ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪ್ರಾಪ್ತನನ್ನು ವರಿಸಿದ 24ರ ಯುವತಿ : ಠಾಣೆಯ ಮೆಟ್ಟಿಲೇರಿದ ಪ್ರಕರಣ

ಮೈಸೂರಿನಲ್ಲಿ ಅಪ್ರಾಪ್ತ ಯುವಕನೊಬ್ಬ 24 ವರ್ಷದ ಮಹಿಳೆಯನ್ನು ಮದುವೆಯಾಗುವ ಮೂಲಕ ಕಾನೂನಿಗೆ ಸವಾಲೊಡ್ಡಿದ್ದಾನೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 10: ಪ್ರೀತಿ ಕುರುಡು ಎಂಬುದನ್ನು ಮೈಸೂರಿನ ಜೋಡಿಯೊಂದು ಮತ್ತೊಮ್ಮೆ ತೋರಿಸಿಕೊಟ್ಟಿದೆ. ಪ್ರಪಂಚ ಹೇಗಿದೆ ಎಂಬುದನ್ನೇ ತಿಳಿಯದ, ಅಪ್ರಾಪ್ತ ಯುವಕನೊಬ್ಬ 24 ವರ್ಷದ ಮಹಿಳೆಯನ್ನು ಮದುವೆಯಾಗುವ ಮೂಲಕ ಕಾನೂನಿಗೆ ಸವಾಲೊಡ್ಡಿದ್ದಾನೆ.

ಭಾರತೀಯ ವಿಶೇಷ ವಿವಾಹ ಕಾಯ್ದೆ- 1954ರ ಅನ್ವಯ ಹುಡುಗ ತಾನು ಸ್ವಾವಲಂಬಿಯಾಗಿ, ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಕುಟುಂಬ ನಿಭಾಯಿಸಲು ಸಮರ್ಥನಾಗುವವರೆಗೂ ಮದುವೆಯಾಗುವಂತಿಲ್ಲ. ಅದಕ್ಕೆಂದೇ ಭಾರತೀಯ ಪುರುಷರು 21 ವರ್ಷವಾಗುವವರೆಗೂ ಮದುವೆಯಾಗುವಂತಿಲ್ಲ ಎಂದು ಕಾಯ್ದೆಯೇ ಹೇಳಿದೆ. ಹಾಗೆಯೇ ಭಾರತದಲ್ಲಿ ಮಹಿಳೆಯರು 18 ತುಂಬುವವರೆಗೂ ಮದುವೆಯಾಗುವಂತಿಲ್ಲ.[ನಂಜನಗೂಡು ಉಪಚುನಾವಣೆ: ದಾಖಲೆಯ ಶೇ.77 ಮತದಾನ]

Minor boy married 24 years old girl in Mysuru

ಆದರೆ ಇಲ್ಲಿ ಆಗಿದ್ದೇ ಬೇರೆ. ಮೈಸೂರಿನ ಮಂಡಿಮೊಹಲ್ಲಾ ನಿವಾಸಿ ಅಪ್ರಾಪ್ತ ಯುವಕನೋರ್ವ ತನಗಿಂತ 5 ವರ್ಷ ಹಿರಿಯ ಯುವತಿಗೆ ತಾಳಿ ಕಟ್ಟಿದ್ದಾನೆ.[ಮೈಸೂರಿನಲ್ಲಿ ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ]

ಇಬ್ಬರೂ ಒಂದೇ ಬೀದಿಯಲ್ಲಿ ವಾಸಿಸುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮನೆಯವರೆಲ್ಲರ ಕಣ್ಣಿಗೆ ಮಣ್ಣೆರೆರಚಿ, ಇಲ್ಲಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸತ್ಯನಾರಾಯಣ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು ವಿವಾಹವಾಗಿದ್ದಾರೆ.

ಇದೀಗ ಅಪ್ರಾಪ್ತನ ಮನೆಯವರು ಠಾಣೆಯ ಮೆಟ್ಟಿಲೇರಿದ್ದಾರೆ. ಇದು ಬಲವಂತದ ಮದುವೆ. ಅವನಿಗೆ ವಿವಾಹವಾಗುವ ವಯಸ್ಸಲ್ಲ. ತಮ್ಮ ಮಗನನ್ನು ನಮಗೆ ವಾಪಸ್ ಕೊಡಿಸಿ ಎಂದು ಠಾಣಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪ್ರೀತಿ ಮಾಯೆ ಹುಶಾರು ಎಂದು ತಿಳಿದವರು ಹೇಳುತ್ತಿದ್ದುದು ಬಹುಶಃ ಇದಕ್ಕೇ ಇರಬೇಕು.

English summary
A minor boy married a 24 years old girl in Mysuru. The incident violates Indian Special Marriages Act- 1954, which strictly said that bridegroom should be at least 21 years old to get married.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X