• search

ಪ್ರಕಾಶ್ ರೈ ಮೇಲೆ ಸಂಸದ ಪ್ರತಾಪ್ ಸಿಂಹ ಘರ್ಜನೆ

By Manjunatha
Subscribe to Oneindia Kannada
For mysore Updates
Allow Notification
For Daily Alerts
Keep youself updated with latest
mysore News
    ಪ್ರಕಾಶ್ ರೈ ಮೇಲೆ ಪ್ರತಾಪ್ ಸಿಂಹ ಘರ್ಜನೆ | Oneindia Kannada

    ಮೈಸೂರು, ನವೆಂಬರ್ 13 : ಇತ್ತೀಚೆಗೆ ಹಿಂದೂ ಭಯೋತ್ಪಾದನೆ, ಉತ್ತರ ಪ್ರದೇಶ ಮಕ್ಕಳ ಸಾವು, ಗೌರಿ ಲಂಕೇಶ್ ಹತ್ಯೆ ಹೀಗೆ ಸಾಕಷ್ಟು ವಿಷಯಗಳಲ್ಲಿ ಮೋದಿ ಸರ್ಕಾರವನ್ನು ಟೀಕಿಸುತ್ತಾ ಬರುತ್ತಿರುವ ನಟ ಪ್ರಕಾಶ್ ರೈ ಅವರು ವಿರುದ್ಧ ಮೈಸೂರು ಸಂಸದ ಪ್ರತಾಪ್ ಸಿಂಹ ತಮ್ಮ ಮಾತಿನ ಪ್ರತಾಪ ತೋರಿಸಿದ್ದಾರೆ.

    ಅಪನಗದೀಕರಣ ಅತಿ ದೊಡ್ಡ ತಪ್ಪು, ದೇಶದ ಜನರ ಕ್ಷಮೆ ಕೇಳಿ: ಪ್ರಕಾಶ್ ರೈ

    "ಪ್ರಕಾಶ್ ರೈ ಒಬ್ಬ ಸಾಮಾನ್ಯ ನಟನಷ್ಟೆ, ಆದರೆ ತಾನೊಬ್ಬ ದೊಡ್ಡ ನಟ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ, ಡಾ.ರಾಜ್, ಅಮಿತಾಬ್ ಬಚ್ಚನ್, ಎನ್.ಟಿ.ಆರ್ ಅವರ್ಯಾರು ಇವರ ರೀತಿ ಅಂದುಕೊಂಡಿರಲಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

    MP Prathap simha takes on Prakash rai for his anti Modi talks

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರೈ ಒಬ್ಬ ಸಾಮಾನ್ಯ ನಟ ಅಷ್ಟೇ. ಇವರು ತಮ್ಮನ್ನ ದೊಡ್ಡ ನಟ ಅಂದುಕೊಂಡು ರಾಜಕಾರಣಿಗಳನ್ನ ಟೀಕೆ ಮಾಡೋದು ಸರಿಯಲ್ಲ. ಪ್ರಕಾಶ್ ರೈ "ಸ್ಪ್ಲಿಟ್ ಅಂಡ್ ರನ್ ಥರ. ಗುದ್ದು ಓಡೋದಲ್ಲ. ಉಗಿದು ಓಡೋದು". ಆದ್ರೆ ನಾನು ಅವರಂತೆ ಮಾಡೋಕಾಗಲ್ಲ. ನನಗೆ ಜವಾಬ್ದಾರಿ ಇದೆ, ಕ್ಷೇತ್ರ ಇದೆ. ಅವರಂತೆ ನಾನು ಓಡಿ ಹೋಗೋಕೆ ಆಗೋಲ್ಲ ಅಂತ ಟಾಂಗ್ ನೀಡಿದರು.

    ಪ್ರಕಾಶ್ ರೈ ಆರೋಪಗಳು ನಿರಾಧಾರ ಹಾಗೂ ಗಮನ ಸೆಳೆಯಲು ಮಾಡುತ್ತಿರುವ ತಂತ್ರಗಳಷ್ಟೆ ಎಂದ ಅವರು, ಮೋದಿ ಅವರ ವಿರುದ್ಧ ಅವರು ಮಾಡುತ್ತಿರುವ ಆರೋಪಗಳ ಹಿಂದೆ ಲಾಭಕೋರತನ ಇದ್ದಹಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.

    ಪ್ರಕಾಶ್ ರೈ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು

    ಉತ್ತರಪ್ರದೇಶದ ಮಕ್ಕಳ ಮರಣಕ್ಕೆ ಮಿಡಿಯುವ ಇವರ ಹೃದಯ. ಕೋಲಾರದಲ್ಲಿ ಆದ ಮಕ್ಕಳ ಸಾವಿನ ಸರಣಿಗೆ ಏಕೆ ಮೀಡಿಯುವುದಿಲ್ಲ. ಇತರರನ್ನು ಪ್ರಶ್ನೆ ಮಾಡುವ ಆತುರದಲ್ಲಿ ಪ್ರಕಾಶ್ ರೈ ತಮ್ಮ ದ್ವಂದ್ವ ನಿಲುವನ್ನು ಬಹಿರಂಗೊಳಿಸುತ್ತಿದ್ದಾರೆ. ಸಚಿವ ರಮಾನಾಥ್ ರೈ ಜೊತೆ ವೇದಿಕೆ ಹಂಚಿಕೊಳ್ಳುವ ಇವರು ಶರತ್ ಮಡಿವಾಳ ಹತ್ಯೆ ಬಗ್ಗೆ ಯಾಕೆ ಪ್ರಶ್ನಿಸೋಲ್ಲ ಅಂತ ಕಿಡಿಕಾರಿದ್ರು.

    ಪ್ರಕಾಶ್ ರೈ ಕುರಿತು ನಾನು ವೈಯಕ್ತಿಕ ಟೀಕೆ ಮಾಡಿಲ್ಲ ಎಂದ ಪ್ರತಾಪ್ ಸಿಂಹ. 'ಅವರಿಗೆ ಮೋದಿ, ಯೋಗಿ ಆದಿತ್ಯನಾಥ್, ಟ್ರಂಪ್ರನ್ನು ಪ್ರಶ್ನೆ ಮಾಡುವ ಹಕ್ಕು ಇದ್ದಹಾಗೆಯೆ. ಇವರನ್ನು ಪ್ರಶ್ನೆ ಮಾಡುವ ಹಕ್ಕು ಸಾರ್ವಜನಿಕರಿಗೆ ಹಾಗೂ ನನಗೆ ಇದೆ' ಎಂಧರು.

    ದೇಶದಲ್ಲಿ ಮಾತನಾಡಲು ಭಯವಾಗುತ್ತಿದೆ ಎಂಬ ಪ್ರಕಾಶ್ ರೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇವರೇ ಮೋದಿ ಬಗ್ಗೆ ತುಚ್ಛವಾಗಿ ಮಾತನಾಡುತ್ತಿದ್ದಾರೆ. ಇದಕ್ಕಿಂತ ಸ್ವಾತಂತ್ರ್ಯ ಇನ್ನೆನು ಬೇಕಿದೆ. ಮೋದಿ ಬಗ್ಗೆ ಯಾರೇ ಏನೆ ಮಾತನಾಡಿದ್ರು ಅವರು ಸುಮ್ಮನೆ ಇದ್ದಾರೆ. ಇದಕ್ಕಿಂತ ವಾಕ್ ಸ್ವಾತಂತ್ರ್ಯ ಇನ್ಯಾವ ದೇಶದಲ್ಲಿದೆ ಎಂದರು.

    ಇನ್ನಷ್ಟು ಮೈಸೂರು ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Prathap simha said 'Prakash Rai is doing 'Split and run' not hit and run, he is just making anti modi statments because of political gain.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more