ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಹೆಂಡತಿ ಗೆದ್ದಿದ್ದಕ್ಕೆ ಪತಿಗೆ ನಡುರಸ್ತೆಯಲ್ಲೇ ಕ್ಷೀರಾಭಿಷೇಕ

By ಯಶಸ್ವಿನಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್.4: ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ತಮ್ಮ ಅಂದಾಭಿಮಾನ ಪ್ರದರ್ಶಿಸಿರುವ ಘಟನೆ ನಡೆದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿ ಗೆಲುವು ಸಾಧಿಸಿದ್ದಕ್ಕೆ ಆಕೆಯ ಪತಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಮೈಸೂರು ಮಹಾನಗರ ಪಾಲಿಕೆ 36ನೇ ವಾರ್ಡ್ ಸದಸ್ಯೆಯಾಗಿ ರುಕ್ಮಿಣಿ ಆಯ್ಕೆಯಾಗಿದ್ದಾರೆ. ನೂತನ ಸದಸ್ಯೆ ರುಕ್ಮಿಣಿ ಮಾದೇಗೌಡ ಅವರ ಪತಿ ಮಾದೇಗೌಡರಿಗೆ ಅಭಿಮಾನಿಗಳು ಎರಡು ಬಿಂದಿಗೆಯಲ್ಲಿ ಹಾಲಿನ ಅಭಿಷೇಕ ಮಾಡಿದ್ದಾರೆ.

ವೈರಲ್ ವಿಡಿಯೋ: ಭೂಕುಸಿತಕ್ಕೆ ಮಕಾಡೆಯಾಯ್ತು ದೈತ್ಯ ಬಸ್ಸು!ವೈರಲ್ ವಿಡಿಯೋ: ಭೂಕುಸಿತಕ್ಕೆ ಮಕಾಡೆಯಾಯ್ತು ದೈತ್ಯ ಬಸ್ಸು!

ಮಾದೇಗೌಡ ಶ್ರೀರಾಂಪುರ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದು, ಯರಗನಹಳ್ಳಿ ವಾರ್ಡ್ ನ ಕೃಷ್ಣ ದೇವಸ್ಥಾನದ ಬಳಿ ಹಾಲಿನ ಅಭಿಷೇಕ ಮಾಡಲಾಗಿದೆ.

 ನಾಸಾ ವಿಡಿಯೋದಲ್ಲಿ ದೇವರ ನಾಡು ಕೇರಳದ ಪ್ರವಾಹ ನಾಸಾ ವಿಡಿಯೋದಲ್ಲಿ ದೇವರ ನಾಡು ಕೇರಳದ ಪ್ರವಾಹ

Milks anointed video is now viral in social media

"ಜನ ಕುಡಿಯುವ ಹಾಲನ್ನು ಅಭಿಷೇಕ ಮಾಡಿರುವುದು ನಾಚಿಕೆಗೇಡಿನ ವಿಷಯ. ಅಧಿಕಾರ ಸಿಕ್ಕ ತಕ್ಷಣ ಈ ರೀತಿ ಮಾಡುವುದು ಸರಿಯಲ್ಲ. ಅಭಿಮಾನಿಗಳು ಈ ರೀತಿ ಮಾಡುವುದನ್ನು ಅವರು ತಡೆಯಬಹುದು. ಆದರೆ ಅವರೂ ತಮ್ಮ ಕಾರ್ಯಕರ್ತರಿಗೆ ಬುದ್ಧಿ ಮಾತನ್ನು ಹೇಳಲಿಲ್ಲ" ಎಂದು ಜನರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

 ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿದ್ದಕ್ಕೆ ಸ್ಪಷ್ಟನೆ ನೀಡಿದ ಸಚಿವ ರೇವಣ್ಣ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿದ್ದಕ್ಕೆ ಸ್ಪಷ್ಟನೆ ನೀಡಿದ ಸಚಿವ ರೇವಣ್ಣ

Milks anointed video is now viral in social media

ಅಭಿಷೇಕ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಎಲ್ಲರೂ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

English summary
Women's candidate won in local body election, So the JDS activists have anointed her husband with milk. Milk's anointed video is now viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X