ಮೊಬೈಲ್ ಫೋನ್ ಬದಲಿಗೆ ಬಂತು ದೋಸೆ ತವಾ

Posted By:
Subscribe to Oneindia Kannada

ಮೈಸೂರು, ನವೆಂಬರ್ 11: ಪದೇ -ಪದೇ ಆನ್ಲೈನ್ ವ್ಯವಹಾರದಲ್ಲಿ ದೋಖಾ ಕಂಡುಬರುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಮೈಸೂರಿನಲ್ಲಿ ನಡೆದ ಘಟನೆ ನಿದರ್ಶನವಾಗಿದೆ. ಆನ್ ಲೈನ್ ಶಾಪಿಂಗ್ ನಲ್ಲಿ ಬುಕ್ ಮಾಡಿದ್ದು ಮೊಬೈಲ್ ಫೋನ್, ಆದರೆ ಬಂದಿದ್ದು ಮಾತ್ರ ದೋಸೆ ತವಾ. ಬಾಕ್ಸ್ ಓಪನ್ ಮಾಡಿದಾಗ ತಲೆತಿರುಗೋದು ಮಾತ್ರ ಬಾಕಿ.

ಬಿಗ್ ಬಾಸ್ಕೆಟ್ ನಿಂದ ಬಂದ ಉದ್ದಿನ ಬೇಳೆ ಪ್ಯಾಕೆಟ್ ನಲ್ಲಿ ಸತ್ತ ಇಲಿ!

ಬೆಂಗಳೂರು ಮೂಲದ ಆರ್.ಕೆ.ಮಾರ್ಕೆಟಿಂಗ್ ಕಂಪನಿಗೆ ಮೈಸೂರಿನ ಸುಣ್ಣದಕೇರಿ ನಿವಾಸಿ ಸನತ್ ಕುಮಾರ್ ಎಂಬವರು ಆನ್ ಲೈನ್ ಶಾಫಿಂಗ್ ಮೂಲಕ ಮೊಬೈಲ್ ಬುಕ್ ಮಾಡಿದ್ದರು. ಯಾಕೆಂದರೆ 2300 ರೂ.ಗಳಿಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ ಸಿರೀಸ್ ಮೊಬೈಲ್ ಫೋನ್, ಗೃಹ ಬಳಕೆ ವಸ್ತುಗಳನ್ನು ನೀಡುವುದಾಗಿ ಆಫರ್ ಮಾಡಿದ್ದರು.

ಮಧುರ ಮಾತಿನ ಮಾನಿನಿಗೆ ಮರುಳಾಗಿ ಮೋಸಹೋಗಬೇಡಿ

Man books cellphone; receives dosa pan!

ಫೋನ್ ಮೂಲಕ ಸನತ್ ಅವರಿಗೆ ಆಫರ್ ನೀಡಿದ್ದರು. ಅದರಂತೆ ಆರ್ಡರ್ ಬುಕ್ ಮಾಡಿದ್ದರು. ಮೂರು ದಿನಗಳ ನಂತರ ಅಂಚೆ ಕಚೇರಿಯಲ್ಲಿ ಸನತ್ ಕುಮಾರ್ ಪಾರ್ಸೆಲ್ ತೆಗೆದುಕೊಂಡರು. ಪಾರ್ಸೆಲ್ ಬಿಚ್ಚಿ ನೋಡಿದಾಗ ಮೊಬೈಲ್ ಇರಲಿಲ್ಲ. ಬದಲಾಗಿ ದೋಸೆ ತವಾ, ತರಕಾರಿ ಕಟ್ ಮಾಡುವ ಯಂತ್ರ, ಜ್ಯೂಸ್ ಮೇಕರ್ ಮಾತ್ರ ಇದ್ದವು. ದೂರು ನೀಡಲು ಕರೆ ಮಾಡಿದರೆ ಕಂಪನಿ ಪ್ರತಿನಿಧಿ ಕಾಲ್ ರಿಸೀವ್ ಮಾಡುತ್ತಿಲ್ಲ. ಚಕ್ಕುಲಿ, ನಿಪ್ಪಟ್ಟು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸನತ್ ಕುಮಾರ್ ಈಗ 2300ರೂ ಕಳೆದುಕೊಂಡು ಕಂಗಾಲಾಗಿದ್ದಾರೆ. ಆನ್ ಲೈನ್ ಕಂಪನಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

Man books cellphone; receives dosa pan!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
True, he had booked a cellphone online. When he opened the box after the product was delivered him to on Sunday, he got a shock of his life. It turned out to be a dosa pan.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ