ಮದುವೆಗೆಂದು ಪೋಷಕರ ಜತೆ ಬಂದಿದ್ದ ಅಪ್ರಾಪ್ತೆ ಪ್ರಿಯಕರನೊಂದಿಗೆ ಪರಾರಿ

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಡಿಸೆಂಬರ್ 1 : ನೆಂಟರ ಮದುವೆ ಎಂದು ಪೋಷಕರೊಂದಿಗೆ ಬಂದಿದ್ದ ಅಪ್ರಾಪ್ತೆಯೊಬ್ಬಳು ಕಲ್ಯಾಣ ಮಂಟಪದಿಂದಲೇ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.

ತಾಲೂಕಿನ ಅರಿಯೂರಿನ ಸಂಬಂಧಿಗಳ ಮದುವೆ ನಂಜನಗೂಡಿನ ಕಾಮಾಕ್ಷಿ ಬಾಯಿ ಕಲ್ಯಾಣ ಮಂದಿರದಲ್ಲಿ ನಿಗದಿಯಾಗಿತ್ತು. ತಾಂಡವಪುರ ಗ್ರಾಮದ ಅಪ್ರಾಪ್ತೆ ತನ್ನ ಪೋಷಕರೊಂದಿಗೆ ಮದುವೆಗೆ ಬಂದಿದ್ದಳು. ಮದುವೆ ಸಂಭ್ರಮ ನೋಡಿದ ನಂತರ ಆಕೆ ಪ್ರಿಯಕರನಿಗೆ ಕರೆ ಮಾಡಿ, ಕಲ್ಯಾಣಮಂಟಪದ ಸಮೀಪ ಕರೆಸಿಕೊಂಡಿದ್ದಾಳೆ.

Minor girl eloped with boyfriend in Nanjangud

ಆತ ಬೈಕ್ ಏರಿ ಹೊರಟು ಹೋಗಿದ್ದಾಳೆ. ಇತ್ತ ಪೋಷಕರು ಮಗಳಿಗಾಗಿ ಹುಡುಕಿದ್ದಾರೆ. ಆದರೆ ಎಲ್ಲೂ ಸಿಗದೇ ಇದ್ದಾಗ ಆಕೆಯ ಪ್ರಿಯಕರನೊಂದಿಗೆ ತೆರಳಿದ ವಿಷಯ ಸ್ಥಳೀಯರಿಂದ ತಿಳಿದಿದೆ. ಬಾಲಕಿಯ ಪೋಷಕರು ನಂಜನಗೂಡು ಪೊಲೀಸ್‌ ಠಾಣೆಯಲ್ಲಿ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

ಗೃಹಿಣಿಯ ಅನುಮಾನಾಸ್ಪದ ಸಾವು
ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮೈಸೂರಿನ ಕುವೆಂಪು ನಗರದ ಎಂ ಬ್ಲಾಕ್ ನಲ್ಲಿ ಗುರುವಾರ ನಡೆದಿದೆ.

ವಿನುತಾ (24 ವರ್ಷ) ಮೃತ ದುರ್ದೈವಿ. ಇವರಿಗೆ ನಗರದ ಕೆಎಸ್ ಆರ್‍ ಟಿಸಿ ಡಿಪೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಸಂತ್ ಎಂಬವರ ಜೊತೆ ಐದು ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ ಗುರುವಾರ ಮಧ್ಯಾಹ್ನ ಮನೆ ಮುಂದೆ ಇದ್ದ ನೀರಿನ ಸಂಪ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ

ವಿನುತಾಗೆ ಮದುವೆಯಾಗಿ 5 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಆದ್ದರಿಂದಲೇ ಗಂಡನೇ ಕೊಲೆ ಮಾಡಿ, ಯಾರಿಗೂ ಅನುಮಾನ ಬರಬಾರದೆಂದು ನೀರಿನ ಸಂಪ್ ಗೆ ಹಾಕಿದ್ದಾನೆ ಎಂದು ವಿನುತಾ ಪೋಷಕರು ಆರೋಪಿಸುತ್ತಿದ್ದಾರೆ. ವಸಂತ್ ಸೇರಿದಂತೆ ಆತನ ಪೋಷಕರು ದೈಹಿಕ ಹಾಗೂ ಮಾನಸಿಕ ಕಿರುಕುಳ ಕೊಡುತ್ತಿದ್ದರು ಎಂದು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವಿನುತಾ ಪೋಷಕರು ಪತಿ ವಸಂತ್ ವಿರುದ್ಧ ದೂರು ನೀಡಿದ್ದಾರೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Minor girl who came for a marriage with parents eloped with boyfriend in Nanjangud. In another case woman dead body found in sump. Unnatural case registered.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ