ಮೈಸೂರಿನಲ್ಲಿ ಪವಾಡ, ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಟ ಮಹಿಳೆ!

Posted By:
Subscribe to Oneindia Kannada

ಮೈಸೂರು, ಮೇ 18 : ಮೈಸೂರಿನಲ್ಲಿ ಪವಾಡವೊಂದು ನಡೆದಿದೆ. ಅಂತ್ಯಸಂಸ್ಕಾರದ ವೇಳೆ ಮಹಿಳೆಯೊಬ್ಬಳು ಕಣ್ಣು ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪದ್ಮಾ ಲೋಡಾ ಎಂಬ 51 ವರ್ಷದ ಮಹಿಳೆ ಅಂತ್ಯಸಂಸ್ಕಾರದ ವೇಳೆ ಸ್ಮಶಾನದಲ್ಲಿ ಕಣ್ಣು ಬಿಟ್ಟಿದ್ದಾರೆ. ಉಸಿರಾಟದ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಪದ್ಮಾ ಲೋಡಾ ಅವರು ಮೇ 16ರಂದು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದರು. [ತಿಂಗಳ ಮಗು ನಡೆಯುತ್ತಂತೆ, ಬೆಂಕಿ ಉಗುಳುತ್ತಂತೆ!]

padma

ಮೇ 17ರ ಮಂಗಳವಾರ ಅವರ ಅಂತ್ಯ ಸಂಸ್ಕಾರಕ್ಕಾಗಿ ಕೊನೆಯ ಹಂತದ ಕಾರ್ಯಗಳನ್ನು ಮಾಡುವಾಗ ಅವರು ಕಣ್ಣು ಬಿಟ್ಟು ಅಚ್ಚರಿ ಹುಟ್ಟಿಸಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. [ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ಹೊಟ್ಟೆಯಲ್ಲಿ ರಕ್ಷಿಸಿದ ಮಹಾತಾಯಿ!]

ಪದ್ಮಾ ಅವರು ಮೂಲತಃ ರಾಜಸ್ಥಾನದವರು. ಮೈಸೂರು ಅಗ್ರಹಾರದಲ್ಲಿ ಅವರು ವಾಸವಾಗಿದ್ದರು. ವೈದ್ಯರು ಪದ್ಮಾ ಅವರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ ಬಳಿಕ ಕುಟುಂಬದವರು ಸಂಬಂಧಿಕರು ಆಗಮಿಸಲು ನೆರವಾಗಲಿ ಎಂದು ರಾಜಸ್ಥಾನದ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದ್ದರು. [ಸಾವಿನಂಚಿನಲ್ಲಿದ್ದ ಅಮ್ಮನಿಗೆ ಮರುಜನ್ಮ ನೀಡಿದ ಮಗು!]

ಸಂಬಂಧಿಕರು ಆಗಮಿಸಿದ ಮೇಲೆ ಶವದ ಅಂತ್ಯ ಸಂಸ್ಕಾರದ ಕೊನೆ ಹಂತದ ಕಾರ್ಯಗಳನ್ನು ಮಾಡಲಾಗುತ್ತಿತ್ತು. ಈ ವೇಳೆ ಪದ್ಮಾ ಅವರು ಕಣ್ಣು ಬಿಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Miracle in Mysuru city. 51-year-old Woman Padma Loda found alive at graveyard. Padma admitted to private hospital after she complained of respiratory problems.
Please Wait while comments are loading...