ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗರಹೊಳೆಯಲ್ಲಿ 9 ಹುಲಿಗಳನ್ನು ಕಂಡ ಆ ಕಣ್ಣುಗಳೇ ಧನ್ಯ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜನವರಿ 07 : ಅಪರೂಪದಲ್ಲಿ ಅಪರೂಪವಾಗುತ್ತಿರುವ ಹುಲಿಗಳನ್ನು ಕಾಡಿನಲ್ಲಿ ನೋಡೋದೆ ಒಂದು ಚಂದ. ಅದರಲ್ಲೂ ಹುಲಿಗಳು ಗುಂಪು ಗುಂಪಾಗಿ ಕಾಣಿಸಿಕೊಂಡರೆ, ಅವುಗಳ ಆಟ ತುಂಟಾಟ ಕಂಡವರ ಆನಂದ ಇನ್ಹೇಗಿರಬೇಡ ಹೇಳಿ?

ಅಂಥ ಅಪರೂಪದ ದೃಶ್ಯಗಳನ್ನ ನೋಡುವ ಸೌಭಾಗ್ಯ ಮೈಸೂರಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿರಿಗೆ ಸಿಕ್ಕಿದೆ. ತಾಯಿ ಹುಲಿಯೊಂದು ತನ್ನ ಮುದ್ದು ಮರಿಗಳೊಂದಿಗೆ ಕಾಲ ಕಳೆದ ದೃಶ್ಯಗಳನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಪ್ರವಾಸಿಗರು ಒಂದು ಗಂಟೆಗೂ ಹೆಚ್ಚು ಕಾಲ ಸಖತ್ ಎಂಜಾಯ್ ಮಾಡಿದ್ದಾರೆ. ಆ ಪ್ರವಾಸಿಗರು ಪಡೆದ ಅಪರೂಪ ಅನುಭವದ ಫೋಟೋ ಇಲ್ಲಿದೆ ನೋಡಿ..

ಪ್ರಾಣಿ ಪ್ರಿಯರನ್ನ ಹೊರೆತು ಪಡೆಸಿದರೆ ಇತರರಿಗೆ ಈ ವಿಷಯ ಗೊತ್ತಿರೋದು ಬಹುತೇಕ ಕಡಿಮೆ. ಅದೇನಪ್ಪ ಅಂದ್ರೆ ಹುಲಿಗಳು ನಾಚಿಕೆ ಸ್ವಭಾವದ ಪ್ರಾಣಿಗಳು. ಅವುಗಳು ಸಹಜವಾಗಿ ಗುಂಪಾಗಿ ಕಾಣಿಸಿಕೊಳ್ಳುವುದಿಲ್ಲ. ಆದ್ರೆ ಮೈಸೂರಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಂತಹ ಅಪರೂಪದ ದೃಶ್ಯಗಳು ನೋಡಲು ಸಿಕ್ಕಿವೆ. ಸುಮಾರು ಒಂಬತ್ತು ಹುಲಿಗಳು ಏಕಕಾಲಕ್ಕೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ.

ಗುಂಪು- ಗುಂಪಾಗಿ ಕಾಣಿಸಿಕೊಂಡ ಹುಲಿಗಳು

ಗುಂಪು- ಗುಂಪಾಗಿ ಕಾಣಿಸಿಕೊಂಡ ಹುಲಿಗಳು

ಅದು ಹುಲಿ ಮರಿಗಳು ತಾಯಿಯೊಂದಿಗೆ 2 ವರ್ಷದವರೆಗೆ ಮಾತ್ರ ಜೊತೆಗಿರುತ್ತವೆ. ನಂತರ ಅವರು ತನ್ನ ಬೇಟೆ ವಿದ್ಯೆಗಳನ್ನ ಕಲಿತು ಕಾಡಿನಲ್ಲಿ ತನ್ನದೇ ವ್ಯಾಪ್ತಿಯಲ್ಲಿ ಜೀವನ ಸಾಗಿಸುತ್ತ ಬದುಕುತ್ತವೆ. ಗಂಡು ಹುಲಿ ಮರಿಗಳು ಹುಟ್ಟಿದ ಮೇಲೆ ಹೆಣ್ಣು ಹುಲಿ ಜೊತೆಯಲ್ಲಿ ಇರಲ್ಲ. ಹೆಣ್ಣು ಹುಲಿ ತನ್ನ ಮರಿಗಳನ್ನ 2 ವರ್ಷ ಸಾಕಿ ನಂತರ ಅವುಗಳನ್ನ ಬಿಟ್ಟು ಕಾಡಿನಲ್ಲಿ ಬೇರೆ ವ್ಯಾಪ್ತಿಗೆ ತೆರಳುತ್ತವೆ. ಹಾಗಾಗಿ ಹುಲಿಗಳನ್ನ ಗುಂಪು ಗುಂಪಾಗಿ ನೋಡುವುದಕ್ಕೆ ಸಿಗೋದು ಕಡಿಮೆ.

ನಾಗರಹೊಳೆಯಲ್ಲಿ ಈ‌ ಅಪರೂಪದ ದೃಶ್ಯ..

ನಾಗರಹೊಳೆಯಲ್ಲಿ ಈ‌ ಅಪರೂಪದ ದೃಶ್ಯ..

ನಾಗರಹೊಳೆ ಹುಲಿಸಂರಕ್ಷಿತ ಅರಣ್ಯದಲ್ಲಿ, ಮೈಸೂರು ಮಾನಂದವಾಡಿಗೆ ಸಂಪರ್ಕ ಕಲ್ಪಿಸುವ ಹಳೆ ರಸ್ತೆಯಲ್ಲಿ ಈ ದೃಶ್ಯಗಳು ಸಿಕ್ಕಿದ್ದು ತಾಯಿ ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ಆಟವಾಡುತ್ತಿದ್ದ ದೃಶ್ಯಗಳು ಕ್ಯಾಮೆರಾದಲ್ಲು ಸೆರೆಯಾಗಿದ್ದು, ಜೀವಮಾನದ ಅಪರೂಪದ ಅನುಭವ.

ಹುಲಿಗಳನ್ನು ಕಂಡವರು ನಿಜಕ್ಕೂ ಅದೃಷ್ಟವಂತರು

ಹುಲಿಗಳನ್ನು ಕಂಡವರು ನಿಜಕ್ಕೂ ಅದೃಷ್ಟವಂತರು

ಒಟ್ಟಾರೆ ಮಾನಂದವಾಡಿ ರಸ್ತೆಯಲ್ಲಿ ಗಂಟೆಗಟ್ಟಲೆ ಆಟವಾಡಿದ ಹುಲಿಗಳು ಪ್ರವಾಸಿಗರನ್ನ ಅತ್ತಿತ್ತ ಹೋಗದಂತೆ ಮಾಡಿದ್ದಂತು ನಿಜ. ದಿನಗಟ್ಟಲೆ ಸಫಾರಿ ಮಾಡಿದ ಸಿಗದ ಅಪರೂಪದ ದೃಶ್ಯಗಳು ಕ್ಯಾಮಾರದಲ್ಲಿ ಸೆರೆಯಾಗಿರೋದು ವಿಶೇಷವಾಗಿದೆ.

ಹುಲಿಗಳಿಗೆ ಕಿರಾತಕರ ದೃಷ್ಟಿ ತಾಕದಿರಲಿ

ಹುಲಿಗಳಿಗೆ ಕಿರಾತಕರ ದೃಷ್ಟಿ ತಾಕದಿರಲಿ

ಇತ್ತೀಚೆಗೆ ನಡೆಸಿರುವ ಹುಲಿ ಗಣತಿಯ ಪ್ರಕಾರ, ಕರ್ನಾಟಕದಲ್ಲಿ ಉಳಿದಿರುವುದು 406 ಪಟ್ಟೆಹುಲಿಗಳು ಮಾತ್ರ. ಇತ್ತೀಚಿನ ವರ್ಷಗಳಲ್ಲಿ ಹುಲಿಗಳ ಸಂತತಿ ಶೇ.35ರಷ್ಟು ಹೆಚ್ಚಾಗಿದೆ. ಸದ್ಯ, ಈಗ ಕಂಡಿರುವ ಹುಲಿಗಳಿಗೆ ಕಿರಾತಕರ ದೃಷ್ಟಿ ತಾಕದಿರಲಿ.

English summary
Forest enthusiast in Nagarahole national forest had a wonderful and surprising experience. They spotted 9 Tigers in one place. It is very rare to see even one Tiger in the forest. The people who spotted them clicked photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X