ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆ ಯಾರು ಬರಲಿಲ್ಲ: ಜಿಟಿ ದೇವೇಗೌಡ

|
Google Oneindia Kannada News

ಮೈಸೂರು, ನವೆಂಬರ್. 01: ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ, ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪ್ರಚಾರಕ್ಕೆ ಯಾರು ಬರದಿದ್ದರೇ ಅವರಾದರೂ ಏನು ಮಾಡಲು ಆಗುತ್ತದೆ ? ಬಿಜೆಪಿ ಬೇರೆ ಪಕ್ಷದ ರೀತಿಯಲ್ಲ. ಅಲ್ಲಿ ಅವರದ್ದೇ ಆದ ಕೋಟೆ ಕಟ್ಟಿಕೊಂಡಿದ್ದಾರೆ ಎಂದು ಟೀಕಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಬಿಜೆಪಿಯಲ್ಲಿ ಇದ್ದಾಗ ಈ ರೀತಿ ಆಗಿರಲಿಲ್ಲ. ನಾನು, ಬಂಗಾರಪ್ಪ ಎಲ್ಲರೂ ಇದ್ದು ವಾಪಸ್ ಬಂದಿದ್ದೆವು. ಬೇರೆ ಪಕ್ಷದಿಂದ ಬಂದವರನ್ನು ಬಿಜೆಪಿಯಲ್ಲಿ ಸರಿಯಾಗಿ ನಡೆಸಿಕೊಳ್ಳುವುದಿಲ್ಲ.

ಬಿಜೆಪಿಗೆ 'ಕೈ'ಕೊಟ್ಟ ರಾಮನಗರ ಅಭ್ಯರ್ಥಿ: ಎರಡೇ ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆಬಿಜೆಪಿಗೆ 'ಕೈ'ಕೊಟ್ಟ ರಾಮನಗರ ಅಭ್ಯರ್ಥಿ: ಎರಡೇ ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆ

ಬಿಜೆಪಿ ಅನಾಥ ಮಾಡಿ ಬಿಎಸ್ ಯಡಿಯೂರಪ್ಪ ಕೆಜಿಪಿ ರಚನೆ ಮಾಡಿದಾಗ ನಾನು ವಾಪಸ್ ಬಂದೆ. ಅಭ್ಯರ್ಥಿ ಆಯ್ಕೆ ಮಾಡುವಾಗಲೇ ಬಿಜೆಪಿ ನಾಯಕರು ವಿಫಲರಾಗಿದ್ದರು. ಈ ಬೆಳವಣಿಗೆಯಿಂದ ನಮ್ಮ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರೇ ಏಕೈಕ ಅಭ್ಯರ್ಥಿಯಾಗಿದ್ದಾರೆ.

Minister GT Deve Gowda reacted about Ramanagara election

ಬಿಜೆಪಿಗೆ ಕೈಕೊಟ್ಟ ಚಂದ್ರಶೇಖರ್ ನಡೆಯ ಬಗ್ಗೆ ಯಾರು, ಏನಂದರು?ಬಿಜೆಪಿಗೆ ಕೈಕೊಟ್ಟ ಚಂದ್ರಶೇಖರ್ ನಡೆಯ ಬಗ್ಗೆ ಯಾರು, ಏನಂದರು?

ಹೀಗಾಗಿ ಜನತೆ ಅವರಿಗೆ ಹೆಚ್ಚಿನ ಮತ ನೀಡುತ್ತಾರೆ. ಬಿಜೆಪಿ ಅಭ್ಯರ್ಥಿ ಕಂಗಾಲಾಗಿ ಚುನಾವಣೆಗೂ ಮುನ್ನ ತಮ್ಮ ಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಬೇರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರಿಸ್ಥಿತಿ ಕೂಡ ಇದೇ ರೀತಿ ಇದೆ. ಅವರಿಗೂ ಅನುಭವ ಆಗುತ್ತಿದೆ. ಆದರೆ ವಾಪಸ್ ಬರಲು ಅವರಿಗೆ ಆಗುತ್ತಿಲ್ಲ ಎಂದು ಜಿ.ಟಿ ದೇವೇಗೌಡರು ಲೇವಡಿ ಮಾಡಿದ್ದಾರೆ.

English summary
BJP candidate Chandrasekhar has withdrawn from the election in Ramanagara. Minister GT Deve Gowda reacted to this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X