ಮೈಸೂರಿನಲ್ಲಿ ಗೃಹಿಣಿ ಆತ್ಮಹತ್ಯೆ, ಪತಿಯಿಂದ ಕೊಲೆ ಶಂಕೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 22 : ಪತಿ ನೀಡುತ್ತಿದ್ದ ವರದಕ್ಷಿಣಿ ಕಿರುಕುಳವನ್ನು ತಾಳಲಾರದೇ ಗೃಹಿಣಿಯೋರ್ವಳು ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತರನ್ನು ಸುಜಿತಾ (32) ಎಂದು ಗುರುತಿಸಲಾಗಿದೆ.

ಕೆ.ಆರ್.ಪೇಟೆಯಲ್ಲಿ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

ಮೂಲತ: ಮಡಿಕೇರಿಯವರಾದ ಇವರು ಹೆಬ್ಬಾಳು 2ನೇ ಹಂತದಲ್ಲಿ ವಾಸಿಸುತ್ತಿದ್ದರು. ಖಾಸಗಿ ಶಾಲೆಯೊಂದರರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರವೀಣ್‌‌ ಎಂಬಾತನೊಂದಿಗೆ ಪ್ರೇಮ ವಿವಾಹವಾಗಿ ಮೈಸೂರಿನಲ್ಲಿ ನೆಲೆಸಿದ್ದರು.

Married woman commits suicide, murder suspected

ಆದರೆ ಪತಿ ಪ್ರವೀಣ್ ಕುಡಿತ ಹಾಗೂ ಗಾಂಜಾದ ದಾಸನಾಗಿದ್ದ. ಈತ ಪ್ರತಿನಿತ್ಯ ಸುಜಿತಾಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಹಾಗೂ ಮದುವೆಯಾಗಿ ಮೂರು ವರ್ಷ ಕಳೆದರೂ ಮಕ್ಕಳಾಗಿಲ್ಲವೆಂದು ಹಿಂಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಮೈಸೂರು: ಕೆಲಸದ ಒತ್ತಡದಿಂದ ತಹಶೀಲ್ದಾರ್ ಆತ್ಮಹತ್ಯೆ

ಶುಕ್ರವಾರ ಪ್ರವೀಣ್‌‌ ತನ್ನ ಪತ್ನಿಯ ಪೋಷಕರಿಗೆ ಆಕೆ ಸತ್ತಿರುವ ವಿಷಯವನ್ನು ದೂರವಾಣಿ ಮೂಲಕ ವಿಷಯ ತಿಳಿಸಿದ್ದಾನೆ. ಶುಕ್ರವಾರ ರಾತ್ರಿ ಮನೆಯಲ್ಲಿ ತನ್ನ ಸ್ನೇಹಿತನೊಂದಿಗೆ ಕುಡಿಯುತ್ತ ಕುಳಿತಿದ್ದು, ಈತನೇ ತಮ್ಮ ಮಗಳನ್ನು ಕೊಲೆಗೈದು ನೇಣು ಹಾಕಿರಬೇಕೆಂದು ಸುಜಿತಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಹೆಬ್ಬಾಳು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A married woman, teacher by profession, has committed suicide in Mysuru by hanging on Friday evening. The parents of Sujitha, originally from Madikeri, have alleged that her husband used to harass her for dowry and he only has murdered her. ಮೈಸೂರಿನಲ್ಲಿ ಗೃಹಿಣಿ ಆತ್ಮಹತ್ಯೆ, ಪತಿಯಿಂದ ಕೊಲೆ ಶಂಕೆ
Please Wait while comments are loading...