ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡು: ತಲೆಎತ್ತಿದ ಅಕ್ರಮ ಕಟ್ಟಡ ತೆರವಿಗೆ ಏಕಾಂಗಿ ಹೋರಾಟ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು,ಫೆಬ್ರವರಿ,05: ಸಾರ್ವಜನಿಕರ ಓಡಾಟದ ಅನುಕೂಲಕ್ಕಾಗಿ ಇದ್ದ ರಸ್ತೆ ಬದಿ ಜಾಗದಲ್ಲಿ ಅಕ್ರಮ ವಾಣಿಜ್ಯ ಮಳಿಗೆ ನಿರ್ಮಿಸಲು ಮುಂದಾಗಿರುವುದನ್ನು ಖಂಡಿಸಿ ಜನ ಸಂಗ್ರಾಮ್ ಪರಿಷತ್ ಕಾರ್ಯಕರ್ತ ವಿಜಯಕುಮಾರ್ ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿ.ಎಂ,ಬಡಾವಣೆ ಹೊಂದಿಕೊಂಡಂತೆ ಇರುವ ಸರ್ವೇ ನಂ; 54/1 ರ ನಿವೇಶನವನ್ನು ವಸತಿ ಉದ್ದೇಶಕ್ಕೆ ಮೀಸಲಿಡಲಾಗಿತ್ತು. ಆ ಸ್ಥಳದಲ್ಲಿ ರಸ್ತೆಗಾಗಿ ಜಾಗ ಬಿಡಲಾಗಿತ್ತು. ಈ ಸ್ಥಳದಲ್ಲಿ ಮಳಿಗೆ ನಿರ್ಮಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಖಂಡಿಸಿದ್ದಾರೆ.[ಬೆಂಗಳೂರು: ಮತ್ತೆ ಒತ್ತುವರಿ ತೆರವಿಗಿಳಿದ ಡಿಸಿ ಶಂಕರ್]

Nanjangud

ಈಗಾಗಲೇ ಕಟ್ಟಡವು ಪೂರ್ಣವಾಗವ ಹಂತಕ್ಕೆ ಬಂದಿದೆ. ಈ ಬಗ್ಗೆ ಹಲವು ಬಾರಿ ಈ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗೆ ಅಧಿಕಾರಿ, ಅಧ್ಯಕ್ಷರ ಗಮನಕ್ಕೆ ತಂದರೂ ಕ್ರಮ ಜರುಗಿಸಿಲ್ಲ ಎಂದು ಪ್ರತಿಭಟನಾಕಾರ ವಿಜಯಕುಮಾರ್ ಆರೋಪಿಸಿದ್ದಾರೆ.[ಕೆರೆ ಒತ್ತುವರಿ ಸಂತ್ರಸ್ತರಿಗೆ ಸಿದ್ಧವಾಗಿದೆ 400 ಮನೆಗಳು]

ಕೂಡಲೇ ಕ್ರಮ ಜರುಗಿಸದೇ ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಲಾಗುವುದು ಎಂದು ಎಚ್ಚರಿಕೆಯ ಮನವಿಯನ್ನು ಸಲ್ಲಿಸಿದ್ದಾರೆ. ಮನವಿ ಸ್ವೀಕರಿಸಿ ಮಾತನಾಡಿದ ತಾಪಂ ಯೋಜನಾಧಿಕಾರಿ ಶಿವಮ್ಮ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.

English summary
Jana Sangram Parishath Worker Vijay Kumar take Lonely protest against the evacuation of the illegal building in Nanjangud, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X