ಹಿಂದೂಯುವತಿಗೆ ಡ್ರಗ್ಸ್ ನೀಡಿ ಹಿಂಸಿಸಿ ಮದುವೆಯಾಗಿದ್ದಾಗಿ ದೂರು

Posted By:
Subscribe to Oneindia Kannada

ಮೈಸೂರು, ಡಿಸೆಂಬರ್ 19 : ಮೈಸೂರಿನಲ್ಲಿ ಯುವತಿ ಮಸ್ಲಿಂ ಯುವಕನೊಂದಿಗೆ ವಿವಾಹವಾಗಿದ್ದು, ತನ್ನ ಪುತ್ರಿ ಲವ್ ಜಿಹಾದ್ ಗೆ ಸಿಲುಕಿದ್ದಾಳೆ ಎಂದು ಆಕೆಯ ಪೋಷಕರು ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಿವಮೊಗ್ಗದ ಸಂಗೀತ ವಿದ್ವಾನ್ ಅರವಿಂದ್ ಹೆಗಡೆ- ಆಶಾ ದಂಪತಿಯ ಪುತ್ರಿ ಅನುಷಾ ಹೆಗಡೆ ಲವ್ ಜಿಹಾದ್ ಗೆ ಸಿಲುಕಿರುವ ಯುವತಿ. ಮೂಲತಃ ಶಿವಮೊಗ್ಗದವರಾದ ಇವರು ಹದಿಮೂರು ವರ್ಷದ ಹಿಂದೆ ಮೈಸೂರಿನಲ್ಲಿ ನೆಲೆಸಿದ್ದರು.

Marriage: Girl’s parent allege love jihad

ಅನುಷಾ ಮೈಸೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಜಾವೀದ್ ಖಾನ್ ಎಂಬಾತನ ಜೊತೆ ಲವ್ ಆಗಿ, ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದಾರೆ. ಆದರೆ ಆತನಿಗೆ ಈ ಮುಂಚೆ ಎರಡು ಮದುವೆ ಆಗಿದ್ದು, ನಮ್ಮ ಮಗಳಿಗೆ ಮೋಸ ಮಾಡಿದ್ದಾನೆ ಎಂದು ತಂದೆ-ತಾಯಿ ದೂರುತ್ತಿದ್ದಾರೆ. ಆಕೆಯನ್ನು ಮನೆಗೆಲಸದವಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಈ ನಡುವೆ ಗಂಡನನ್ನ ಬಿಟ್ಟು ಬಂದ ಅನುಷಾಳ ಜೊತೆ ಪೋಷಕರು ಹತ್ತು ದಿನಗಳ ಹಿಂದೆ ಶಿವಮೊಗ್ಗಕ್ಕೆ ಹಿಂತಿರುಗಿದ್ದಾರೆ. ಆದರೆ ಮತ್ತೆ ಅನುಷಾಳನ್ನು ಜಾವೆದ್ ಬಂದು ಕರೆದುಕೊಂಡು ಹೋಗಿದ್ದಾನೆ. ಈ ಹಿನ್ನಲೆಯಲ್ಲಿ ಜಯನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಇನ್ನೊಂದೆಡೆ ಜಾವೀದ್ ಖಾನ್ ಅನುಷಾಳಿಗೆ ಡ್ರಗ್ಸ್ ನೀಡಿ ಮದ್ಯ ಕುಡಿಸಿ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ಸಹ ಆಕೆಯ ಪೋಷಕರು ಆರೋಪಿಸಿದ್ದಾರೆ ಪೋಷಕರು ಕಿಡ್ನ್ಯಾಪ್ ಎಂದು ದೂರು ನೀಡಿದ್ದಾರೆ. ಆದರೆ ಅನುಷಾ ಸ್ವಂತ ಇಚ್ಛೆಯಿಂದ ಹೋಗಿರುವುದಾಗಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Shivamogga-based Hindu girl got married to a Muslim man from Mysuru. Parents of the girl have filed a police complaint saying she has been a victim of love jihad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ