ಇದೆಂಥ ಕ್ರೌರ್ಯ! ಆಸ್ಪತ್ರೆ ಶೌಚಾಲಯದಲ್ಲಿ ಮುದ್ದಾದ ಹೆಣ್ಣು ಶಿಶು!

Posted By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 19: ಮಕ್ಕಳಿಲ್ಲಾಂತ ಕಂಡ ಕಂಡ ದೇವರಿಗೆ ಹರಕೆ ಕಟ್ಟಿಕೊಂಡು, ಆಸ್ಪತ್ರೆಗಳಿಗೆಲ್ಲ ಎಡತಾಕುವ ಸಾವಿರಾರು ಮಹಿಳೆಯರು ನಮ್ಮ ನಡುವಲ್ಲಿದ್ದಾರೆ. ಆದರೆ ಮೈಸೂರಿನ ಮಹಾನ್ ತಾಯಿಯೊಬ್ಬಳು ತಾನು ಹೆತ್ತ ಶಿಶುವನ್ನೇ ಶೌಚಾಲಯದಲ್ಲಿ ಎಸೆದು ಹೋಗುವ ಮೂಲಕ ಎಲ್ಲರ ಹಿಡಿಶಾಪಕ್ಕೆ ತುತ್ತಾಗುತ್ತಿದ್ದಾಳೆ.

ವೈರಲ್ ವಿಡಿಯೋ: ಖಾಕಿಯ ಗತ್ತಿನೊಳಗೊಂದು ಮೃದು ಹೃದಯ!

ಎಚ್.ಡಿ.ಕೋಟೆಯ ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಡಿ.18 ರಂದು ಈ ಘಟನೆ ನಡೆದಿದ್ದು, ಅಪರಿಚಿತ ಮಹಿಳೆಯೊಬ್ಬರು ತಾನು ಹೆತ್ತ ಹೆಣ್ಣು ಶಿಶುವನ್ನು ಆಸ್ಪತ್ರೆಯ ಶೌಚಾಲಯದಲ್ಲಿ ಬಿಸಾಡಿ ಹೋಗಿದ್ದಾರೆ.

Mother throws her girl child in a dustbin of a hospital in Mysuru

ಆಸ್ಪತ್ರೆಯಲ್ಲಿ ಯಾವುದೇ ಗರ್ಭಿಣಿ ದಾಖಲಾಗಿರಲಿಲ್ಲ. ಜತೆಗೆ ಹೆರಿಗೆಯೂ ಆಗಿರುವ ಬಗ್ಗೆ ದಾಖಲಾತಿ ಇಲ್ಲದ್ದರಿಂದ ಹೊರಗೆ ಹೆರಿಗೆಯಾಗಿ, ಇಲ್ಲಿ ತಂದು ಮಗುವನ್ನು ಮಲಗಿಸಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗುತ್ತಿದೆ.

ಅನೈತಿಕ ಸಂಬಂಧಕ್ಕೆ ಈ ಮಗುವಿನ ಜನ್ಮವಾಗಿರಬೇಕು ಹೀಗಾಗಿ ಮಗುವನ್ನು ಬಿಟ್ಟು ಆಕೆ ಹೋಗಿರಬಹುದು ಎಂಬುದು ಕೆಲವರ ಅಭಿಪ್ರಾಯ. ಡಿ.18 ರಂದು ಆಸ್ಪತ್ರೆಯ ಸಿಬ್ಬಂದಿ ಕಸಗುಡಿಸಲೆಂದು ಶೌಚಾಲಯಕ್ಕೆ ತೆರಳಿದ ಸಂದರ್ಭ ಮಗು ಕಂಡು ಬಂದಿದ್ದು, ಅದು ಕೈಕಾಲನ್ನು ಆಡಿಸುತ್ತಿರುವುದನ್ನು ಕಂಡ ಸಿಬ್ಬಂದಿ ಕೂಡಲೇ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ತಾಲೂಕು ವೈದ್ಯಾಧಿಕಾರಿ ಭಾಸ್ಕರ್ ಮತ್ತು ಸಿಬ್ಬಂದಿ ಮಗುವನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಆರೈಕೆ ಮಾಡಿದ್ದು ಮಗು ಆರೋಗ್ಯವಾಗಿದೆ.

ಈ ಸಂಬಂಧ ಪಟ್ಟಣ ಠಾಣೆಯ ಪಿಎಸ್ ಐ ಅಶೋಕ್ ಮತ್ತು ಸಾಂತ್ವಾನ ಕೇಂದ್ರದ ಸಮಾಲೋಚಕಿ ಜಶೀಲ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮಗುವನ್ನು ಮಹಿಳಾ ಸಾಂತ್ವಾನ ಕೇಂದ್ರದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಸದ್ಯ ಮಗು ಆರೋಗ್ಯವಾಗಿದ್ದು, ಇದರ ಪೋಷಣೆ ಇತರೆ ಮಕ್ಕಳ ನಡುವೆ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A new born girl child found in a dustbin in HD Kote Hospital in Mysuru on 18th Dec. One of the hospital staffs identify the girl child in the dustbin, and informed this to doctors. Doctors are treating the baby.Details about the parents of the is yet to be known.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ