ಅಂತಾರಾಷ್ಟ್ರೀಯ ಯೋಗದಿನದಂದು ಗಿನ್ನಿಸ್ ಪಟ್ಟಿ ಸೇರಲಿದೆಯೇ ಮೈಸೂರು?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜೂನ್ 17 : ಅಂತಾರಾಷ್ಟ್ರೀಯ ಯೋಗ ದಿನಾಚರಣೆ (ಜೂನ್ 21 ) ಅಂಗವಾಗಿ ಗಿನ್ನಿಸ್ ದಾಖಲೆ ನಿರ್ಮಿಸಲು ಮೈಸೂರು ಜಿಲ್ಲಾಡಳಿತ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಇಂದು ಅರಮನೆ ಆವರಣದಲ್ಲಿ ತಾಲೀಮು ನಡೆಸಿತು.
ಲಾಂಗೆಸ್ಟ್ ಯೋಗ ಚೈನ್ ಪ್ರದರ್ಶನದಲ್ಲಿ ಗಿನ್ನಿಸ್ ದಾಖಲೆ ಮಾಡುವುದಕ್ಕೆ ಮೈಸೂರು ಅರಮನೆಯ ಆವರಣದಲ್ಲಿ ನಡೆದ ರಿಹರ್ನಸೆಲ್ ಮೈ ರೋಮಾಂಚನಗೊಳಿಸುತ್ತಿತ್ತು.

ಅರಮನೆಯ ಆವರಣದಲ್ಲಿ 12 ಸಾವಿರ ಚದರ ಅಡಿ ಸ್ಥಳದಲ್ಲಿ ಮೈಸೂರಿನ ಎಂಟು ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜು ಸೇರಿದಂತೆ 33 ಶಾಲಾ-ಕಾಲೇಜುಗಳ ಆರನೇ ತರಗತಿಯಿಂದ ಪಿಯುಸಿಯ ಸುಮಾರು 6001 ವಿದ್ಯಾರ್ಥಿಗಳು ಲಾಂಗೆಸ್ಟ್ ಯೋಗ ಚೈನ್ ಪ್ರದರ್ಶನ ನೀಡುವ ಮೂಲಕ ಗಿನ್ನಿಸ್ ದಾಖಲೆ ಮಾಡಲು ಪೂರ್ವಾಭ್ಯಾಸ ಮಾಡಿದರು.

Longest yoga chain rehearsal held at Mysuru Palace premise on June 17th

ಇದಕ್ಕಾಗಿ ಅರಮನೆ ಆವರಣದ ಮುಂಭಾಗ ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಗ್ಯಾಸ್ ಕಟರ್ ಬಳಸಿ ತೆರವುಗೊಳಿಸಲಾಗಿತ್ತು. ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳನ್ನು ಕರೆತರುವುದಕ್ಕೆ ವಾಹನದ ವ್ಯವಸ್ಥೆ, ವಾಹನಗಳ ನಿಲುಗಡೆ, ಕುಡಿಯುವ ನೀರು ಪೂರೈಕೆ, ಬಿಸ್ಕೆಟ್, ಬಾಳೆಹಣ್ಣು ವಿತರಣೆ ಮಾಡಲಾಯಿತು.

Longest yoga chain rehearsal held at Mysuru Palace premise on June 17th

ನಾಳೆ ರೇಸ್ ಕೋರ್ಸ್ ನಲ್ಲಿ ಪೂರ್ವಾಭ್ಯಾಸ: ಜೂನ್.21ರಂದು ಆಚರಿಸಲಾಗುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ಸಾಮೂಹಿಕ ಯೋಗ ಪ್ರದರ್ಶನ ನೀಡುವುದರೊಂದಿಗೆ ದಾಖಲೆ ನಿರ್ಮಿಸಲು ಅಗತ್ಯ ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ನಾಳೆ (ಭಾನುವಾರ) ರೇಸ್ ಕೋರ್ಸ್ ನಲ್ಲಿ ಪೂರ್ವಭ್ಯಾಸ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Mysuru district administration has decided to create a Guinness world record in longest yoga chain on International Yoga Day, June 21. A rehearsal held as a prelude to the Yoga Day at the Mysuru Palace premise on Saturday (June 17th) at 9:30 am
Please Wait while comments are loading...