ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಿಯಲ್ಲಿ ಧಮ್ ಹೊಡೆದ್ರೆ ಪರೀಕ್ಷೆ ಬರೆಯುವಂತಿಲ್ಲ

|
Google Oneindia Kannada News

ಮೈಸೂರು, ನ.4 : ಮೈಸೂರಿನ ಮಾನಸ ಗಂಗೋತ್ರಿ ಆವರಣವನ್ನು ತಂಬಾಕು ಮುಕ್ತಗೊಳಿಸಲು ವಿಶ್ವವಿದ್ಯಾಲಯ ತೀರ್ಮಾನ ಕೈಗೊಂಡಿದೆ. ಆವರಣದಲ್ಲಿರುವ ಅಂಗಡಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂದು ಖಡಕ್ ಎಚ್ಚರಿಕೆ ರವಾನಿಸಲಾಗಿದೆ. ಅಲ್ಲದೇ ವಿವಿ ಆವರಣದಲ್ಲಿ ನ.9ರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗುತ್ತದೆ.

ಗ್ರೀನ್ ಕ್ಯಾಂಪಸ್ ಯೋಜನೆಯ ಭಾಗವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗುತ್ತದೆ. ಉಪನ್ಯಾಸಕರಿಗೆ ಮತ್ತು ವಿವಿ ಸಿಬ್ಬಂದಿಗಳು ಧೂಮಪಾನ ಮಾಡಲು ಸ್ಮೋಕಿಂಗ್ ಝೋನ್ ಆರಂಭಿಸಲಾಗುತ್ತದೆ. ಉಳಿದ ಪ್ರದೇಶಗಳಲ್ಲಿ ತಂಬಾಕು ಬಳಕೆ ನಿಷೇಧಿಸಲಾಗುತ್ತದೆ.

Mysore University

ಮಾನಸ ಗಂಗೋತ್ರಿ ಆವರಣದಲ್ಲಿ ಹಲವಾರು ಅಂಗಡಿಗಳಿದ್ದು ಅವುಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಈಗಾಗಲೇ ವಿವಿ ನೋಟಿಸ್ ಜಾರಿಗೊಳಿಸಿದೆ. ಒಂದು ವೇಳೆ ಅಂಗಡಿಗಳಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. [ಹೊಗೆ ಬಿಟ್ಟರೆ 20 ಸಾವಿರ ರೂಪಾಯಿ ದಂಡ!]

ಕೆಲವು ಅಂಗಡಿಗಳ ಪರವಾನಿಗೆ ಅವಧಿ ಮುಕ್ತಾಯಗೊಂಡಿದ್ದು ಅವುಗಳನ್ನು ನವೀಕರಣ ಮಾಡದಿರಲು ವಿವಿ ನಿರ್ಧಾರ ಕೈಗೊಂಡಿದೆ. ವಿವಿಯ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡದಂತೆ ನಿಗಾ ವಹಿಸಲು ಎಲ್ಲಾ ವಿಭಾಗಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. [ಸಿಗರೇಟು ಸೇವನೆ ಇನ್ಮುಂದೆ ಜೇಬಿಗೂ ಹಾನಿಕರ!]

ಸಿಕ್ಕಿಬಿದ್ದರೆ ಪರೀಕ್ಷೆ ಬರೆಯುವಂತಿಲ್ಲ : ವಿವಿ ಆವರಣದಲ್ಲಿ ವಿದ್ಯಾರ್ಥಿಗಳು ತಂಬಾಕು ಬಳಕೆ ಮಾಡುವುದು ಮತ್ತು ಧೂಮಪಾನ ಮಾಡುವುದು ಕಂಡುಬಂದರೆ ಮೊದಲ ಮೂರು ಬಾರಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ನಾಲ್ಕನೇ ಬಾರಿ ಸಿಕ್ಕಿಬಿದ್ದರೆ. ಪರೀಕ್ಷೆ ಬರೆಯಲು ಅವಕಾಶ ನೀಡದಿರಲು ವಿವಿ ಚಿಂತನೆ ನಡೆಸಿದೆ.

ಸ್ವಚ್ಛತಾ ಅಭಿಯಾನ : ಮಾನಸ ಗಂಗೋತ್ರಿಯಲ್ಲಿ ನ.9ರಂದು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ವಿವಿ ಕುಲಪತಿ ಕೆ.ಎಸ್.ರಂಗಪ್ಪ ಅವರು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಮತ್ತು ನ.9ರಿಂದಲೇ ಜಾರಿಗೆ ಬರುವಂತೆ ವಿವಿ ಆವರಣದಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ತರಲಾಗುತ್ತದೆ.

English summary
Manasagangotri the postgraduate campus of the Mysuru University, will soon be declared a tobacco-free zone. A smoking zone will also be set up in the campus for staff and guest lecturers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X