ಮೈಸೂರಿನಲ್ಲೊಂದು ಅಪ್ರಾಪ್ತ ಅಂತರ್ಜಾತಿಯ ಪ್ರೇಮ ವಿವಾಹ

Posted By:
Subscribe to Oneindia Kannada

ಮೈಸೂರು, ಜೂನ್ 20 : ಪ್ರೀತಿ ಕುರುಡು ಅಂತಾರೆ. ಪ್ರೀತಿಗೆ ಜಾತಿ ಧರ್ಮದ ಕಟ್ಟುಪಾಡು ಇರಬಾರದು ಎಂಬ ವೇದಾಂತ ಎಲ್ಲರೂ ಆಡುತ್ತಾರೆ. ಆದರೆ, ವಯಸ್ಸಿನ ಅಂತರವಿರಬೇಕು ತಾನೆ?

ಮೈಸೂರಿನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಹಿಂದೂ ಯುವಕನೊಬ್ಬ ಮುಸ್ಲಿಂ ಯುವತಿಯನ್ನು ಇಷ್ಟಪಟ್ಟು ಮದುವೆಯಾಗಿದ್ದಾನೆ. ಆದರೆ ತೊಡಕಾಗಿರುವುದು ಆತನ ವಯಸ್ಸು. ಯಾಕೆಂದರೆ ಆತನಿನ್ನೂ ಅಪ್ರಾಪ್ತ!

Minor Hindu boy marries Muslim girl in Mysuru

ಮೈಸೂರಿನ ಜಯಪುರದ ಸಮೀರಾ ಹಾಗೂ ಜನತಾ ನಗರದ ಹೇಮಂತ್ ಎಂಬುವವರೇ ಮದುವೆಯಾದವರು. ಇವರಿಬ್ಬರೂ ಮೊದಲಿನಿಂದಲೂ ಸ್ನೇಹಿತರು. ಹೇಮಂತ್ ಪಿಯುಸಿ ಮುಗಿದ ತಕ್ಷಣ ಡ್ರೈವರ್ ವೃತ್ತಿಯನ್ನು ಮಾಡುತ್ತಿದ್ದ.

ಕಾನೂನಿನ ದೃಷ್ಟಿಯಲ್ಲಿ ಸಮೀರಾ ಪ್ರಬುದ್ಧೆ ಆಕೆಗೆ 18, ಅಂದರೆ ಮದುವೆಯಾಗುವ ವಯಸ್ಸು. ಆದರೆ ಹೇಮಂತ್ ಅಪ್ರಾಪ್ತ. ಯಾಕೆಂದರೆ ಹೇಮಂತ್ ವಯಸ್ಸು 21 ಆಗಿಲ್ಲ. ಇನ್ನು ಮೂರು ತಿಂಗಳ ನಂತರ ಆತ ಮದುವೆ ಮಾಡಿಕೊಳ್ಳಲು ಲೈಸೆನ್ಸ್ ಪಡೆದುಕೊಳ್ಳುತ್ತಾನೆ.

ಹಿಂದೂ ಮದುವೆ ಕಾಯಿದೆಯ ಪ್ರಕಾರ, ಲಗ್ನವಾಗಲು ಭಾರತೀಯ ಯುವಕನ ವಯಸ್ಸು ವಿವಾಹಕ್ಕೆ 21 ಆಗಿರಬೇಕು. ಆದರೆ ಇವರಿಬ್ಬರೂ ಸೋಮವಾರ ಸರಳವಾಗಿ ಸಮೀಪದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಇದು ಕಾನೂನು ಬಾಹಿರ ವಿವಾಹ.

ಇದೀಗ ಯುವತಿ ಸಮೀರಾ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ, ಇನ್ಸಪೆಕ್ಟರ್ ಜಗದೀಶ್ ಅವರ ಬಳಿ ಮೂರು ತಿಂಗಳವರೆಗೆ ನನಗಾಗಲಿ, ಹೇಮಂತ್ ಗಾಗಲಿ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಕುಟುಂಬಿಕರೇ ಕಾರಣ ಎಂದು ಮುಚ್ಚಳಿಕೆ ಬರೆಸಿದ್ದಾರೆ.

ಈ ಹಿಂದೆ ಇದೇ ರೀತಿಯ ಘಟನೆ ಪಾಂಡವಪುರದಲ್ಲೂ ನಡೆದು ಗಲಭೆಗೆ ಕಾರಣವಾಗಿತ್ತು. ಇದೀಗ ಮೈಸೂರು ಪೊಲೀಸರ ಸಾರಥ್ಯದಲ್ಲಿ ಈ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ. ಆದರೆ, ಮದುವೆಯಾಗಲು ಪೊಲೀಸರು ಹೇಗೆ ಅವಕಾಶ ಮಾಡಿಕೊಟ್ಟರು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A minor Hindu boy has married muslim girl in Mysuru. The boy is just 3 months away from attaining majority. Both were in love. The muslim girl has urged police not to take any action till her 'husband' reaches 21 years.
Please Wait while comments are loading...