ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಕ್ವಾರ್ಟರ್ಸ್ ಬಾಡಿಗೆಗೆ ಬಿಟ್ಟು ಯಾಮಾರಿಸಿದ ಐನಾತಿ ಖದೀಮರು

By Yashaswini
|
Google Oneindia Kannada News

ಮೈಸೂರು, ಜುಲೈ 3 : ಖಾಲಿ ನಿವೇಶನ, ಮನೆಗಳ ಮೇಲೆ ಖದೀಮರ ಆಸೆಯ ಕಣ್ಣು ಬೀಳುವುದು ಸಹಜ. ಆದರೆ ಮೂವರು ಚಾಲಾಕಿಗಳು ನಗರದ ಹೂಟಗಳ್ಳಿಯಲ್ಲಿ ಖಾಲಿ ಇರುವ ಪೊಲೀಸ್ ವಸತಿ ಸಮುಚ್ಚಯದ ಮನೆಗಳನ್ನೇ ತಮ್ಮದು ಎಂದು ಹೇಳಿಕೊಂಡು, ಬಾಡಿಗೆಗೆ ಕೊಡುವುದಾಗಿ ಮಹಿಳೆಯರನ್ನು ವಂಚಿಸಿದ್ದಾರೆ. ಆ ಬಳಿಕ ಜೈಲು ಪಾಲಾಗಿದ್ದಾರೆ!

ಹೂಟಗಳ್ಳಿಯಲ್ಲಿ ಪೊಲೀಸರ ವಾಸ್ತವ್ಯಕ್ಕೆಂದು ಮೀಸಲಾದ ವಸತಿ ಸಮುಚ್ಚಯದಲ್ಲಿ 50 ಮನೆಗಳು ಖಾಲಿ ಇವೆ. ಆ ಮನೆಗಳ ಮೇಲೆ ಬೋಗಾದಿ ನಿವಾಸಿ ಬಾಲು (35), ನಾಗನಹಳ್ಳಿಯ ರೇವಣ್ಣ (45) ಹಾಗೂ ಹಿನಕಲ್ ನ ನಾಗರಾಜು (34) ವಕದೃಷ್ಟಿ ಬಿದ್ದಿದೆ. ಖಾಲಿ ಮನೆಗಳನ್ನು ತಮ್ಮದೆಂದು ಹೇಳಿ ಅಮಾಯಕ ಮಹಿಳೆಯರನ್ನು ನಂಬಿಸಿ, ಅವರಿಗೆ ಬಾಡಿಗೆಗೆ ನೀಡಿದ್ದರು.

ನಗರ ಪಾಲಿಕೆ ಅಧಿಕಾರಿಗಳ ಸೋಗಲ್ಲಿ ನಯವಾಗಿ ವಂಚಿಸಿದ್ದು 10 ಲಕ್ಷನಗರ ಪಾಲಿಕೆ ಅಧಿಕಾರಿಗಳ ಸೋಗಲ್ಲಿ ನಯವಾಗಿ ವಂಚಿಸಿದ್ದು 10 ಲಕ್ಷ

ನಡೆದದ್ದಾದರೂ ಏನು?

ನಗರದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಕುಟುಂಬದ ವಾಸ್ತವ್ಯಕ್ಕಾಗಿ ಮನೆ ನೀಡಲೆಂದು ಕರ್ನಾಟಕ ಗೃಹ ಮಂಡಳಿ ಜತೆ ಪೊಲೀಸ್ ಇಲಾಖೆ ಒಪ್ಪಂದ ಮಾಡಿಕೊಂಡು, 500 ಮನೆಗಳನ್ನು ಪಡೆದುಕೊಂಡಿದೆ. ಅದರಲ್ಲಿ 50 ಮನೆಗಳು ಖಾಲಿ ಇವೆ. ಅದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಅಮಾಯಕ ಮಹಿಳೆಯರಿಗೆ ಬಾಡಿಗೆಗೆ ನೀಡಿ, ಮುಂಗಡ ಹಣವನ್ನೂ ಪಡೆದು ವಂಚಿಸಿದ್ದಾರೆ.

Miscreants held for cheating in the name of providing homes at Mysuru police quarters

ಬಾಡಿಗೆ ಮನೆಗಾಗಿ ಹುಡುಕುತ್ತಿದ್ದ ನಾಲ್ವರು ಮಹಿಳೆಯರನ್ನು ಮನೆ ಕೊಡಿಸುವ ಬ್ರೋಕರ್ ಗಳ ಮೂಲಕ ಮೊದಲು ಈ ಮೂವರೂ ವಂಚಕರು ಪರಿಚಯ ಮಾಡಿಕೊಂಡಿದ್ದಾರೆ. ಆ ಬಳಿಕ ಮಹಿಳೆಯರನ್ನು ಪೊಲೀಸ್ ವಸತಿಗೃಹಗಳ ಬಳಿ ಕರೆದೊಯ್ದು, ಬಹಳ ಕಡಿಮೆ ಮೊತ್ತಕ್ಕೆ ಬಾಡಿಗೆಗೆ ನೀಡುವುದಾಗಿ ನಂಬಿಸಿದ್ದಾರೆ.

ಸದ್ಯಕ್ಕೆ 10 ಸಾವಿರ ರುಪಾಯಿ ಮುಂಗಡ ನೀಡಿ ಮನೆಯಲ್ಲಿ ವಾಸ ಆರಂಭಿಸಿ. ಆ ನಂತರ ಎಷ್ಟು ಬಾಡಿಗೆ ನೀಡಬೇಕೆಂದು ತಿಳಿಸುತ್ತೇವೆ ಎಂದಿದ್ದಾರೆ. ಕಡಿಮೆ ಮುಂಗಡಕ್ಕೆ ಮನೆ ದೊರಕಿತಲ್ಲಾ ಎಂಬ ಸಂತಸದಲ್ಲಿ ನಾಲ್ವರೂ ಮಹಿಳೆಯರು ತಮ್ಮ ಸಾಮಾನು ಸರಂಜಾಮಿನೊಡನೆ ಮನೆ ಸೇರಿಕೊಂಡಿದ್ದಾರೆ.

ಇದನ್ನೆಲ್ಲಾ ಗಮನಿಸುತ್ತಿದ್ದ ನೆರೆಹೊರೆಯವರು, ಆರೋಪಿಗಳು ಸ್ಥಳದಿಂದ ತೆರಳಿದ ಬಳಿಕ ಮನೆಯಲ್ಲಿದ್ದ ಮಹಿಳೆಯರನ್ನು ಪ್ರಶ್ನಿಸಿ, ಮಾಹಿತಿ ಕಲೆಹಾಕಿದ್ದಾರೆ. ಆ ನಂತರ ವಿಜಯನಗರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಅದಾಗಲೇ ಬಾಡಿಗೆ ಮನೆಯಲ್ಲಿ ಪಾತ್ರೆ ಪಡಗಗಳನ್ನು ಜೋಡಿಸಿಕೊಳ್ಳುತ್ತಿದ್ದ ಮಹಿಳೆಯರ ವಿಚಾರಣೆ ನಡೆಸಿದ್ದಾರೆ.

ಆಗ ಅವರೆಲ್ಲರೂ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಆರೋಪಿಗಳು ಇರುವ ಸ್ಥಳದ ಮಾಹಿತಿ ಪಡೆದ ಪೊಲೀಸರು, ಮೂವರೂ ವಂಚಕರನ್ನು ಬಂಧಿಸಿ, ವಂಚನೆ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ. ತಾವು ಬಾಡಿಗೆಗೆ ಬಂದಿರುವುದು ಪೊಲೀಸ್ ಕ್ವಾಟರ್ಸ್ ಎಂದು ತಿಳಿಯುತ್ತಿದ್ದಂತೆ ಮಹಿಳೆಯರಿಗೆ ದಿಕ್ಕು ತೋಚದಂತಾಗಿದೆ.

ಮನೆ ಖಾಲಿ ಮಾಡುವಂತೆ ಪೊಲೀಸರು ಹೇಳುತ್ತಿದ್ದಂತೆ ತಕರಾರು ತೆಗೆದ ಮಹಿಳೆಯರು, 'ನಾವು ಇಲ್ಲಿಂದ ಹೋಗುವುದಿಲ್ಲ. ಈ ಮನೆಗೆ ಮುಂಗಡ ಹಣ ನೀಡಿದ್ದೇವೆ' ಎಂದು ವಾಗ್ವಾದಕ್ಕೆ ಇಳಿದಿದ್ದಾರೆ. ಪೊಲೀಸರು ಒತ್ತಡ ಹಾಕಿದ ಬಳಿಕ, 'ನಮ್ಮ ಹಣವನ್ನು ಕೊಡಿಸಿ, ಜಾಗ ಖಾಲಿ ಮಾಡುತ್ತೇವೆ' ಎಂದಿದ್ದಾರೆ.

ಆದರೆ, ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಕರೆಸಿ, ಅವರ ನೆರವಿನಿಂದ ಮನೆ ಖಾಲಿ ಮಾಡಿಸಿದ್ದಾರೆ. ಮಹಿಳೆಯರು ಅನ್ಯಮಾರ್ಗವಿಲ್ಲದೆ, ವಂಚಕರನ್ನು ಬೈಯುತ್ತಾ, ಹಣ ಕಳೆದುಕೊಂಡಿದ್ದಕ್ಕೆ ದುಃಖಿಸುತ್ತಾ ಮನೆ ಖಾಲಿ ಮಾಡಿ ನಿರ್ಗಮಿಸಿದ್ದಾರೆ.

English summary
Police have arrested miscreants who were cheating people in the name of getting homes and showing houses in Police quarters in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X