ಮೈಸೂರಿನ ನಂದಿ ಮೂರ್ತಿಗೆ ಮಹಾಮಸ್ತಕಾಭಿಷೇಕ ಸಂಭ್ರಮ

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಅಕ್ಟೋಬರ್ 24: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ಮೂರ್ತಿಗೆ ನಗರದ ಮೆಟ್ಟಿಲು ಹತ್ತುವ ಬಳಗದ ವತಿಯಿಂದ ಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಿತು.

ಚಾಮುಂಡೇಶ್ವರಿ ಬೆಟ್ಟದ ನಂದಿಯ ಬಣ್ಣ ಬದಲಾಗಿದ್ದರ ಅಸಲಿಯತ್ತು

ಕಾರ್ಯಕ್ರಮದಲ್ಲಿ 15 ಅಡಿ ಎತ್ತರದ ನಂದಿ ವಿಗ್ರಹಕ್ಕೆ ಮಸ್ತಕಾಭಿಷೇಕ ನಡೆಸಲಾಯಿತು. ನೂರಾರು ಜನರು ಈ ಮಹಾಸನ್ನಿವೇಶಕ್ಕೆ ಸಾಕ್ಷಿಯಾದರು. ಈ ಮಸ್ತಕಾಭಿಷೇಕ ಇದೀಗ 7ನೇ ವರ್ಷವನ್ನು ಪೂರೈಸಿದಂತಾಗಿದೆ. 50 ವರ್ಷಗಳಷ್ಟು ಹಳೆಯದಾದ ನಂದಿ ವಿಗ್ರಹಕ್ಕೆ ವಿವಿಧ ದ್ರವ್ಯಗಳಿಂದ ನಂದಿಗೆ ಅಭಿಷೇಕ ಮಾಡಲಾಯಿತು.

Mahamasthakabhisheka to 15 feet height Nandi Statue in Chamundi

ಈ ಬಾರಿಯ ಮಸ್ತಕಾಭಿಷೇಕವನ್ನು ದೇಶ ಕಾಯುವ ಯೋಧರಿಗೆ ಅರ್ಪಿಸಲಾಗಿದೆ .ಶ್ರೀಗಂಧ, ಅರಿಶಿನ, ಕುಂಕುಮ, ಬಿಲ್ವಪತ್ರೆ, ಹಾಲು, ಮೊಸರು, ಎಳನೀರು, ನಿಂಬೆರಸ ಸೇರಿದಂತೆ 48 ವಿವಿಧ ದ್ರವ್ಯಗಳಿಂದ ನಂದಿಗೆ ಅಭಿಷೇಕ ಮಾಡಲಾಯಿತು. ಆಲಯ ಪ್ರದಕ್ಷಿಣೆ,ಗಣಪತಿ ಹೋಮ, ಬ್ರಹ್ಮ ಪಂಚ ಕಳಸ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೇರವೇರಿಸಲಾಯಿತು. ಪ್ರತಿವರ್ಷ ಪ್ರಥಮ ಕಾರ್ತಿಕ ಸೋಮವಾರದಂದು ಮಸ್ತಕಾಭಿಷೇಕ ನಡೆಯಲಿದೆ.

Mahamasthakabhisheka to 15 feet height Nandi Statue in Chamundi

ಈ ಸಂದರ್ಭ ನೂರಾರು ಭಕ್ತರು ಪಾಲ್ಗೊಂಡು ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಸಿಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mahamasthakabhisheka to 15 feet height Nanadi Statue which situated in Nandi hills Mysuru has taken place on Oct 23rd in Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ