ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ಆಯ್ತು ಸಂಸದ ಪ್ರತಾಪ್ ಸಿಂಹರ ಫೇಸ್ ಬುಕ್ ಪೋಸ್ಟ್

|
Google Oneindia Kannada News

ಮೈಸೂರು, ಡಿಸೆಂಬರ್ 13: ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಐದರಲ್ಲಿಯೂ ಕಮಲ ಪಕ್ಷದ ಪ್ರಭಾವ ಹೇಳಿಕೊಳ್ಳುವ ಮಟ್ಟಿಗೇನೂ ಇಲ್ಲ ಎಂದು ಎಲ್ಲಾ ಕಡೆಯಿಂದಲೂ ಟೀಕೆ ಟಿಪ್ಪಣಿಗಳು ಪುಂಖಾನು ಪುಂಖವಾಗಿ ಬರುತ್ತಿವೆ.

ಈ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡತೊಗಿದ್ದಾರೆ. ಈ ಕುರಿತಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಸಹ ಹಾಕಿದ್ದಾರೆ.

ಪ್ರತಾಪ್ ಸಿಂಹಗೆ ಭಾಷಣ ನಿಲ್ಲಿಸಿ ಸಾಕು ಎಂದು ಸಿಎಂ ಕುಮಾರಸ್ವಾಮಿಪ್ರತಾಪ್ ಸಿಂಹಗೆ ಭಾಷಣ ನಿಲ್ಲಿಸಿ ಸಾಕು ಎಂದು ಸಿಎಂ ಕುಮಾರಸ್ವಾಮಿ

"ಕಾರ್ಯಕರ್ತರೇ ಹಾಗೂ ಮೋದೀಜಿ ಬೆಂಬಲಿಗರೇ, ಸೋಲು ಖಂಡಿತ ಬೇಸರ ತರುತ್ತದೆ. ಆದರೆ ಯಾಕಿಷ್ಟು ವಿಚಲಿತರಾಗಿದ್ದೀರಿ? ಯಾಕಿಂಥ ಭ್ರಮನಿರಸನ? ಜನರನ್ನೇ ದೂಷಿಸುವಂಥ ವೈರಾಗ್ಯದ ಮೆಸೇಜುಗಳೇಕೆ?ಈ ರೀತಿಯ defeatist ಮನಸ್ಥಿತಿ ಯಾಕೆ?.

MP Pratap Simhas Facebook post is viral on social site

2004ರಿಂದ 2018ರವರೆಗೂ ಸತತ 15 ವರ್ಷ ಇದೇ ಮಧ್ಯಪ್ರದೇಶ, ಛತ್ತೀಸ್ ಗಢದ ಜನರಲ್ಲವೇ ಯುಪಿಎ ಆರ್ಭಟದ ನಡುವೆಯೂ ನಮಗೆ ಅಧಿಕಾರ ನೀಡಿದ್ದು? 15ವರ್ಷ ಒಂದೇ ಮುಖವನ್ನು ನೋಡುತ್ತಾ ಇದ್ದರೆ fatigue ಬಂದು ಸುಖಾಸುಮ್ಮನೆ ಬದಲಾವಣೆ ಬೇಕು ಅನ್ನಿಸಿಬಿಡೋ ಸಾಧ್ಯತೆ ಇರುತ್ತೆ. ಯಾಕೆ ದೂರುತ್ತಾ ಕಾಲಹರಣ ಮಾಡುತ್ತೀರಿ? ಇನ್ನು 4 ತಿಂಗಳು ಕಷ್ಟಪಡೋಣ, ಫೇಸ್ಬುಕ್- ಟ್ವಿಟ್ಟರ್-ವಾಟ್ಸಾಪ್ ಗಳ ಆಚೆಗಿನ ಜನತಾ ನ್ಯಾಯಾಲಯದ ಮುಂದೆ ಹೋಗಿ ಮಾಡಿರುವ ಕೆಲಸಗಳನ್ನ ಮನವರಿಕೆ ಮಾಡಿಕೊಡೋಣ. 2019ರಲ್ಲಿ ಮತ್ತೆ ಮೋದೀಜಿಯನ್ನ ಪ್ರಧಾನಿ ಮಾಡಿ ಖುಷಿಪಡೋಣ ಎಂದು ತಮ್ಮ ಲೇಖನದಲ್ಲಿ ಸೂಚಿಸಿದ್ದಾರೆ.

 ಸಿಎಂ ಕುಮಾರಸ್ವಾಮಿಯಿಂದ ರೈತರ ದುರ್ಬಳಕೆ: ಸಂಸದ ಪ್ರತಾಪ್ ಸಿಂಹ ಸಿಎಂ ಕುಮಾರಸ್ವಾಮಿಯಿಂದ ರೈತರ ದುರ್ಬಳಕೆ: ಸಂಸದ ಪ್ರತಾಪ್ ಸಿಂಹ

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಮೂರರಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಮೀಜೋರಾಂ ಮತ್ತು ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಗೆಲ್ಲಿಸುವ ಮೂಲಕ ಅಲ್ಲಿಯ ಜನರು ರಾಷ್ಟ್ರೀಯಪಕ್ಷಗಳನ್ನು ದೂರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರು 2019ರ ಲೋಕಸಭಾಚುನಾವಣೆಗೆ ತಯಾರಿ ನಡೆಸೋಣ.

 ಕುಮಾರಸ್ವಾಮಿ ಅಪ್ಪನ ಕಾಲ ಬಳಿಯೇ ಕುಳಿತೀರಲ್ಲ ಸಿದ್ದರಾಮಯ್ಯ?: ಚುಚ್ಚಿದ ಸಿಂಹ ಕುಮಾರಸ್ವಾಮಿ ಅಪ್ಪನ ಕಾಲ ಬಳಿಯೇ ಕುಳಿತೀರಲ್ಲ ಸಿದ್ದರಾಮಯ್ಯ?: ಚುಚ್ಚಿದ ಸಿಂಹ

ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ಖುಷಿಪಡೋಣ" ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಮುಂದಿನ ಚುನಾವಣೆಗೆ ತಯಾರಾಗುವಂತೆ ಮಾಡುತ್ತಿರುವ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

English summary
MP Pratap Simha's Facebook post is viral on social site. Here is a detailed article about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X