ಮೈಸೂರು ದಸರಾಕ್ಕೆ ಲಾಂಛನ ಕಳಿಸಿ, ಬಹುಮಾನ ಗೆಲ್ಲಿ

Posted By:
Subscribe to Oneindia Kannada

ಮೈಸೂರು, ಆಗಸ್ಟ್ 10 : 2016ನೇ ಸಾಲಿನ ಮೈಸೂರು ದಸರಾ ಆಚರಣೆಗೆ ಸಿದ್ಧತೆಗಳು ಆರಂಭಗೊಂಡಿವೆ. ದಸರಾದ ಲಾಂಛನವನ್ನು ರಚಿಸಲು ಕಲಾವಿದರು ಮತ್ತು ಜನರಿಗೆ ಅವಕಾಶ ನೀಡಲಾಗಿದೆ. ಆಯ್ಕೆಯಾದ ಲಾಂಛನಕ್ಕೆ 5 ಸಾವಿರ ರೂ. ಬಹುಮಾನ ನೀಡಲಾಗುತ್ತದೆ.

ದಸರಾ ಲಾಂಛನದಲ್ಲಿ ಇರಬೇಕಾದ ಸಾಮಾನ್ಯ ಅಂಶ ಅಂಬಾರಿ ಮತ್ತು ಕಮಾನು. ಸಿದ್ಧಪಡಿಸಿದ ಲಾಂಛನವನ್ನು ಜನರು ಆಗಸ್ಟ್ 14ರೊಳಗೆ mysurudasara2016@gmail.com ಗೆ ಕಳುಹಿಸಬಹುದಾಗಿದೆ. ಲಾಂಛವನ್ನು JPEG ಮಾದರಿಯಲ್ಲಿ ಕಳಿಸಬೇಕು.[ಅಕ್ಟೋಬರ್ 11ರಂದು ಜಂಬೂ ಸವಾರಿ]

Logo invited for Mysuru Dasara 2016

ಆಯ್ಕೆಗೊಂಡ ಲಾಂಛನದ ಮೂಲಕ ಡಿಸೈನ್, ವರ್ಕಿಂಗ್ ಫೈಲ್, ಫಾಂಟ್ ಹಾಗೂ ಸಂಬಂಧಪಟ್ಟ ಇತರ ವಿವರಗಳನ್ನು ದಸರಾ ಆಚರಣೆ ಸಮಿತಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9632178633.[ಹಸಿರು ಬೆಳೆಸಿ, ನೀರು ಉಳಿಸಿ : ಇದು ಮೈಸೂರು ದಸರಾ ಥೀಮ್]

ಅಕ್ಟೋಬರ್ 11ಕ್ಕೆ ಜಂಬೂ ಸವಾರಿ : ಈ ಬಾರಿಯ ಮೈಸೂರು ದಸರಾ ಅಕ್ಟೋಬರ್ 1 ರಿಂದ 11ರ ತನಕ ನಡೆಯಲಿದೆ. ಅಕ್ಟೋಬರ್ 1 ರಂದು 11.40ಕ್ಕೆ ದಸರಾವನ್ನು ಖ್ಯಾತ ಕವಿ ಚನ್ನವೀರ ಕಣವಿ ಉದ್ಘಾಟಿಸಲಿದ್ದಾರೆ. 11 ನೇ ದಿನ ಅಂದರೆ ಅಕ್ಟೋಬರ್ 11ರಂದು ಜಂಬೂ ಸವಾರಿ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Invited design logo for Mysuru Dasara 2016. Earn recognition and win cash prize of Rs 5000. August 14, 2016 last date for submitting your design.
Please Wait while comments are loading...