ್ತಿದೆ. ಹೀಗಾಗಿ ಕುಂಬಾರರ ಬಾಳಿಗೆ ದೀಪಾವಳಿ ಬೆಳಕು ನೀಡುವ ಹಬ್ಬವಾಗಿ ಉಳಿದಿಲ್ಲ.

ಎಲ್‌ಇಡಿ ದೀಪ

ಎಲ್‌ಇಡಿ ದೀಪ

ಆಧುನಿಕತೆ ಎಷ್ಟು ವೇಗವಾಗಿ ಸಾಗಿದೆ ಎಂದರೆ ಇಲ್ಲಿಯವರೆಗೂ ಮಣ್ಣಿನ ಹಣತೆ ಯಾಗವನ್ನು ಆವರಿಸಿದ್ದ ಪಿಂಗಾಣಿ ದೀಪಗಳೂ ಸಹ ಈಗ ಮರೆಯಾಗುತ್ತಿದ್ದು ಗ್ರಾಹಕರು ಎಲ್‌ಇಡಿ ದೀಪಗಳಿಗೆ ಮೋರೆ ಹೋಗುತ್ತಿದ್ದಾರೆ. ಮಾರುಕಟ್ಟೆಗೆ ಎಲ್‌ಸಿಡಿ ದೀಪಗಳು ಬಂದಿದ್ದು ಕಡಿಮೆ ವಿದ್ಯುತ್‌ ನಿಂದ ಹೆಚ್ಚು ಪ್ರಕಾಶಮಾನವಾಗಿ ದೀರ್ಘ‌ ಕಾಲದವರೆಗೆ ಬೆಳಕು ನೀಡಲು ಮುಂದಾಗಿದ್ದು, ಇವುಗಳಿಗೀಗ ಗ್ರಾಹಕ ಮುಗಿಬಿದ್ದಿದ್ದಾನೆ.

ಬೂದಿ ಕಕ್ಕುವ ಬದುಕು

ಬೂದಿ ಕಕ್ಕುವ ಬದುಕು

ಆಧುನಿಕತೆಯ ಭರಾಟೆಯ ಕಾರಣದಿಂದ ಈ ಮಣ್ಣಿನ ಹಣತೆ ಮೂಲೆ ಸೇರುತ್ತಿದ್ದು ಕಲವೇ ಕೆಲವು ಕಟ್ಟಾ ಸಂಪ್ರದಾಯಸ್ಥರು ಮಾತ್ರ ಮಣ್ಣಿನ ಹಣತೆ ಖರೀದಿಸುವಂತಾಗಿದೆ. ಹಲವಾರು ವರ್ಷಗಳಿಂದ ಕಂಬಾರಿಕೆ ವೃತ್ತಿ ಮಾಡತ್ತ ಬಂದವರು ಈಗ ಬೇರೆ ವೃತಿಯತ್ತ ಮುಖ ಮಾಡಿದ್ದಾರೆ. ಆದರೆ, ಕುಂಬಾರಿಕೆಯಿಂದ ಕುಟುಂಬ ನಿರ್ವಹಣೆ ಹೊರತುಪಡಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಆಗುತ್ತಿಲ್ಲ. 'ಮಹಾರಾಷ್ಟ್ರದ ಸಾಂಗಲಿ, ಮಿರಜ್, ತಾಸಗಾಂವ, ಮಾಧವನಗರ ಮುಂತಾದ ಪಟ್ಟಣಗಳಿಗೆ ಪ್ರತಿ ವರ್ಷ ಲಕ್ಷಾಂತರ ಪ್ರಣತಿಗಳನ್ನು ತಯಾರಿಸಿ ಇಲ್ಲಿಂದ ಸರಬರಾಜು ಮಾಡಲಾಗುತ್ತಿದೆ. ಪ್ರತಿ ವರ್ಷ ದೀಪಾವಳಿಗೂ ಮುನ್ನವೇ ಮಹಾರಾಷ್ಟ್ರದ ವ್ಯಾಪಾರಿಗಳು ತಮಗೆ ಇಂತಿಷ್ಟು ಪ್ರಣತಿಗಳು ಬೇಕು ಎಂದು ಆರ್ಡರ್‌ ಕೊಡುತ್ತಾರೆ. ಅವರ ಬೇಡಿಕೆಗೆ ತಕ್ಕಂತೆ ಎರಡು ತಿಂಗಳು ಶ್ರಮ ವಹಿಸಿ ಹಣತೆಗಳನ್ನು ತಯಾರಿಸಿ ಕೊಡುತ್ತೇವೆ' ಎಂದು ರಾಜು ಕುಂಬಾರ ಹೇಳುತ್ತಾರೆ.

ನಿರೀಕ್ಷಿತ ಲಾಭವಿಲ್ಲ

ನಿರೀಕ್ಷಿತ ಲಾಭವಿಲ್ಲ

ಇಲ್ಲಿನ ಕುಂಬಾರ ಕುಟುಂಬಗಳು ತಯಾರಿಸುವ ಸಾಂಪ್ರದಾಯಿಕ ಮಣ್ಣಿನ ಪ್ರಣತಿ (ಹಣತೆ)ಗಳಿಗೆ ಮಹಾರಾಷ್ಟ್ರದಲ್ಲಿ ಭಾರಿ ಬೇಡಿಕೆ. ಇಲ್ಲಿಂದ ಪ್ರತಿ ವರ್ಷ ದೀಪಾವಳಿಗೆ ಲಕ್ಷ, ಲಕ್ಷ ಪ್ರಣತಿಗಳು ಅಲ್ಲಿನ ವಿವಿಧ ಮಾರುಕಟ್ಟೆಗಳಿಗೆ ಸರಬರಾಜು ಆಗುತ್ತವೆ. ಆದರೂ, ಇತ್ತೀಚಿನ ವರ್ಷಗಳಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗಿ ನಿರೀಕ್ಷಿತ ಲಾಭ ದೊರಕುತ್ತಿಲ್ಲ ಎಂಬುದು ಬೇಸರದ ಸಂಗತಿ.

ಇತ್ತ ಪಟಾಕಿತ್ತಲೂ ಸುಳಿಯದ ಜನರು

ಇತ್ತ ಪಟಾಕಿತ್ತಲೂ ಸುಳಿಯದ ಜನರು

ನಗರದ ಜೆ.ಕೆ.ಮೈದಾನ ಸೇರಿದಂತೆ ವಿವಿಧ ಬಡಾವಣೆಗಳ ಬಯಲು ಪ್ರದೇಶದಲ್ಲಿ ಪಟಾಕಿ ಮಾರಾಟ ಮಳಿಗೆಗಳು ಗ್ರಾಹಕರಿಂದ ತುಂಬಿದ್ದವು. ಈ ಬಾರಿ ಸುಪ್ರೀಂ ಕೋರ್ಟ್ ಪಟಾಕಿ ಮಾರಾಟವನ್ನು ದೆಹಲಿಯಲ್ಲಿ ನಿಷೇಧಗೊಳಿಸಿದ್ದು, ಇದರ ಪರಿಣಾಮ ಸರಿಸುಮಾರು ಎಲ್ಲೆಡೆಯೂ ಕಂಡು ಬರುತ್ತಿದ್ದು, ಮೈಸೂರಿನಲ್ಲಿಯೂ ಪರಿಸರವಾದಿಗಳು ಪಟಾಕಿ ಸಿಡಿಸಲು ವಿರೋಧ ವ್ಯಕ್ತಪಡಿಸುತ್ತಿದ್ದು, ಪಟಾಕಿಗಳ ಮಾರಾಟ ತುಸು ಕಡಿಮೆಯಾಗಿದೆ. ಕಳೆದೆರಡು ವರ್ಷಗಳ ಹಿಂದೆ ಪಟಾಕಿ ಅಂಗಡಿಗಳಿಗೆ ಜನ ಮುಗಿ ಬೀಳುತ್ತಿದ್ದರು. ಆದರೆ ಪರಿಸರ ಮಾಲಿನ್ಯ ಹೆಚ್ಚುತ್ತಿದ್ದು, ಎಲ್ಲೆಡೆ ಜಾಗೃತಿ ನಡೆಸುತ್ತಿರುವುದರಿಂದ ಜನತೆ ಪಟಾಕಿಗಳ ಮೇಲೆ ಒಲವು ತೋರುತ್ತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mud lamps lost thier popularity after many attractive lamps came into market. Now the mud lamp producers life in Mysuru become a tragedy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ