ಮಳೆಯಿಲ್ಲದೆ ಕಂಗಾಲಾಗಿದ್ದ ಮೈಸೂರಿಗೆ ವರುಣನ ಸಾಂತ್ವನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಅಕ್ಟೋಬರ್ 11 : ವರುಣನ ಸಿಂಚನ.. ನೆರೆದ ಅಸಂಖ್ಯ ಪ್ರೇಕ್ಷಕರ ಹರ್ಷೋಧ್ಘಾರದ ನಡುವೆ ಐತಿಹಾಸಿಕ ಮೈಸೂರು ದಸರಾದ ಜಂಬೂಸವಾರಿಯ ಮೆರವಣಿಗೆ ಮಧ್ಯಾಹ್ನ 2.16 ಘಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಂಧಿಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಿದರು.

ಕಳೆದ ಕೆಲವು ದಿನಗಳಿಂದ ಮಳೆಯಿಲ್ಲದೆ ಬಿಸಿಲಿಗೆ ಸಿಲುಕಿ ಬೆವತಿದ್ದ ಜನರಿಗೆ ದಸರಾ ದಿನದಂದು ಮಳೆ ಸುರಿಯುತ್ತದೆ ಎಂಬ ಕಲ್ಪನೆಯೇ ಇರಲಿಲ್ಲ. ಮಧ್ಯಾಹ್ನದ ವೇಳೆಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳ್ಳಿಯ ರಥದಲ್ಲಿ ಕುಳಿತು ವಿಜಯಯಾತ್ರೆಯಲ್ಲಿ ಹೊರಟು ಭುವನೇಶ್ವರಿ ದೇವಾಲಯದ ಪಕ್ಕದಲ್ಲಿರುವ ಬನ್ನಿವೃಕ್ಷಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆಯೆ ವರುಣ ಸಿಂಚನಗೈದಿದ್ದನು. [ಮತ್ತಷ್ಟು ಕಳೆಗಟ್ಟಿದ ದಸರಾ... ಜಂಬೂಸವಾರಿಗೆ ಕಾತರ...]

Much needed rain graces Mysuru Dasara procession

ಬಳಿಕ ಮಧ್ಯಾಹ್ನ 2.45ರ ಬಳಿಕ ಮೆರವಣಿಗೆ ಮಳೆಯಲ್ಲೇ ಆರಂಭವಾಯಿತು. ಮೊದಲಿಗೆ ವೀರಗಾಸೆ ನೃತ್ಯಗಾರರು ನೃತ್ಯಮಾಡುತ್ತಾ ಮೆರವಣಿಗೆ ಮುಂಚೂಣಿಯಲ್ಲಿದ್ದರೆ, ಅವರ ಹಿಂದೆಯೇ ನಿಶಾನೆ ಆನೆ ಬಲರಾಮ ಮತ್ತು ನೌಪತ್ ಆನೆಗಳಾದ ಅಭಿಮನ್ಯು ಮತ್ತು ಗಜೇಂದ್ರ ಸಾಗಿ ಬಂದರು. ಅದರ ಹಿಂದೆಯೇ ಆಕರ್ಷಕ ಪೊಲೀಸ್ ಬ್ಯಾಂಡ್ ಸಾಗಿತು.

ಜಂಬೂಸವಾರಿ ನೋಡಲು ಆಗಮಿಸಿದ ಜನ ಮಳೆಯಿಂದ ರಕ್ಷಿಸಿಕೊಳ್ಳಲು ಕೆಲವರು ತಾವು ಕುಳಿತ ಕುರ್ಚಿಯನ್ನು ತಲೆಮೇಲೆ ಎತ್ತಿ ಹಿಡಿದು ಕೊಳ್ಳುತ್ತಿದ್ದದ್ದು ಕಂಡು ಬಂದಿತು.

ವಜ್ರಮುಷ್ಠಿ ಕಾಳಗ : ಬೆಳಿಗ್ಗೆ ಕೆಲ ಸಮಯ ಅರಮನೆ ಆವರಣದಲ್ಲಿ ಗೊಂದಲವುಂಟಾಗಿತ್ತು. ಬೆಳಿಗ್ಗೆ 10 ಗಂಟೆಗೆ ಅರಮನೆ ಆವರಣದ ಕರಿತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ಆರಂಭವಾಗಬೇಕಿತ್ತಾದರೂ, ಜಟ್ಟಿಗಳು ಮತ್ತು ಅವರ ಕುಟುಂಬವನ್ನು ಪಾಸು ಇಲ್ಲ ಎಂಬ ಕಾರಣಕ್ಕೆ ಪೊಲೀಸರು ತಡೆದಿದ್ದು ಗೊಂದಲಕ್ಕೆ ಕಾರಣವಾಯಿತು. ಇದರಿಂದ ಆಕ್ರೋಶಗೊಂಡ ಜಟ್ಟಿಗಳು ಹಿಂದಕ್ಕೆ ತೆರಳುವುದಾಗಿ ಬೆದರಿಕೆ ಒಡ್ಡಿದರು.

Much needed rain graces Mysuru Dasara procession

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಜಟ್ಟಿಗಳ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಕೊನೆಗೆ ಎಸಿಪಿ ಶೈಲೇಂದ್ರ ಅವರು ಮಾತುಕತೆ ನಡೆಸಿ ಜಟ್ಟಿಗಳ ಮನವೊಲಿವಲ್ಲಿ ಯಶಸ್ವಿಯಾದರು. ಬಳಿಕ ವಜ್ರಮುಷ್ಠಿ ಕಾಳಗ ನಡೆಯಿತು.

ನಾಡದೇವಿ ಚಾಮುಂಡೇಶ್ವರಿ ಹಾಗೂ ಮೈಸೂರು ರಾಜಮನೆತನವನ್ನು ಸ್ಮರಿಸಿ ಜಟ್ಟಿಗಳಾದ ನಾರಾಯಣ, ಮಧುಸೂದನ್, ವೆಂಕಟೇಶ್, ನರಸಿಂಹ ಅವರು ಅಖಾಡಕ್ಕೆ ಇಳಿದು ಕಾಳಗ ನಡೆಸಿದರು. ಈ ರೋಮಾಂಚನಕಾರಿ ದೃಶ್ಯವನ್ನು ಹತ್ತಿರದಿಂದ ನೋಡಿದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ನಾರಾಯಣ ಜಟ್ಟಿ ಅವರ ತಲೆಯಲ್ಲಿ ರಕ್ತ ಚಿಮ್ಮಿದ ಬಳಿಕ ವಜ್ರಮುಷ್ಠಿ ಕಾಳಗವನ್ನು ಅಂತ್ಯಗೊಳಿಸಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Much needed rain has graced Mysuru Dasara procession. The rain did not dampen the spirit of people gathered to see world famous jamboo savari. Before this, wrestlers had tough time as police did not issue pass to their family.
Please Wait while comments are loading...