ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ ಕುಲಪತಿ ಹುದ್ದೆಗೆ ಹೊರ ರಾಜ್ಯಗಳಿಂದಲೂ ಅರ್ಜಿ ಸಲ್ಲಿಕೆ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜೂನ್ 5 : ಕಳೆದೊಂದು ವರುಷದಿಂದ ಮೈಸೂರು ವಿಶ್ವವಿದ್ಯಾಲಯಕ್ಕೆ ತಲೆನೋವಾಗಿ ಪರಿಣಮಿಸಿರುವುದು ಕುಲಪತಿ ಹುದ್ದೆ ಭರ್ತಿ ವಿಷಯ. ಖಾಲಿ ಇರುವ ಕುಲಪತಿ ಹುದ್ದೆಗೆ ಸದ್ಯ 80ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಅರ್ಜಿಗಳ ಪೈಕಿ ಹೊರರಾಜ್ಯಗಳಿಂದಲೂ ಅರ್ಜಿಗಳು ಬಂದಿರುವುದು ಕುತೂಹಲ ಮೂಡಿಸಿದೆ.

ಕಳೆದ ವರುಷ 2017ರ ಜ. 10ಕ್ಕೆ ಕುಲಪತಿ ಹುದ್ದೆ ತೆರವಾಗಿದ್ದು, ಒಂದೂವರೆ ವರ್ಷ ಪೂರ್ಣಗೊಂಡಿದೆ. ಅಂದಿನಿಂದಲೂ ಪ್ರಭಾರ ಕುಲಪತಿಗಳೇ ಅಧಿಕಾರ ನಡೆಸುತ್ತಿದ್ದಾರೆ. ಕುಲಪತಿ ನೇಮಕಕ್ಕಾಗಿ ರಚನೆಯಾಗಿರುವ ಶೋಧನಾ ಸಮಿತಿಯು ನೀಡಿದ ಪಟ್ಟಿಯನ್ನು ರಾಜ್ಯಪಾಲರು ಮೂರು ಬಾರಿ ತಿರಸ್ಕರಿಸಿದ್ದು, ನೇಮಕಾತಿ ಮುಂದೂಡುತ್ತಲೇ ಇತ್ತು.

ವಿಶ್ವದ ಟಾಪ್ 100 ವಿವಿ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿ ವಿಶ್ವದ ಟಾಪ್ 100 ವಿವಿ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿ

ಉನ್ನತ ಶಿಕ್ಷಣ ಇಲಾಖೆಯು ಕುಲಪತಿಗೆ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದ ಜಾಹೀರಾತಿಗೆ ಆಹ್ವಾನವನ್ನೂ ಮಾಡಿತ್ತು.

Lots of Application for candidates in the post of Mysuru Vice Chancellor

ಇದೀಗ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಉತ್ತರ ಭಾರತದ ವಿ.ವಿ.ಗಳಿಂದ ಹಿರಿಯ ಪ್ರಾಧ್ಯಾಪಕರು ಅರ್ಜಿ ಸಲ್ಲಿಸಿದ್ದಾರೆ. ಮೈಸೂರು ವಿ.ವಿ.ಯಿಂದ ಹೊರ ರಾಜ್ಯಗಳ ವಿ.ವಿ.ಗೆ ಅನೇಕರು ಕುಲಪತಿಗಳಾಗಿ ನೇಮಕಗೊಂಡಿದ್ದಾರೆ.

ಆದರೆ, ಮೈಸೂರು ವಿ.ವಿ.ಗೆ ಹೊರ ರಾಜ್ಯಗಳಿಂದ ಕುಲಪತಿಗಳಾಗಿರುವವರು ವಿರಳ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಸೇರಿದಂತೆ ಮದ್ರಾಸು ಪ್ರಾಂತ್ಯದ ಹಲವರು ಕುಲಪತಿಗಳಾಗಿದ್ದರು. ಆದರೆ, ಈಚಿನ ವರ್ಷಗಳಲ್ಲಿ ಹೊರ ರಾಜ್ಯದವರು ಕುಲಪತಿಗಳಾಗಿಲ್ಲ.

ಕುಲಪತಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವ ಶೋಧನಾ ಸಮಿತಿಯ ಸಭೆ ಶೀಘ್ರವೇ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯಪಾಲರಿಗೆ ಸಲ್ಲಿಸಲು ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

English summary
Last year, the head of the Mysore University was headed by the Chancellor. There are over 80 applications for the post of vacant chancellor. Out of these applications, petitions from outside states have also made it interesting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X