ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಹುನಿರೀಕ್ಷಿತ ಮೈಸೂರು – ಬೆಂಗಳೂರು ಮೆಮೂ ರೈಲಿಗೆ ಹಸಿರು ನಿಶಾನೆ

|
Google Oneindia Kannada News

ಮೈಸೂರು, ಡಿಸೆಂಬರ್ 24 : ಮೈಸೂರು - ಬೆಂಗಳೂರು ನಡುವಿನ ಸುಗಮ ಸಂಚಾರಕ್ಕಾಗಿ ಮೆಮೂ ರೈಲಿಗೆ ಭಾನುವಾರ ಸಂಸದ ಪ್ರತಾಪ್ ಸಿಂಹ ಗ್ರೀನ್ ಸಿಗ್ನಲ್ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.

ಬೆಂಗಳೂರು-ರಾಮನಗರದ ನಡುವೆ ಸಂಚರಿಸುತ್ತಿದ್ದ ಎಲೆಕ್ಟ್ರಿಕ್ ರೈಲನ್ನು (ಮೆಮೂ) ಮೈಸೂರಿನ ತನಕ ವಿಸ್ತರಿಸಲಾಗಿದ್ದು, ವಾರಕ್ಕೆ ನಾಲ್ಕು ದಿನ ಇದರ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ. ವಾರದಲ್ಲಿ ಗುರುವಾರದಿಂದ ಭಾನುವಾರ ವಾರದಲ್ಲಿ ನಾಲ್ಕು ದಿನ ಈ ರೈಲು ಸಂಚಾರ ಮಾಡಲಿದೆ.

ಬೆಂಗಳೂರು-ಮೈಸೂರು ರೈಲಿನಲ್ಲಿ ದರೋಡೆ, ರೈಲು ಹತ್ತಲು ಆತಂಕಬೆಂಗಳೂರು-ಮೈಸೂರು ರೈಲಿನಲ್ಲಿ ದರೋಡೆ, ರೈಲು ಹತ್ತಲು ಆತಂಕ

ಬೆಳಗ್ಗೆ 4:45ಕ್ಕೆ ಮೈಸೂರಿನಿಂದ ಹೊರಡಲಿರುವ ರೈಲು ಬೆಳಗ್ಗೆ 8:30ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಸಂಜೆ 7:55ಕ್ಕೆ ಹೊರಡಲಿರುವ ಮೆಮು ಟ್ರೈನ್ ರಾತ್ರಿ 10:30ಕ್ಕೆ ಮೈಸೂರಿಗೆ ತಲುಪಲಿದೆ. ಡಿ.26ರಿಂದ ಸಂಚಾರ ಆರಂಭವಾಗಲಿದ್ದು, 30 ರೂ. ನಲ್ಲಿ ಬೆಂಗಳೂರು-ಮೈಸೂರು ಪ್ರಯಾಣ ಬೆಳಸಬಹುದು.

MP Pratap simha launched a new MEMU rail

ಈ ರೈಲಿನ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಕೊಡಗು ಹಾಗೂ ಮೈಸೂರು ನಡುವೆ ಚತುಷ್ಫಥ ರಸ್ತೆಗೆ ಚಾಲನೆ ನೀಡಲಾಗಿದೆ. 700 ಕೋಟಿ ರೂ. ವೆಚ್ಚದಲ್ಲಿ ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ.

ಸಚಿವ ಜಿ.ಟಿ.ದೇವೇಗೌಡ ಅವರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಶ್ಯಕವಿರುವ ಸ್ಥಳ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'

ಇದೇ ವೇಳೆ ಜೆಡಿಎಸ್ ಎಂ ಎಲ್ ಸಿ ಸಂದೇಶ್ ನಾಗರಾಜ್ ಸಂಸದ ಪ್ರತಾಪ್ ಸಿಂಹ ಪರ ಬ್ಯಾಟ್ ಬೀಸಿದರು. ಸಿಂಹ ಒಂದು ತರ ಜಿಗಣೆಯ ಹಾಗೆ. ಅವರು ಹಿಡಿದ ಕೆಲಸ ಪೂರ್ಣ ಮಾಡುವವರೆಗೆ ಬಿಡಲ್ಲ. ಮೈಸೂರಿನ ಅಭಿವೃದ್ಧಿಗೆ ಪ್ರತಿನಿತ್ಯ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಇದುವರೆಗೂ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ.

ಈಗ ಮೈಸೂರಿಗೆ ಮೆಮೂ ಟ್ರೈನ್ ತಂದಿದ್ದಾರೆ. ಶತಾಬ್ದಿ ಎಕ್ಸ್ಪ್ರೆಸ್ ರೈಲು ಪ್ರತಿನಿತ್ಯ ಚೆನ್ನೈ ತಲುಪುತ್ತದೆ. ಅದರೆ ಇದಕ್ಕೆ ಸರಿಸಮನಾದ ಮತ್ತೊಂದು ರೈಲು ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಅವರಿಗೆ ನಾನು ಕೋರಿದ್ದೇನೆ. ಬೆಳಿಗ್ಗೆ ಮೈಸೂರಿನಿಂದ ಪ್ರತಿನಿತ್ಯ 4 ರೈಲುಗಳು ಬೆಂಗಳೂರಿಗೆ ತೆರಳುತ್ತಿವೆ. ಜತೆಗೆ ಇನ್ನೂ ಒಂದು ಹೆಚ್ಚುವರಿ ರೈಲನ್ನು ನೀಡುವಂತೆ ಸಂದೇಶ್ ಮನವಿ ಮಾಡಿದರು.

ಮೇಕ್ ಇನ್ ಇಂಡಿಯಾ ಕೂಸಾಗಿರುವ ಈ ರೈಲಿನಲ್ಲಿ ಏನೇನುಂಟು ಗೊತ್ತಾ?ಮೇಕ್ ಇನ್ ಇಂಡಿಯಾ ಕೂಸಾಗಿರುವ ಈ ರೈಲಿನಲ್ಲಿ ಏನೇನುಂಟು ಗೊತ್ತಾ?

ಮೈಸೂರಿನ ಹಿನಕಲ್ ಬಳಿಯ ಜಿಲ್ಲೆಯ ಮೊದಲ ಫ್ಲೈ ಓವರ್ ಅನ್ನು ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ಸಚಿವ ಜಿ ಟಿ ದೇವೇಗೌಡ ಚಾಲನೆ ನೀಡಿದರು. ಪ್ರತಾಪ್ ಸಿಂಹ ಅವರ ಕಾಳಜಿಯಿಂದ ಜಿಲ್ಲೆಯಾದ್ಯಂತ ಕೇಂದ್ರ ಸರಕಾರದ ಯೋಜನೆಗಳು ಜಾರಿಗೊಂಡು ಪ್ರಗತಿಯಲ್ಲಿದೆ ಎಂದು ಸಚಿವ ಜಿ.ಟಿ.ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

English summary
MP Pratap Simha has launched today MEMU rail between Mysore and Bangalore. The electric train (MEMU) that runs between Bangalore-Ramanagaram will be extended to Mysore and will be available to service passengers four days a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X