ಕಪಿಲ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಮಾರ್ಚ್,07: ಮದುವೆಯಾಗಲು ಮನೆಯವರ ವಿರೋಧ ಎದುರಾದ ಕಾರಣ ಹೆದರಿದ ಹಾಗೂ ಮನನೊಂದ ಪ್ರೇಮಿಗಳು ಕಪಿಲ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಸಿಂಧುವಳ್ಳಿ ಗ್ರಾಮದ ಮಹದೇವನಾಯಕರ ಪುತ್ರ ಶಿವನಾಗು (23) ಹಾಗೂ ಅದೇ ಗ್ರಾಮದ ನಿವಾಸಿ ನಿಂಗನಾಯಕರ ಪುತ್ರಿ ಜ್ಯೋತಿ (17) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಮೃತರ ಶವಗಳು ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸಮೀಪವಿರುವ ನದಿಯ ಸ್ನಾನಘಟ್ಟದ ಬಳಿ ಪತ್ತೆಯಾಗಿದೆ.[ಅಯ್ಯೋ ವಿಧಿಯೆ : ತಂದೆಯನ್ನು ಕೈಲಾಸಕ್ಕೆ ಕಳಿಸಿದ ಮಗನ ಕೈಸಾಲ]

Lovers commits suicide drown in the Kapila river, Mysuru

ಶಿವನಾಗು ಕಳೆದ ಎರಡು ವರ್ಷಗಳಿಂದ ಜ್ಯೋತಿ ಎಂಬಾಕೆಯನ್ನು ಪ್ರೀತಿಸುತ್ತಿದ್ದನು. ಆದರೆ ಆಕೆ ಇನ್ನೂ ಅಪ್ರಾಪ್ತೆಯಾಗಿದ್ದಳು. ಆಕೆಯೊಂದಿಗೆ 2014ರಲ್ಲಿ ಶಿವನಾಗು ನಾಪತ್ತೆಯಾಗಿದ್ದನು. ಈ ಸಂದರ್ಭ ಯುವತಿ ಮನೆಯವರು ನೀಡಿದ ದೂರಿನ ಮೇರೆಗೆ ಶಿವನಾಗನನ್ನು ಬಾಲಕಿ ಅಪಹರಣ ಹಾಗೂ ಅತ್ಯಾಚಾರದ ದೂರು ದಾಖಲಿಸಿ ಆತನನ್ನು ಜೈಲಿಗೆ ಹಾಕಲಾಗಿತ್ತು.

ಪ್ರಕರಣದ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಕಳೆದ ಆರು ತಿಂಗಳ ಹಿಂದೆಯಷ್ಟೆ ಜಾಮೀನಿನ ಮೇರೆಗೆ ಬಿಡುಗಡೆಯಾಗಿ ಬಂದಿದ್ದನು. ಆದರೆ ಆತನಿಗೆ ಜ್ಯೋತಿಯನ್ನು ಬಿಟ್ಟಿರಲು ಸಾಧ್ಯವಾಗಿರಲಿಲ್ಲ. ಆಗಾಗ್ಗೆ ಅವಳನ್ನು ಕದ್ದುಮುಚ್ಚಿ ಭೇಟಿ ಮಾಡುತ್ತಿದ್ದನು.[ಥಾಣೆ: ಕುಟುಂಬದ 14 ಜನರನ್ನು ಕೊಂದು ನೇಣಿಗೆ ಶರಣಾದ ವ್ಯಕ್ತಿ]

ಇದನ್ನು ನೋಡಿದ ಕೆಲವರು ಆಕೆಯನ್ನು ಮದುವೆಯಾಗಲು ಸಲಹೆ ನೀಡಿದ್ದರು ಆದರೆ ಆಕೆಗೆ 17ವರ್ಷ ಆಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಆದರೆ ಪ್ರೇಮಿಗಳಿಬ್ಬರು ಒಬ್ಬರನೊಬ್ಬರು ಬಿಟ್ಟಿರಲಾರದ ಸ್ಥಿತಿಗೆ ಬಂದು ತಲುಪಿದ್ದರು.

ಮಾ.4 ರಂದು ಶುಕ್ರವಾರ ಮನೆಯಿಂದ ಹೊರಬಿದ್ದ ಶಿವನಾಗು ಹಾಗೂ ಜ್ಯೋತಿ ವೇಲ್‍ ನಲ್ಲಿ ಕತ್ತು ಬಿಗಿದುಕೊಂಡು ಕಪಿಲ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಮೃತರ ಶವಗಳು ನಗರದ ಶ್ರೀ ಕಂಠೇಶ್ವರಸ್ವಾಮಿ ದೇವಾಲಯದ ಸಮೀಪವಿರುವ ನದಿಯ ಸ್ನಾನಘಟ್ಟದ ಬಳಿ ಪತ್ತೆಯಾಗಿದೆ.[ಮಂಡ್ಯದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು]

ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪಟ್ಟಣ ಠಾಣೆಯ ಪಿಎಸ್ಐ ವಿ. ಚೇತನ್ ಶ್ರೀಕಂಠೇಶ್ವರಸ್ವಾಮಿ ದೋಣಿ ನಡೆಸುವ ಸದಸ್ಯರ ಸಹಕಾರದೊಂದಿಗೆ ಮೃತ ದೇಹಗಳನ್ನು ನೀರಿನಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lovers Jyothi and Shivanaga committed suicide drowned in the Kapila river at Nanjangud, Mysuru on Saturday, March 5th.
Please Wait while comments are loading...