ಯೋಗಿ ಆದಿತ್ಯನಾಥ್ ಅವಹೇಳನ : ಪ್ರತಾಪ್ ಸಿಂಹ ಆಕ್ರೋಶ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು ಮಾರ್ಚ್ 21: ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಅಪಲೋಡ್ ಮಾಡಿದ್ದ ಪ್ರಭಾ ಎನ್. ಬೆಳವಂಗಲ ಅವರದ್ದು ಕೀಳು ಅಭಿರುಚಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಯೋಗಿ ಆದಿತ್ಯನಾಥ್ ಬಗೆಗಿನ ತಿರುಚಲ್ಪಟ್ಟ ಅಶ್ಲೀಲ ಚಿತ್ರವೊಂದನ್ನು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಪ್ರಭಾ ಅವರ ನಡೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಈ ಕುರಿತು ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ಯುವ ಮೋರ್ಚಾದಿಂದ ದೂರನ್ನೂ ದಾಖಲಿಸಲಾಗಿದೆ.[ವಿವಾದ, ಹಿಂದುತ್ವ, ಸನ್ಯಾಸದ ಘಾಟು ಮಿಕ್ಸ್ಚರ್ ಯೋಗಿ ಆದಿತ್ಯನಾಥ್]

MP Pratap Simha condemns contovercial post uploaded by Prabha Belavangala

ಎಫ್ ಐ ಆರ್ ದಾಖಲಿಸಿ ಆಕೆಯನ್ನು ಬಂಧಿಸಬೇಕು, ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಖಾಸಗೀ ದೂರು ನೀಡಲಾಗುವುದು, ಆಕೆಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.[ಯೋಗಿ ಎಫೆಕ್ಟ್: ಅಲಹಾಬಾದ್ ನಲ್ಲಿ ಎರಡು ಕಸಾಯಿ ಖಾನೆಗಳಿಗೆ ಬೀಗ]

ಯಾವುದೋ ಬಿ ಗ್ರೇಡ್ ಚಿತ್ರವನ್ನು ತಿರುಚಿರುವ ಅವರಿಗೆ ಕೀಳು ಅಭಿರುಚಿಯಿದೆ, ಅವರಿಗೆ ಇಂಥ ಕೆಲಸ ಮಾಡುವ ಆಸೆಯಿದ್ದರೆ ಉತ್ತರ ಪ್ರದೇಶದವರೆಗೂ ಹೋಗುವ ಅಗತ್ಯವಿಲ್ಲ, ಬಾಗಲಕೋಟೆಯ ಮೇಟಿ ಕಚೇರಿಗೆ ಹೋಗಲಿ. ಅಲ್ಲಿ ನಡೆಯುತ್ತಿರುವುದನ್ನು ನೇರವಾಗಿ ನೋಡಲಿ, ಇಲ್ಲವಾದರೆ ಸ್ವ ಅನುಭವ ಪಡೆಯಲಿ ಎಂದಿದ್ದಾರೆ.[15 ದಿನದೊಳಗೆ ಆದಾಯ ವಿವರ ನೀಡಿ: ಯೋಗಿ ಆದಿತ್ಯನಾಥ್]

ನನಗೆ ಹೆಣ್ಣಿನ ಬಗ್ಗೆ ಗೌರವವಿದೆ, ಆದರೆ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಆ ವಿಡಿಯೋದಲ್ಲಿ ಕಾಣಿಸಿರುವ ನಟಿಯ ಮಾನ ಹರಾಜು ಮಾಡುವವರ ಬಗ್ಗೆ ಗೌರವವಿಲ್ಲ. ಆ ನಟಿಯ ಪರವಾಗಿ ಮಹಿಳಾ ಪರ ಸಂಘಟನೆಗಳು ಧ್ವನಿ ಎತ್ತಲಿ. ಪ್ರಭಾ ಅಂಥವರಿಗೆ ಸರಿಯಾದ ಶಿಕ್ಷೆಯಾಗಲಿ ಎಂದು ಸಿಂಹ ಗುಡುಗಿದ್ದಾರೆ.[ಆ ಒಂದು ಘಟನೆಯೇ ಯೋಗಿ ಸಿಎಂ ಆಗಲು ಮೂಲ ಕಾರಣ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
MP Pratap Simha condemns contovercial post uploaded by Prabha Belavanagala in Facebook which is on Newly apoointed UP CM Yogi Adityanath.
Please Wait while comments are loading...