ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹದಾಯಿ ಬಂದ್ ಗೆ ಸಿಎಂ ತವರಿನಲ್ಲಿ ನೀರಸ ಪ್ರತಿಕ್ರಿಯೆ

By ಯಶಸ್ವಿನಿ ಎಂಕೆ
|
Google Oneindia Kannada News

Recommended Video

ಕರ್ನಾಟಕ ಬಂದ್ | ಮೈಸೂರಿನಲ್ಲೂ ಬಂದ್ ಕಾವು ಜೋರು | Oneindia Kannada

ಮೈಸೂರು, ಜನವರಿ 25 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹದಾಯಿ - ಕಳಸಾ ಬಂಡೂರಿಯ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಬೆಂಬಲಿಸಿ ನಗರ ಬಸ್ ನಿಲ್ದಾಣದ ಮುಂಭಾಗ ಬಸ್ ಹೊರಹೋಗದಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ಗಳು ಹೊರ ಹೋಗದಂತೆ ನಿಂತು ಪ್ರತಿಭಟಿಸಿದರಲ್ಲದೇ, ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಆಗ್ರಹಿಸಿದರು.

ನಗರದಲ್ಲಿ ಸದಾ ಗಿಜಿ ಗುಡುವ ರಸ್ತೆಯಾದ ದೇವರಾಜ ಅರಸು ರಸ್ತೆಯ ಅಂಗಡಿ - ಮುಂಗಟ್ಟುಗಳು ಬಂದಾಗಿದೆ. ಬಂದ್ ಗೆ ಬೆಂಬಲ ನೀಡಿ ಅರಸು ರಸ್ತೆಯಲ್ಲಿರುವ ಅಂಗಡಿ ಬಾಗಿಲುಗಳನ್ನು ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಮುಚ್ಚಿದ್ದಾರೆ.

ಕರ್ನಾಟಕ ಬಂದ್ : ಕಾಂಗ್ರೆಸ್, ಬಿಜೆಪಿ ಟ್ವಿಟರ್ ವಾರ್! ಕರ್ನಾಟಕ ಬಂದ್ : ಕಾಂಗ್ರೆಸ್, ಬಿಜೆಪಿ ಟ್ವಿಟರ್ ವಾರ್!

Mix response for bandh in CM's native

ಇತ್ತ ರೈಲು ನಿಲ್ದಾಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಅಶ್ವರೋಹಿ ದಳ ಸೇರಿದಂತೆ ಕಟ್ಟುನಿಟ್ಟಿನ ಪೊಲೀಸರನ್ನು ಆಯೋಜಿಸಲಾಗಿದೆ. ಹೋರಾಟಗಾರರು, ರೈತರ ಹೋರಾಟಕ್ಕೆ ಬೆಂಬಲಿಸುವಂತೆ ಎಲ್ಲರಿಗೂ ಮನವಿ ಮಾಡಿದ್ದು ಕೆಲವೆಡೆ ಬಲವಂತವಾಗಿ ಅಂಗಡಿ ಬಾಗಿಲು ಮುಚ್ಚಿಸುತ್ತಿದ್ದಾರೆ. ಇನ್ನು ಶಾಲಾ ಕಾಲೇಜುಗಳು ನಿಗದಿಯಂತೆ ಆರಂಭಗೊಂಡಿವೆ. ಮಧ್ಯದಲ್ಲಿ ರಜೆ ಎಂದು ಘೋಷಿಸಿದರೆ ಎಂಬ ಆತಂಕದಲ್ಲಿದ್ದ ಪೊಲೀಸರು ಶಾಲೆಯ ಬಳಿಯೇ ಕಾಯುತ್ತಿರುವ ದೃಶ್ಯ ಕಂಡುಬಂತು.

ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್

ಬಂದ್ ಕುರಿತಾಗಿ ಜಿಲ್ಲಾಧಿಕಾರಿ ರಂದೀಪ್ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿಲ್ಲ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್ ಅವರಿಗೆ ತಿಳಿಸಿದ್ದೇನೆ. ಗ್ರಾಮಾಂತರ ಭದ್ರತೆಯ ಕುರಿತು ಎಸ್ಪಿಯವರಿಗೆ ಮಾಹಿತಿ ನೀಡಿದ್ದೇನೆ.

Mix response for bandh in CM's native

ಉತ್ತರ ಕರ್ನಾಟಕದಲ್ಲಿ ಬಂದ್ ಗೆ ಸಂಪೂರ್ಣ ಬೆಂಬಲಉತ್ತರ ಕರ್ನಾಟಕದಲ್ಲಿ ಬಂದ್ ಗೆ ಸಂಪೂರ್ಣ ಬೆಂಬಲ

ಬಸ್ ವಿಳಂಬವಾಗುವ ಕಾರಣ ಮಕ್ಕಳು ಶಾಲೆಗೆ ಬಾರದೇ ಇರಬಹುದು. ಅವರ ಹಾಜರಾತಿಯನ್ನು ತೆಗೆಯದೆ ಸಹಕರಿಸಿ ಎಂದು ಶಿಕ್ಷಕರಲ್ಲಿ ಮನವಿ ಮಾಡಿದ್ದಾರೆ. ಬೆಳಗ್ಗಿನಿಂದಲೇ ಖಾಸಗಿ ವಾಹನಗಳು ರಸ್ತೆಗಿಳಿದಿದ್ದು, ನಗರ ಬಸ್ ನಿಲ್ದಾಣದಲ್ಲಿ ಜನ ಕಡಿಮೆ ಇದ್ದಾರೆ ಎನ್ನುವ ದೃಷ್ಟಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು ಕಂಡು ಬಂತು.

Mix response for bandh in CM's native

ಇದೇ ವೇಳೆ ಪ್ರತಿಭಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಬಂದ್ ಮುಂದಿಟ್ಟುಕೊಂಡು ಮೆರವಣಿಗೆಗೆ ತೊಂದರೆ ನೀಡಲು ಪ್ರಯತ್ನ ನಡೆಯುತ್ತಿದೆ. ಗಲಾಟೆ ಇಲ್ಲದಿದ್ದರೂ ಬಸ್ ನಿಲ್ಲಿಸಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಕಾರ್ಯಕರ್ತರಿರುವ ಬರುವ ಬಸ್ ಗಳನ್ನು ಸಹ ತಡೆಯಲಾಗುತ್ತಿದೆ. ಇದೆಲ್ಲವನ್ನೂ ಗಮನಿಸುತ್ತಿದ್ದರೆ , ಕ್ಷುಲ್ಲಕ ರಾಜಕಾರಣ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ.

ಮಹದಾಯಿಗಾಗಿ ಕರ್ನಾಟಕ ಬಂದ್: ತಿಳಿಯಬೇಕಾದ 6 ಸಂಗತಿಮಹದಾಯಿಗಾಗಿ ಕರ್ನಾಟಕ ಬಂದ್: ತಿಳಿಯಬೇಕಾದ 6 ಸಂಗತಿ

ಇದಕ್ಕೆಲ್ಲ ನಮ್ಮ ಕಾರ್ಯಕರ್ತರು ಬೆದರುವುದಿಲ್ಲ. ನಮ್ಮಲ್ಲಿ ಬುತ್ತಿ ತಂದಿಟ್ಟುಕೊಂಡು ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿದ್ದಾರೆ. ಸಮಾವೇಶಕ್ಕೆ 40 ರಿಂದ 50 ಸಾವಿರ ಜನರು ಸಮಾವೇಶಕ್ಕೆ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಬಂದಿನಿಂದ ಜನ ಕಡಿಮೆಯಾಗಬಹುದು. ಆದರೂ ಜನರು ಬೈಕ್ ಮೂಲಕವಾದರೂ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ ಎಂದರು.

Mix response for bandh in CM's native

ಮೈಸೂರಿನಲ್ಲಿ ಅಂಗಡಿ ತೆರೆದವರಿಗೆ ಹಾರ ಹಾಕಿ ಸನ್ಮಾನ ಕರ್ನಾಟಕ ಬಂದ್ ಬೇಡವೆಂದು ಘೋಷಣೆ ತರಕಾರಿ ಅಂಗಡಿ, ಅಂಗಡಿ ತೆಗೆದವರಿಗೆ ಸನ್ಮಾನ ಕರ್ನಾಟಕ ಬಂದ್ ಬೆಂಬಲ ನೀಡದಿದ್ದವರಿಗೆ ಶುಭಾಶಯ ಕೋರಿ ಸನ್ಮಾನ ಜಯ ಕರ್ನಾಟಕ ಸಂಘಟನೆಯಿಂದ ಹೂವಿನ ಹಾರ ಹಾಕಿ ಸನ್ಮಾನ ಮಾಡಿದರು.

English summary
Schools and colleges were remained open and bus service was hit as mix response for Karnataka bandh in Mysuru on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X