ನಂಜನಗೂಡು ಉಪಚುನಾವಣೆ: ದಾಖಲೆಯ ಶೇ.77 ಮತದಾನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 10: ಬಹುನಿರೀಕ್ಷಿತ ನಂಜನಗೂಡು ಉಪ ಚುನಾವಣೆ ನಿನ್ನೆ (ಏಪ್ರಿಲ್ 9) ಮುಗಿದಿದ್ದು, ಮತದಾನದ ಸಮಯ ಮುಗಿದ ಮೇಲೂ ಕೆಲವು ಮತ ಕೇಂದ್ರಗಳಲ್ಲಿ 6.30 ರವರೆಗೆ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಕಂಡುಬಂತು.

ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಮತದಾನ ನಡೆದಿದ್ದು, ಅಂತಿಮವಾಗಿ ಶೇ. 77 ರಷ್ಟು ಮತಚಲಾವಣೆಯಾಗಿದೆ. ಜಿಲ್ಲೆಯಲ್ಲಿ ಸಣ್ಣಪುಟ್ಟ ಘಟನೆಗಳನ್ನ ಹೊರತು ಪಡಿಸಿದರೆ ಬಹುತೇಕ ಕಡೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.[ಕಾಂಗ್ರೆಸ್ ಹಣದ ಹೊಳೆ ಹರಿಸಿದೆ - ಶ್ರೀನಿವಾಸ್ ಪ್ರಸಾದ್]

More than 75% of polling was recorded in by election

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿ ಡಿ. ಚನ್ನಣ್ಣನವರ್, ಜಿಲ್ಲೆಯಲ್ಲಿ ಬಹುತೇಕ ಶಾಂತಿಯುತ ಮತದಾನವಾಗಿದೆ. ಮುಂಜಾಗೃತಾ ಕ್ರಮವಾಗಿ ಕೈಗೊಂಡ ಕ್ರಮಗಳು ಯಶಸ್ವಿಯಾಗಿವೆ ಎಂದರು.[ಕೊರಳಲ್ಲಿ ಕಾಂಗ್ರೆಸ್ ಶಾಲು, ನೀತಿ ಸಂಹಿತೆ ಉಲ್ಲಂಘಿಸಿದ ಕಳಲೆ]

ಕೆಲವು ಮತದಾನ ಕೇಂದ್ರಗಳಲ್ಲಿ ಸಮಯ ಮುಗಿದ ಹಿನ್ನೆಲೆಯಲ್ಲಿ ಮತದಾನಮಾಡದೆ ಮತದಾರರು ವಾಪಸ್ಸಾಗುತ್ತಿದ್ದ ದೃಶ್ಯ ಕಂಡುಬಂತು. ಮತ ಪೆಟ್ಟಿಗೆಗಳನ್ನ ನಂಜನಗೂಡಿನ ಜೆಎಸ್ಎಸ್ ಕಾಲೇಜಿನಲ್ಲಿ ಇಡಲಾಗಿದ್ದು, ಏ. 13 ರಂದು ಫಲಿತಾಂಶ ಹೊರಬರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Most awaited Nanjangud by election has ended yesterday. 77% of polling was recorded. Polling was peaceful in most of the voting centres.
Please Wait while comments are loading...