2 ವರ್ಷದ ಮಗು ಮೇಲೆ ಅತ್ಯಾಚಾರ: ಕಾಮುಕನಿಗೆ 20 ವರ್ಷ ಶಿಕ್ಷೆ

Posted By:
Subscribe to Oneindia Kannada

ಮೈಸೂರು, ಜನವರಿ 4 : ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಅಪರಾಧಿಗೆ ಮೈಸೂರಿನ ನ್ಯಾಯಾಲಯ 20 ವರ್ಷಗಳ ಸುದೀರ್ಘ ಅವಧಿಯ ಜೈಲು ಶಿಕ್ಷೆ ನೀಡಿದೆ.

ಮೇಟಗಳ್ಳಿ ಸಮೀಪದ ಅಂಬೇಡ್ಕರ್ ನಗರ ನಿವಾಸಿ ಸದ್ದಾಂ ಎಂಬ ಕಾಮಾಂಧನೇ ಹಸುಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪರಾಧಕ್ಕಾಗಿ ದೀರ್ಘಾವಧಿ ಕಾರಾಗೃಹ ಶಿಕ್ಷೆಗೊಳಗಾದವನು. ಈತ 2015ರ ಅ.30ರಂದು ಅಂಬೇಡ್ಕರ್ ನಗರದ ನಿವಾಸಿಯೊಬ್ಬರ 2 ವರ್ಷದ ಪುತ್ರಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ಬಳಿಕ ಸದ್ದಾಂನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ತ್ವರಿತಗತಿಯಲ್ಲಿ ವಿಚಾರಣೆ ನಡೆಸಿದ 6ನೇ ಎಜೆಡಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯ ಎಂ.ಪಾವಲೆ ಅವರು, ಎರಡು ವರ್ಷಗಳಲ್ಲೇ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಿದ್ದಾರೆ.

ಛಿ, ಇದೆಂಥ ವಿಕೃತ ಮನಸ್ಸು? 'ಒನ್ ಇಂಡಿಯಾ' ಬಯಲಿಗೆಳೆದ ಸತ್ಯಕತೆ!

ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸದ್ದಾಂಗೆ 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ವಿಜಯ ಎಂ.ಪಾವಲೆ ಅವರು ಬುಧವಾರ ತೀರ್ಪು ನೀಡಿದರು.

2 year old girl's rape and murder case in Mysuru: Court issues 2o years of jail sentence to convict

ಪ್ರಕರಣದ ವಿವರ:
ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಕಂಟ್ರಿ ಕ್ಲಬ್ ಹಿಂಭಾಗದ ಮಾಳದಲ್ಲಿ ವಾಸವಿದ್ದ ತಮ್ಮ ಪತ್ನಿಯ ತಂಗಿ ಮನೆಯಲ್ಲಿ ತಮ್ಮ ಮಗುವನ್ನು ಬಿಟ್ಟು 2 ದಿನ ನೋಡಿಕೊಳ್ಳುವಂತೆ ತಿಳಿಸಿದ್ದರು. ಆರೋಪಿ ಸದ್ದಾಂ ಪತ್ನಿಯಾಗಿದ್ದ ಆಕೆ ಮಗುವನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಆದರೆ ರಾತ್ರಿ ಮನೆಗೆ ಬಂದ ಸದ್ದಾಂ , ಪತ್ನಿ ಬಳಿ ಆಟವಾಡುತ್ತಿದ್ದ ಹಸುಳೆಯನ್ನು ಚಾಕೋಲೇಟ್ ಕೊಡಿಸುವುದಾಗಿ ಹೇಳಿ ಕರೆದೊಯ್ದಿದ್ದ.

ನಂತರ ಮನೆ ಸಮೀಪವಿದ್ದ ಪಾಳುಬಿದ್ದ ಕಟ್ಟಡಕ್ಕೆ ಕರೆದೊಯ್ದು ಮಗುವಿಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದಾನೆ. ಗಾಬರಿಯಾದ ಮಗು ಜೋರಾಗಿ ಅಳಲಾರಂಭಿಸಿದಾಗ ಕೋಪಗೊಂಡ ಸದ್ದಾಂ ಮಗುವಿನ ಮುಖಕ್ಕೆ ಹೊಡೆದಿದ್ದಾನೆ. ಇದರಿಂದಾಗಿ ಮಗುವಿನ ಮೂಗಿನಿಂದ ರಕ್ತಸ್ರಾವವಾಗಿದೆ. ಮಗು ನೋವಿನಿಂದ ಚೀರುತ್ತಿದ್ದರೂ ಲೆಕ್ಕಿಸದೆ ಆತ ಅತ್ಯಾಚಾರ ನಡೆಸಿದ್ದಾನೆ. ನಂತರ ಏನೂ ತಿಳಿಯದವನಂತೆ ಮಗುವನ್ನು ಮನೆಗೆ ಕರೆತಂದು ಬಿಟ್ಟಿದ್ದಾನೆ ಬಾಲಕಿ ತೀವ್ರ ಅಸ್ವಸ್ಥಗೊಂಡಂತೆ ಕಂಡದ್ದರಿಂದ ಪತ್ನಿ ಪ್ರಶ್ನಿಸಿದ್ದಾಳೆ. ಆಕೆಗೆ ಜೋರು ಮಾಡಿ, ಸುಮ್ಮನೆ ಮಲಗುವಂತೆ ಹೇಳಿದ್ದಾನೆ.

ನೋವು, ಅಸ್ವಸ್ಥತೆಯಿಂದ ಹಸುಳೆ ಮಧ್ಯರಾತ್ರಿ ವೇಳೆಗೆ ಮೃತಪಟ್ಟಿದೆ. ನಂತರ ರಾತ್ರಿ 1.30ರ ವೇಳೆ ಬಾಲಕಿಯ ತಂದೆ ಮನೆಗೆ ತೆರಳಿ ಬಾಲಕಿ ಮೃತಪಟ್ಟ ವಿಚಾರ ತಿಳಿಸಿದ್ದಾನೆ. ನಂತರ ಆಟೋದಲ್ಲಿ ಶವ ಸಾಗಿಸಲು ಯತ್ನಿಸಿದಾಗ ಅಕ್ಕಪಕ್ಕದ ನಿವಾಸಿಗಳು ಶಂಕೆಗೊಂಡು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.

ಮೇಟಗಳ್ಳಿ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅತ್ಯಾಚಾರ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಎನ್.ಆರ್. ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A court in Mysuru issued 20 years of jail sentence to the man who raped and murdered a 2 year old girl in 2015.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ