ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಕ್ ರಾವ್ ಹತ್ಯೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಕೈವಾಡ: ಎಚ್ಡಿಕೆ

|
Google Oneindia Kannada News

Recommended Video

ದೀಪಕ್ ರಾವ್ ಹತ್ಯೆಯಲ್ಲಿ ಬಿಜೆಪಿ ಕೈವಾಡ ಇದೆ ಎಂದು ಆರೋಪಿಸಿದ ಎಚ್ ಡಿ ಕುಮಾರಸ್ವಾಮಿ | Oneindia Kannada

ಮೈಸೂರು, ಜನವರಿ 8: ಮಂಗಳೂರಿನಲ್ಲಿ ನಡೆದ ದೀಪಕ್ ರಾವ್ ಹತ್ಯೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, "ದಿಲೀಪ್ ರಾವ್ ಹತ್ಯೆ ಪ್ರಕರಣದಲ್ಲಿ ನಾಲ್ವರನ್ನ ಬಂಧಿಸಲಾಗಿದೆ. ಆ ನಾಲ್ವರಿಗೆ ಸುಪಾರಿ ಕೊಟ್ಟವರು ಯಾರೂ ಎಂಬುದನ್ನ ಸರ್ಕಾರಕ್ಕೆ ಪತ್ತೆ ಮಾಡಲು ಆಗಿಲ್ಲವೇ? ಮಾಹಿತಿ ಪ್ರಕಾರ, ಒಬ್ಬ ಸ್ಥಳೀಯ ಕಾರ್ಪೊರೇಟರ್ ಕೈವಾಡವಿದೆ" ಎಂದು ಹೇಳಿದರು.

 ತನಿಖೆ ಬಳಿಕ ದೀಪಕ್ ರಾವ್ ಕೊಲೆ ಹಿಂದಿನ ರಹಸ್ಯ ಬಯಲು: ಎಡಿಜಿಪಿ ಕಮಲ್ ಪಂತ್ ತನಿಖೆ ಬಳಿಕ ದೀಪಕ್ ರಾವ್ ಕೊಲೆ ಹಿಂದಿನ ರಹಸ್ಯ ಬಯಲು: ಎಡಿಜಿಪಿ ಕಮಲ್ ಪಂತ್

ದೀಪಕ್ ರಾವ್ ಹತ್ಯೆಗೆ ಬಿಜೆಪಿ ನಾಯಕರೇ ಕಾರಣ ಎಂಬ ಮಾಹಿತಿ ಇದೆ. ಸತ್ಯ ಹೊರಗಡೆ ಇಡಲು ಈ ಸರ್ಕಾರಕ್ಕೆ ಏನು ಕಷ್ಟ? ಬಿಜೆಪಿ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದ್ದಾರಾ? ದಿಲೀಪ್ ರಾವ್ ತಾಯಿಯ ಗೋಳು ಇವರಿಗೆ ಅರ್ಥವಾಗುತ್ತಿದ್ದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

local BJP corporator involved in the Mangaluru Deepak Rao murder

ಪ್ರಕರಣ ತನಿಖೆ ಮಾಹಿತಿಯನ್ನ ನಾನು ಪಡೆದೆ ಮಾತನಾಡುತ್ತಿದ್ದೇನೆ. ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಸತ್ಯ ಹೇಳಿದ್ದಾರೆ. ಆದರೂ ಸರ್ಕಾರ ಮೌನ ವಹಿಸಿ ಕುಳಿತಿದೆ. ನಾವು ಉರಿಯುವ ಮನೆಗೆ ತುಪ್ಪ ಸುರಿಯುವುದಿಲ್ಲ.

ರಾಷ್ಟ್ರೀಯ ಪಕ್ಷಗಳಿಗೆ ಕರಾವಳಿಯಲ್ಲಿ ಶಾಂತಿ ಬೇಕಾಗಿಲ್ಲ. ಆದರೆ, ಜೆಡಿಎಸ್ ಗೆ ಅಲ್ಲಿ ಶಾಂತಿ ನೆಲಸಬೇಕಿದೆ ಎಂದರು. ಮಂಗಳೂರಿನ ಕಾಟಿಪಳ್ಳದಲ್ಲಿ ಜನವರಿ 3ರಂದು ದೀಪಕ್ ರಾವ್ ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಸಂಬಂಧ ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಕುಮಾರಸ್ವಾಮಿ ಅವರ ಈ ಹೇಳಿಕೆಯನ್ನು ರಾಜ್ಯ ಬಿಜೆಪಿ ನಾಯಕರು ತಳ್ಳಿಹಾಕಿದ್ದಾರೆ. ಸುಳ್ಳು ಹೇಳಿವುದರಲ್ಲಿ ಕುಮಾರಸ್ವಾಮಿ ನಿಸ್ಸೀಮ ಎಂದು ವಾಗ್ದಾಳಿ ನಡೆಸಿದರು. ಇನ್ನು ಚಿಕ್ಕಮಂಗಳೂರು ಶಾಸಕ ಸಿ.ಟಿ ರವಿ ಕೂಡ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

English summary
HD Kumaraswamy makes serious allegations in Deepak Rao's murder, alleges BJP corporator involved in the murder Kumaraswamy said in Mysuru today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X