ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಸಿದ್ದರಾಮಯ್ಯ ಮಾತನ್ನು ಮೀರಿದ ಸಚಿವ ಜಿ.ಟಿ. ದೇವೇಗೌಡ

By Yashaswini
|
Google Oneindia Kannada News

Recommended Video

ಸಿದ್ದರಾಮಯ್ಯನವರ ಮಾತು ಮೀರಿದ ಜಿ ಟಿ ದೇವೇಗೌಡ | Oneindia Kannada

ಮೈಸೂರು, ಜುಲೈ 18: ರಾಜ್ಯದ ನೂತನ ಸರ್ಕಾರ ವಿಶ್ವವಿದ್ಯಾನಿಲಯಗಳ ನಾಮನಿರ್ದೇಶಿತ ಸದಸ್ಯರ ಸದಸ್ಯತ್ವವನ್ನು ರದ್ದುಪಡಿಸಿ ಆದೇಶಿಸಿದೆ. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎನ್. ವೀರಬ್ರಹ್ಮಚಾರಿ ಈ ಸಂಬಂಧ ಆದೇಶಿಸಿದ್ದಾರೆ.

ರಾಜ್ಯದ ವಿವಿಗಳ ನಾಮನಿರ್ದೇಶಿತ ಸದಸ್ಯರನ್ನು ಹಿಂಪಡೆಯದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಕೆಲ ದಿನಗಳ ಹಿಂದೆಯಷ್ಟೆ ಪತ್ರ ಬರೆದಿದ್ದರು. ಆದರೆ ಈ ಪತ್ರಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಮೈಸೂರಿನಲ್ಲಿ ಮಾಧ್ಯಮದ ಜತೆ ಖಾರವಾಗಿ ಪ್ರತಿಕ್ರಿಯಿಸಿ, ಸರ್ಕಾರ ಬದಲಾದಂತೆ ನಾಮ ನಿರ್ದೇಶಿತ ಸದಸ್ಯರು ಬದಲಾಗುತ್ತಾರೆ. ಇದು ಸಿದ್ದರಾಮಯ್ಯಗೆ ತಿಳಿದಿಲ್ಲವೇ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯಗೆ ಟಾಂಗ್ ನೀಡಿ, ಎಚ್‌ಡಿಕೆ ಪರ ಬ್ಯಾಟ್ ಬೀಸಿದ ಡಿಕೆಶಿಸಿದ್ದರಾಮಯ್ಯಗೆ ಟಾಂಗ್ ನೀಡಿ, ಎಚ್‌ಡಿಕೆ ಪರ ಬ್ಯಾಟ್ ಬೀಸಿದ ಡಿಕೆಶಿ

ಈ ಬೆಳವಣಿಗೆ ನಡೆದ ಎರಡು ಮೂರು ದಿನಗಳಲ್ಲೇ ರಾಜ್ಯ ಸರ್ಕಾರ ವಿವಿಧ ವಿಶ್ವವಿದ್ಯಾನಿಲಯಗಳ ನಾಮ ನಿರ್ದೇಶಿತ ಸದಸ್ಯರ ಸದಸ್ಯತ್ವವನ್ನ ರದ್ದುಪಡಿಸಿ ಆದೇಶಿಸಿರುವುದು ಗಮನಾರ್ಹ.

Minister GT Devegowda Says University nominated members change as the government changes

ಕೆಎಸ್ ಓಯು ತರಾತುರಿ ಸಭೆ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ತರಾತುರಿಯಲ್ಲಿ ಜುಲೈ. 21 ರಂದು ಬಿಓಎಂ ಸಭೆ ಕರೆದಿತ್ತು. ಈ ಸಭೆಯಲ್ಲಿ 30ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಯೋಜನೆಗೆ ಅಂಗೀಕಾರ ಪಡೆಯುವುದು ಉದ್ದೇಶವಾಗಿತ್ತು ಎನ್ನಲಾಗಿದೆ.

ಈಗಾಗಲೇ ಕೆಎಸ್ ಒಯು ವಿವಾದದ ಗೂಡಾಗಿದ್ದು, ಯಾವುದೇ ಕಾರ್ಯಚಟುವಟಿಕೆ ನೆಡಯುತ್ತಿಲ್ಲ. ಹಾಲಿ ನಿರ್ಮಾಣಗೊಂಡಿರುವ ಕಟ್ಟಡಗಳೇ ಖಾಲಿ ಬಿದ್ದಿವೆ. ಇಂತಹ ಸ್ಥಿತಿಯಲ್ಲಿ ಹೊಸದಾಗಿ ಕಟ್ಟಡ ಕಟ್ಟಲು ಮುಂದಾಗಿದ್ದ ವಿವಿ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

Minister GT Devegowda Says University nominated members change as the government changes

ಈ ಹಿನ್ನೆಲೆಯಲ್ಲಿ ಬಿಓಎಂ ಸಭೆ ಕರೆದು ಯೋಜನೆಗೆ ಅಂಗೀಕಾರ ಪಡೆಯಲು ಉದ್ದೇಶಿಸಲಾಗಿತ್ತು ಎನ್ನಲಾಗಿದೆ. ಆದರೆ ಇದೀಗ ರಾಜ್ಯ ಸರ್ಕಾರ ನಾಮನಿರ್ದೇಶಿತ ಸದಸ್ಯರನ್ನು ಹಿಂದಕ್ಕೆ ಪಡೆದಿರುವುದರಿಂದ ಸಭೆ ನಡೆಯುವುದು ಅನುಮಾನ ಎಂದು ಕೇಳಿಬರುತ್ತಿದೆ.

English summary
Minister GT Devegowda Said that University nominated members change as the government changes. It does not know Siddaramaiah
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X