ಮೈಸೂರಿನಲ್ಲಿ ಕನ್ನ ಕೊರೆದು ರು.15 ಲಕ್ಷಕ್ಕೂ ಹೆಚ್ಚು ಆಭರಣ ದೋಚಿದ ಕಳ್ಳರು

Posted By:
Subscribe to Oneindia Kannada

ಮೈಸೂರು, ಆಗಸ್ಟ್ 28 : ಮೈಸೂರಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾನುವಾರ ರಾತ್ರಿ ನಗರದ ಜ್ಯುವೆಲ್ಲರಿಯೊಂದರ ಗೋಡೆ ಕೊರೆದ ಖದೀಮರು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ.

ವಧ೯ಮಾನ್ ಜ್ಯುವೆಲ್ಲರಿಯ ಹಿಂಭಾಗದ ಗೋಡೆ ಕೊರೆದು ಒಳನುಗ್ಗಿ, 15 ಲಕ್ಷ ರುಪಾಯಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.‌ ಬೆಳಗ್ಗೆ ಅಂಗಡಿ ತೆಗೆದಾಗ ಕಳ್ಳತನವಾಗಿರುವುದು ಮಾಲೀಕರ ಗಮನಕ್ಕೆ ಬಂದಿದೆ. ಬೀಗ ಒಡೆಯದೆ ಹೇಗೆ ಕಳ್ಳತನ ಮಾಡಿದ್ದಾರೆ ಎಂದು ಗಾಬರಿಯಿಂದ ಅಂಗಡಿ ಸುತ್ತು ಹಾಕಿದಾಗ ಗೋಡೆ ಕೊರೆದು ಕನ್ನ ಹಾಕಿರುವುದು ಕಂಡುಬಂದಿದೆ.

More than 15 lakh worth of jewellery theft in Mysuru

ಎರಡು ದಿನಗಳ ಹಿಂದೆ ಸರಣಿಗಳ್ಳತನ ನಡೆದಿತ್ತು. ಭಾನುವಾರ ರಾತ್ರಿ ಜ್ಯುವೆಲ್ಲರಿ ಶಾಪ್ ನಲ್ಲಿ ಕಳವಾಗಿದೆ. ಒಟ್ಟಾರೆ ದಿನೇ ದಿನೇ ಕಳ್ಳತನ ಹೆಚ್ಚಾಗುತ್ತಿರುವುದು ಪೊಲೀಸರ ನಿದ್ದೆಗೆಡಿಸಿದೆ.

ಜೈಲಿನಲ್ಲಿ ವಿಚಾರಣಾಧೀನ ಕೈದಿ ಸಾವು: ವಿಚಾರಣಾಧೀನ ಕೈದಿ ಜೈಲಿನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಅಶೋಕಪುರಂ ನಿವಾಸಿ ಫಯಾಜ್ (38) ಮೃತ ಕೈದಿ. ಅನಾರೋಗ್ಯದಿಂದ ಬಳಲುತ್ತಿದ್ದ ಫಯಾಜ್ ಜೈಲಿನಲ್ಲಿ ಕುಸಿದು ಬಿದ್ದಿದ್ದ.

ಜಯದೇವ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಕೊಲೆ ಯತ್ನ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಫಯಾಜ್ ಒಂದೂವರೆ ತಿಂಗಳಿನಿಂದ ಜೈಲಿನಲ್ಲಿದ್ದ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
More than 15 lakh rupees worth of jewellery theft in Mysuru. In other case prisoner died. Complaint registered with Mandi police station.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ