ಎಚ್.ಡಿ.ಕೋಟೆ: ಹೆತ್ತ ತಾಯಿಯಿಂದಲೇ ಮಕ್ಕಳ ಮಾರಾಟ, ಬಂಧನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 2 : ಹೆತ್ತ ತಾಯಿಯೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಮಾರಾಟ ಮಾಡಲು ಮುಂದಾದ ಹೃದಯವಿದ್ರಾವಕ ಘಟನೆ ಮೈಸೂರಿನ ಎಚ್.ಡಿ.ಕೋಟೆಯಲ್ಲಿ ನಡೆದಿದೆ. ಪೊಲೀಸರು ಆಕೆಯನ್ನು ಬಂಧಿಸಿದ್ದು, ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ಬಿದರಹಳ್ಳಿ ನಿವಾಸಿ, ಪ್ರಸ್ತುತ ಅಗ್ರಹಾರದಲ್ಲಿ ವಾಸವಿರುವ ಮಂಗಳಾ ಎಂಬಾಕೆಯೇ ತನ್ನ ಮಕ್ಕಳನ್ನು ತನ್ನ ಸ್ನೇಹಿತೆಯ ಪರಿಚಯಸ್ಥರಾದ ಭೀಮನಹಳ್ಳಿಯ ಮುತ್ತಣ್ಣ ಮತ್ತು ಕೈಲಾಸಪುರದ ಮಹೇಂದ್ರ ಎಂಬವರಿಗೆ ಮಾರಿದ್ದಾಳೆ ಎನ್ನಲಾಗಿದೆ. ಮೂಲಗಳಿಂದ ಪೊಲೀಸರು ಮಾಹಿತಿ ಪಡೆದಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗು ಮಕ್ಕಳನ್ನು ರಕ್ಷಸಿದ್ದಾರೆ.[ಮೈಸೂರು: ಮಕ್ಕಳ ಕಳ್ಳಸಾಗಾಟ ಜಾಲ ಭೇದಿಸಿದ ಪೊಲೀಸರು]

Mother bore children out to sell in H.D. Kote, Mysuru

ಆ ಇಬ್ಬರು ಮಕ್ಕಳನ್ನು ಮಾರಟ ಮಾಡಲು ತಂತ್ರ ರೂಪಿಸಿದ್ದ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಕ್ಕಳನ್ನು ಮಾರಾಟ ಮಾಡಿದ್ದ ತಾಯಿಯನ್ನೂ ವಿಚಾರಣೆಗೊಳಪಡಿಸಿದ್ದು, ಯಾವ ಕಾರಣಕ್ಕಾಗಿ ಮಾರಾಟ ಮಾಡಿದ್ದಳು ಎಂಬ ಮಾಹಿತಿ ಲಭ್ಯವಾಗಬೇಕಿದೆ.

ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯಿಂದ ಎಷ್ಟು ಹಣಕ್ಕೆ ಮಕ್ಕಳನ್ನು ಕೊಳ್ಳಲು ಯಾರು ತಯಾರಾಗಿದ್ದರು ಎಂಬ ಸತ್ಯ ಹೊರಬರಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mother bore children out to sell in H.D. Kote, Mysuru. She was arrested by the H.D.Kote police. we should not know what is the cause.
Please Wait while comments are loading...