ಮೈಸೂರು ಉಸ್ತುವಾರಿ ಸಚಿವರ ಕಾರಿನ ಟೈರ್ ಸ್ಫೋಟ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 14: ಮೈಸೂರಿನಲ್ಲಿ ಬುಧವಾರ ಮದ್ಯಾಹ್ನ 3 ಗಂಟೆ ಸುಮಾರಿಗೆ 3 ಗಂಟೆ ಸುಮಾರಿಗೆ ರಿಂಗ್‍ರಸ್ತೆ ಸಾತಗಳ್ಳಿ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಕಾರು ಅಪಘಾತಕ್ಕೀಡಾದ ಘಟನೆ ಸಂಭವಿಸಿದೆ.

ಅಪಘಾತದಿಂದ ಅದೃಷ್ಟವಶಾತ್ ಯಾವುದೇ ಹಾನಿಯುಂಟಾಗಿಲ್ಲ. ಬ್ಯಾರಿಕೇಡ್ ಬಳಿ ಪೊಲೀಸ್ ಎಸ್ಕಾರ್ಟ್ ವೇಗ ಕಡಿಮೆಗೊಳಿಸಿದಾಗ ಹಿಂದೆ ಬರುತ್ತಿದ್ದ ಸಚಿವರ ಕಾರಿನ ಟೈರ್ ಬಸ್ಟ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.[ಉರುಳಿದ ಟೆಂಪೋ ಟ್ರಾವಲರ್ ಸಿನಿಮೀಯ ರೀತಿಯಲ್ಲಿ ಪಾರು]

Minister mahadevappa traveled car tires burst in Mysuru

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಯುಂಟಾಗಿಲ್ಲ. ಇನ್ನು ಘಟನೆಯಿಂದಾಗಿ ಕಾರು ಹಾಗೂ ಎಸ್ಕಾರ್ಟ್ ವಾಹನಗಳು ಸಂಪೂರ್ಣ ಜಖಂಗೊಂಡಿದೆ. ವಾಹನ ಜಖಂಗೊಂಡ ಪರಿಣಾಮ ಕೆಲಹೊತ್ತು ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

Minister mahadevappa traveled car tires burst in Mysuru

ಸ್ಥಳದಲ್ಲಿಯೇ ಇದ್ದ ಪೊಲೀಸರು ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸಚಿವರು ಪ್ರತ್ಯೆಕ ವಾಹನದಲ್ಲಿ ತೆರಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Minister mahadevappa traveled car tires burst in Mysuru, damaged car minister is safe
Please Wait while comments are loading...